Monday, 17th June 2019

3 weeks ago

ಸಂಸದೆ ಸುಮಲತಾಗೆ ಕಿವಿಮಾತು ಹೇಳಿದ ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಮಂಡ್ಯದ ನೂತನ ಸಂಸದೆಯಾಗಿ ಸುಮಲತಾ ಅಂಬರೀಶ್ ಆಯ್ಕೆಯಾಗಿದ್ದು, ಜೆಡಿಎಸ್ ಕೆಲ ಶಾಸಕರು ಜಾಣತನದಿಂದ ಕಾವೇರಿ ನೀರಿನ ಜವಾಬ್ದಾರಿಯನ್ನು ಸುಮಲತಾರ ಹೆಗಲಿಗೆ ವರ್ಗಾಯಿಸಿದ್ದಾರೆ. ಇತ್ತ ನೂತನ ಸಂಸದೆಯಾಗಿರುವ ಸುಮಲತಾ ಸಹ ಯಾರಿಂದನೂ ಹೇಳಿಸಿಕೊಂಡು ಕೆಲಸ ಮಾಡೋದು ನನ್ನ ಜಾಯಮಾನವಲ್ಲ. ಮಂಡ್ಯ ರೈತರ ಅಭಿವೃದ್ಧಿಯೇ ನನ್ನ ಮೊದಲ ಕರ್ತವ್ಯ ಎಂದು ತಿರುಗೇಟು ನೀಡಿದ್ದಾರೆ. ರೈತರಿಗೆ ಕಾವೇರಿ ವಿಚಾರದಲ್ಲಿ ಸರ್ಕಾರ ಹಾಗೂ ಸುಮಲತಾ ಸಂಘರ್ಷ ಮುಂದುವರಿಯುವ ಭೀತಿ ಉಂಟಾಗಿದ್ದು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೊಸ ಎಂಪಿಎ ಕಿವಿಮಾತು ಹೇಳಿದ್ದಾರೆ. […]

3 weeks ago

ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಿ – ಕರ್ನಾಟಕಕ್ಕೆ ಸಿಡಬ್ಲ್ಯೂಸಿ ಆದೇಶ

ನವದೆಹಲಿ: ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಸಿ) ಆದೇಶ ನೀಡಿದೆ. ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ಕಾವೇರಿ ಕೊಳ್ಳದ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು. ಸಭೆಯ ಬಳಿಕ ಜೂನ್ ತಿಂಗಳಲ್ಲಿ ಬಿಡಬೇಕಾಗಿರುವ 9.19 ಟಿಎಂಸಿ ನೀರನ್ನು ಬಿಡುಗಡೆ...

ಕಾವೇರಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್-1,016 ಹೋರಾಟಗಾರರು ಪ್ರಕರಣದಿಂದ ಖುಲಾಸೆ

4 months ago

ಬೆಂಗಳೂರು: ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ಕಾವೇರಿ ಹೋರಾಟಗಾರರಿಗೆ ಸಂತಸದ ಸುದ್ದಿ ನೀಡಿದ್ದು, ಕಾವೇರಿ ನದಿ ನೀರಿನ ವಿಷಯವಾಗಿ ನಡೆದ ಪ್ರತಿಭಟನೆಗಳಲ್ಲಿ ದಾಖಲಾಗಿದ್ದ 51 ಪಕ್ರರಣಗಳನ್ನ ಹಿಂಪಡೆದಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಮಾಹಿತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ...

ಪುರಾತನ ಲಿಂಗಕ್ಕಾಗಿ ಕಾವೇರುತ್ತಿದೆ ಜೀವನದಿ ತವರು..!

6 months ago

ಮಡಿಕೇರಿ: ಕನ್ನಡಿಗರ ಪಾಲಿನ ಅನ್ನದಾತೆ. ಕೊಡಗಿನ ಜನರ ಕುಲದೇವತೆ ಜೀವನದಿ ಕಾವೇರಿಯ ಹುಟ್ಟು ನೆಲ ಈಗ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಡೆದ ಬೆಳವಣಿಗೆಯೊಂದು ಭಕ್ತರು ಮತ್ತು ದೇವಾಲಯ ಆಡಳಿತ ಮಂಡಳಿ ನಡುವಿನ ಜಿದ್ದಿಗೆ ಕಾರಣವಾಗಿದೆ. ಜೀವನದಿ ಕಾವೇರಿ ತವರಲ್ಲಿ ನೂರಾರು ವರ್ಷ...

ಕಾವೇರಮ್ಮನ ಮಡಿಲಿಗೆ ಅಂಬಿ – ಶ್ರೀರಂಗಪಟ್ಟಣದ ಸಂಗಮದಲ್ಲಿ ಅಭಿಯಿಂದ ಅಸ್ಥಿ ವಿಸರ್ಜನೆ

7 months ago

– ದರ್ಶನ್, ರಾಕ್‍ಲೈನ್, ದೊಡ್ಡಣ್ಣ ಸೇರಿ ಹಲವರು ಭಾಗಿ ಮಂಡ್ಯ: ಮಂಡ್ಯದ ಗಂಡು ಅಂಬರೀಶ್ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದಲ್ಲಿರುವ ಸಂಗಮದಲ್ಲಿ ವಿಸರ್ಜನೆ ಮಾಡಲಾಗಿದೆ. ಮೂರು ಮಡಿಕೆಗಳಲ್ಲಿದ್ದ ಅಸ್ಥಿಯನ್ನು ಶಾಸ್ತ್ರೋಕ್ತವಾಗಿ ಪುತ್ರ ಅಭಿಷೇಕ್ ವಿಸರ್ಜನೆ ಮಾಡಿದರು. ಒಟ್ಟು ಆರು ಮಡಿಕೆಗಳಲ್ಲಿ ಅಂಬರೀಶ್ ಅಸ್ಥಿಯನ್ನ...

ಅವರು ದೊಡ್ಡ ಜನ, ದೊಡ್ಡವರು; ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ: ರೆಡ್ಡಿಗೆ ಡಿಕೆಶಿ ಟಾಂಗ್

7 months ago

ಬೆಂಗಳೂರು: ಅವರು ದೊಡ್ಡ ಜನ, ದೊಡ್ಡವರು, ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದ್ದಾರೆ. ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಬುಧವಾರದಂದು...

ನಮಗೆ ನಷ್ಟವಾದರೂ, ಲಾಭವಾದರೂ ತಮಿಳುನಾಡಿಗೆ ನೀರು ಬೇಕು – ಇದು ಯಾವ ನ್ಯಾಯ: ಸಿಎಂಗೆ ಭೈರಪ್ಪ ಪತ್ರ

7 months ago

ಮೈಸೂರು: ಕೊಡಗು ಜಲಪ್ರಳಯದ ಕುರಿತು ತಮಿಳುನಾಡು ಸರ್ಕಾರ ಮೌನ ಧೋರಣೆ ತೋರಿಸಿದ್ದಕ್ಕೆ ಕಾದಂಬರಿಕಾರ ಹಾಗೂ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಕಿಡಿಕಾರಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಅವರು ಕಾವೇರಿ ನೀರಿಗಾಗಿ ಪ್ರತಿ ವರ್ಷವೂ ಒಂದಿಲ್ಲೊಂದು ರೀತಿಯಲ್ಲಿ ತಮಿಳುನಾಡು...

ದೇಶದಲ್ಲಿ ಈಗ ಪ್ರತಿಮೆ ಪಾಲಿಟಿಕ್ಸ್- ರಾಜ್ಯದಲ್ಲಿ ಕಾವೇರಿ ಪ್ರತಿಮೆ ಸ್ಥಾಪನೆ: ಏನಿದು ಯೋಜನೆ? ವೆಚ್ಚ ಎಷ್ಟು?

7 months ago

ಬೆಂಗಳೂರು: ದೇಶದಲ್ಲಿ ಈಗ ಪ್ರತಿಮೆ ಪಾಲಿಟಿಕ್ಸ್ ಆರಂಭವಾಗಿದ್ದು, ಗುಜರಾತ್ ಸರ್ಕಾರ ಸರ್ದಾರ್ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದೇ ತಡ ರಾಜ್ಯದಲ್ಲಿ ಕಾವೇರಿ ಪ್ರತಿಮೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೌದು. ಪಟೇಲ್ ಮಾದರಿಯಲ್ಲಿ ಕಾವೇರಿ ಮಾತೆಯ...