Wednesday, 20th March 2019

Recent News

7 hours ago

ಜಾಮೀನು ನಿರಾಕರಣೆ – ಮಾ.29ರವರೆಗೂ ಪೊಲೀಸ್ ಕಸ್ಟಡಿಗೆ ನೀರವ್ ಮೋದಿ

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಪರಾರಿಯಾಗಿ ಲಂಡನ್ ಪೊಲೀಸರಿಂದ ಬಂಧನವಾಗಿದ್ದ ಉದ್ಯಮಿ ನೀರವ್ ಮೋದಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ನೀರವ್ ಮೋದಿಯನ್ನು ಲಂಡನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ನ್ಯಾಯಾಲಯಕ್ಕೆ ಇಂದು ಹಾಜರು ಪಡಿಸಲಾಗಿತ್ತು. ಈ ವೇಳೆ ನೀರವ್ ಮೋದಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಪರಿಣಾಮ ಮಾರ್ಚ್ 29ರವರೆಗೂ ನೀರವ್ ಮೋದಿ ಪೊಲೀಸ್ ಕಸ್ಟಡಿಯಲ್ಲೇ ಉಳಿಯಲಿದ್ದಾರೆ. ಮಂಗಳವಾರ ಲಂಡನ್ ಕೇಂದ್ರ ಭಾಗದಲ್ಲಿರುವ ಹೋಲ್ಬಾರ್ನ್ ಮೆಟ್ರೋ ನಿಲ್ದಾಣದಲ್ಲಿ ನೀರವ್ ಮೋದಿಯನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ […]

5 days ago

100 ರೂ. ದಂಡ ಕಟ್ಟಿ ಬಿಡುಗಡೆಯಾದ ಶಾಸಕ ಗೂಳಿಹಟ್ಟಿ ಶೇಖರ್

ಬೆಂಗಳೂರು: ಚೆಕ್ ಬೌನ್ಸ್ ಆರೋಪ ಎದುರಿಸುತ್ತಿದ್ದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪೊಲೀಸರ ವಶಕ್ಕೆ ನೀಡಿ, ಬಳಿಕ ಬಿಡುಗಡೆ ಮಾಡಿದೆ. ಜಾಮೀನು ರಹಿತ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಶಾಸಕರನ್ನು ವಶಕ್ಕೆ ಪಡೆಯುವಂತೆ...

ಪಾಕ್‍ಗೆ ಜಿಂದಾಬಾದ್ ಎಂದಿದ್ದ ಯುವಕನ ಪರ ವಕಲತ್ತು ವಹಿಸದಿರಲು ನಿರ್ಧಾರ

3 weeks ago

ಬಳ್ಳಾರಿ: ಪುಲ್ವಾಮಾ ದಾಳಿಯಾದ ಬಳಿಕ ಪಾಕಿಸ್ತಾನ ಜಿಂದಾಬಾದ್ ಎಂದು ಪೋಸ್ಟ್ ಹಾಕಿ ಬಂಧನವಾಗಿರುವ ಯುವಕರ ಪರ ನ್ಯಾಯಾಲಯದಲ್ಲಿ ವಾದ ಮಾಡದೆ ಇರಲು ನ್ಯಾಯಾವಾದಿಗಳ ಸಂಘ ತೀರ್ಮಾನ ಮಾಡಿದೆ. ದೇಶದ್ರೋಹಿ ಪೊಸ್ಟ್ ಹಾಕಿದ ಯುವಕನ ಪರವಾಗಿ ವಕಲತ್ತು ಮಾಡದಿರಲು ಹೂವಿನಹಡಗಲಿ ನ್ಯಾಯವಾದಿಗಳು ನಿರ್ಧಾರ...

ಅಭಿನಂದನ್ ಬಿಡುಗಡೆ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪಾಕ್ ಕಾರ್ಯಕರ್ತರು

3 weeks ago

ಇಸ್ಲಾಮಾಬಾದ್: ಭಾರತೀಯ ವಾಯು ಪಡೆಯ ಪೈಲಟ್ ಅಭಿನಂದನ್ ಅವರ ಬಿಡುಗಡೆ ವಿರೋಧಿಸಿ ಪಾಕಿಸ್ತಾನದ ಕೆಲ ಸಂಘಟನೆಯ ಕಾರ್ಯಕರ್ತರು ಪಾಕ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪಾಕಿಸ್ತಾನದ ಬಂಧನಲ್ಲಿರುವ ಪೈಲಟ್ ಅಭಿನಂದನ್ ಅವರನ್ನು ಇಂದು ಮಧ್ಯಾಹ್ನ ಬಿಡುಗಡೆ ಮಾಡಲು ಪಾಕಿಸ್ತಾನ ಸರ್ಕಾರ ಗುರುವಾರ ಸಂಜೆ...

ಹಾಸನ ಲೋಕೋಪಯೋಗಿ ಇಲಾಖೆ ಜಪ್ತಿಗೆ ಆದೇಶ – ಕಚೇರಿ ಹೊರಗೆ ನಿಂತ ಸಿಬ್ಬಂದಿ

4 weeks ago

ಹಾಸನ: ರೈತರ ಪರಿಹಾರ ಹಣ ಪಾವತಿಸದ ಕಾರಣ ಹೊಳೆನರಸೀಪುರದ ಕೋರ್ಟ್ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ. ನಗರದ ಎನ್.ಆರ್ ವೃತ್ತದ ಬಳಿ ಇರುವ ಲೋಕೋಪಯೋಗಿ ಇಲಾಖೆಯನ್ನು ಜಪ್ತಿ ಮಾಡಲಾಗಿದೆ. ಸ್ವತಃ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ನವರ...

ನ್ಯಾಯಾಲಯದಿಂದ ರಿಲೀಫ್: ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಎಸ್‍ವೈ

4 weeks ago

ಬೀದರ್: ಆಪರೇಷನ್ ಕಮಲ ಆಡಿಯೋ ಪ್ರಕರಣದಿಂದ ಸ್ವಲ್ಪ ರಿಲೀಫ್ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲು...

ಬಿಎಸ್‍ವೈ ಬೆನ್ನಲ್ಲೇ ಡಿಕೆಶಿಗೂ ತಾತ್ಕಾಲಿಕ ರಿಲೀಫ್

4 weeks ago

ಬೆಂಗಳೂರು: ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ ಬೆನ್ನಲ್ಲೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೂ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ. ಜಾರಿ ನಿರ್ದೇಶನಾಲಯ ಸಮನ್ಸ್ ರದ್ದು ಕೋರಿ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೊರೆ...

ಕಂಪ್ಲಿ ಗಣೇಶ್‍ ಜೈಲಿಗೆ: ಕೋರ್ಟ್ ಕಲಾಪದಲ್ಲಿ ಏನಾಯ್ತು?

4 weeks ago

ಬೆಂಗಳೂರು: ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದ ಆರೋಪಿ, ಶಾಸಕ ಕಂಪ್ಲಿ ಗಣೇಶ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧಮ ವಿಧಿಸಿ ರಾಮನಗರದ ಸಿಜೆಎಂ ಕೋರ್ಟ್ ಆದೇಶ ನೀಡಿದೆ. ಗುಜರಾತಿನ ಸೋಮನಾಥಪುರದಲ್ಲಿ ಬಂಧನಕ್ಕೆ ಒಳಗಾಗಿದ್ದ ಗಣೇಶ್ ಅವರನ್ನು...