Friday, 22nd March 2019

Recent News

6 days ago

ಬರೋಬ್ಬರಿ 10 ವರ್ಷಗಳ ನಂತ್ರ ಬಾಲಿವುಡ್ ಲೆಜೆಂಡ್ ಜೊತೆ ಕಿಚ್ಚ

ಬೆಂಗಳೂರು: ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಬರೋಬ್ಬರಿ 10 ವರ್ಷಗಳ ನಂತರ ಬಾಲಿವುಡ್ ಲೆಜೆಂಡ್, ಬಿಗ್-ಬಿ ಅಮಿತಾಬ್ ಬಚ್ಚನ್ ಅವರ ಜೊತೆ ಬೆಳ್ಳಿ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಅಮಿತಾಬ್ ಬಚ್ಚನ್, ತಮಿಳು ನಟ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಸುದೀಪ್ ಅವರು ಅಮಿತಾಬ್ ಬಚ್ಚನ್ ಜೊತೆ ಫೋಟೋ ತೆಗೆದುಕೊಂಡು ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ಸುದೀಪ್ […]

1 week ago

ಯಾರದ್ದೋ ಸಕ್ಸಸ್ ನೋಡಿ ಸಿನಿಮಾ ಫೀಲ್ಡ್‌ಗೆ ಧುಮುಕಬೇಡಿ: ಕಿಚ್ಚ ಸುದೀಪ್

ಬೆಂಗಳೂರು: ಯಾರದ್ದೋ ಸಕ್ಸಸ್‍ನ ನೋಡಿ ಸಿನಿಮಾ ಫೀಲ್ಡ್‌ಗೆ ಧುಮುಕಬೇಡಿ. ನಿಮ್ಮೊಳಗೆ ಫ್ಯಾಷನ್ ಎನ್ನುವುದು ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ನಗರದಲ್ಲಿ ಯತೀರಾಜ್ ಸಾರಥ್ಯದ ಕಲಾವಿದ ಫಿಲಂ ಅಕಾಡೆಮಿಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ನೀವು ನಿಮ್ಮನ್ನು ಪ್ರೀತಿಸುವುದನ್ನು ಮೊದಲು ಕಲಿಯಿರಿ. ಮೊದಲು ನೀವು ನಿಮ್ಮ ಬಗ್ಗೆ ಯೋಚನೆ...

ನಿಮಗೆ ಮುಂದೆ ಇನ್ನಷ್ಟು ಒಳ್ಳೆಯ ಸಮಯ ಕಾದಿದೆ: ಪ್ರಿಯಾ ಸುದೀಪ್

2 months ago

ಬೆಂಗಳೂರು: ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 23 ವರ್ಷಗಳನ್ನು ಪೂರೈಸಿದ್ದಾರೆ. 23 ವರ್ಷ ಪೂರೈಸಿದಕ್ಕೆ ಅಭಿಮಾನಿಗಳು ಹಾಗೂ ಕನ್ನಡ ಸೇರಿದಂತೆ ಬೇರೆ ಚಿತ್ರರಂಗದ ಕಲಾವಿದರು ಸುದೀಪ್ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಹಾಗೆಯೇ ಸುದೀಪ್ ಅವರ ಪತ್ನಿ ಪ್ರಿಯಾ ಕೂಡ ತಮ್ಮ ಪತಿಗೆ ಪ್ರೀತಿಯ...

ಸಲ್ಮಾನ್ ಖಾನ್‍ಗೆ ವಿಲನ್ ಆದ ಕಿಚ್ಚ ಸುದೀಪ್..!

2 months ago

ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ನಟನೆ ‘ದಬಾಂಗ್ 3’ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಲನ್ ಆಗಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ನಟನೆಯ ದಬಾಂಗ್ ಹಾಗೂ ದಬಾಂಗ್ -2 ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಯಶಸ್ಸು ಕಂಡ ಸಿನಿಮಾಗಳು. ಈಗ ಈ ಸಿನಿಮಾದ...

ಬಿಗ್ ಬಾಸ್ ಮನೆಯಲ್ಲಿ ಐಟಿ ದಾಳಿಯ ಬಗ್ಗೆ ಕಿಚ್ಚನ ಮಾತು

2 months ago

ಬೆಂಗಳೂರು: ಸ್ಯಾಂಡಲ್‍ವುಡ್ ಸಿನಿಮಾ ನಟ, ನಿರ್ಮಾಪರ ಮೇಲೆ ಐಟಿ ದಾಳಿಯ ಬಗ್ಗೆ ನಟ ಸುದೀಪ್ ಬಿಗ್ ಬಾಸ್ ಮನೆಯಲ್ಲೂ ಮಾತನಾಡಿದ್ದು, ಐಟಿ ದಾಳಿಯ ವೇಳೆ ಮನೆಯಲ್ಲೇ ಇದ್ದ ಅನುಭವದ ಬಗ್ಗೆ ಮಾತನಾಡಿ ಅನಿಸಿಕೆ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ಉದ್ಯಮದ ಪಾಲಿಗೆ ಕರಾಳ...

ಐಟಿ ತನಿಖೆ ಮುಗಿಸಿ ಬಿಗ್ ಬಾಸ್ ಮನೆಗೆ ತೆರಳಿದ ಕಿಚ್ಚ

3 months ago

ಬೆಂಗಳೂರು: ಸತತ ಎರಡು ದಿನಗಳ ಐಟಿ ಪರಿಶೋಧದ ಬಳಿಕ ಕಿಚ್ಚ ಸುದೀಪ್ ಈಗ ಬಿಗ್ ಬಾಸ್ ಶೂಟಿಂಗ್ ಗೆ ತೆರಳಿದ್ದಾರೆ. ಸುದೀಪ್ ಇಂದು ಬೆಳ್ಳಬೆಳಗ್ಗೆ 5.30ಕ್ಕೆ ಬಿಗ್ ಬಾಸ್ ಶೂಟಿಂಗ್ ಸ್ಪಾಟ್ ಗೆ ತೆರಳಿದ್ದಾರೆ. ಸುದೀಪ್ ಮನೆಯಲ್ಲಿ ಕೊಂಚ ರೆಸ್ಟ್ ಮಾಡಿ...

ಸುದೀಪ್ ಮನೆಯಲ್ಲಿ ಐಟಿ ರೇಡ್ ಅಂತ್ಯ- ಬೆಳಗ್ಗೆ ತೆರಳಿದ ಬಳಿಕ ಮತ್ತೆ ಅಧಿಕಾರಿಗಳು ಆಗಮಿಸಿದ್ದು ಯಾಕೆ?

3 months ago

ಬೆಂಗಳೂರು: ಕಿಚ್ಚ ಸುದೀಪ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಪರಿಶೀಲನೆ ಅಂತ್ಯಗೊಂಡಿದೆ. ಐಟಿ ಅಧಿಕಾರಿಗಳು ಸತತ 47 ಗಂಟೆಯವರೆಗೆ ಸುದೀಪ್ ಮನೆಯಲ್ಲಿ ಪರಿಶೀಲನೆ ನಡೆಸಿ ಇಂದು ಬೆಳಗಿನ ಜಾವ 5.30ಕ್ಕೆ ತೆರಳಿದ್ದಾರೆ. ಸುದೀಪ್ ಮನೆಯಿಂದ ಕೆಲವು ದಾಖಲೆಗಳು, ಕಾಗದ...

ಐಟಿ ಅಧಿಕಾರಿಗಳ ಬಳಿ ಕಿಚ್ಚ ಸುದೀಪ್ ಮನವಿ

3 months ago

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇಂದು ಕೂಡ ಶೋಧ ಮುಂದುವರಿದಿದೆ. ಕಿಚ್ಚ ಸುದೀಪ್ ಅವರ ಜೆ.ಪಿ ನಗರ ನಿವಾಸದಲ್ಲೂ ದಾಳಿ ಮುಂದುವರಿದಿದ್ದು, ಪರಿಶೀಲನೆಯನ್ನು ಬೇಗ ಮುಗಿಸುವಂತೆ ಅಧಿಕಾರಿಗಳ ಬಳಿ ಮನವಿ...