Tuesday, 19th March 2019

Recent News

2 days ago

ಸಿಎಂ ಕಾರಿನ ಮೇಲೆ ಬಿತ್ತು 2 ಕೇಸ್: ಇನ್ನೂ ಕಟ್ಟಿಲ್ಲ ದಂಡ

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸಂಬಂಧ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ಕಾರಿನ ಮೇಲೆ ಎರಡು ದೂರು ದಾಖಲಾಗಿದೆ. ಅತಿ ವೇಗ ಹಾಗೂ ಕಾರು ಚಾಲನೆ ವೇಳೆ ಮೊಬೈಲ್ ಬಳಕೆ ಹಿನ್ನೆಲೆ ಎರಡು ಕೇಸ್ ದಾಖಲಾಗಿದ್ದು, ಕೆಎ 42 ಪಿ 0002 ನಂಬರಿನ ಕಾರನ್ನು ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಬಳಕೆ ಮಾಡುತ್ತಿದ್ದಾರೆ. ಫೆ.10 ಮತ್ತು ಫೆ.22 ರ ಎರಡು ದಿನ ಕಾರಿನ ಮೇಲೆ ದೂರು ದಾಖಲಾಗಿದ್ದು, ಫೆಬ್ರವರಿ 22 ರ ಮಧ್ಯಾಹ್ನ 12.35 ಕ್ಕೆ […]

2 days ago

ನಿಂತಿದ್ದ ನಾಲ್ಕು ಕಾರುಗಳಿಗೆ ಲಾರಿ ಡಿಕ್ಕಿ

ಧಾರವಾಡ: ಇಂದು ನಗರದಲ್ಲಿ ಬೆಳ್ಳಂಬೆಳಗ್ಗೆ ಟಿಪ್ಪರ್ ಲಾರಿಯೊಂದರ ಬ್ರೇಕ್ ಫೇಲ್ ಆದ ಪರಿಣಾಮ ರಸ್ತೆ ಪಕ್ಕ ಪಾರ್ಕ್ ಮಾಡಿದ್ದ ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಇಂದು ಮುಂಜಾನೆ ಹುಬ್ಬಳ್ಳಿಯಿಂದ ಬೆಳಗಾವಿ ಕಡೆ ಹೊರಟಿದ್ದ ಟಿಪ್ಪರ್ ಲಾರಿ ಬ್ರೇಕ್ ಫೇಲ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ....

ಫ್ಲೈಓವರ್ ಮೇಲೆ ಹೊತ್ತಿ ಉರಿದ ಕಾರು – ತಾಯಿ, ಇಬ್ಬರು ಮಕ್ಕಳು ಸಜೀವದಹನ

1 week ago

ನವದೆಹಲಿ: ಚಲಿಸುತ್ತಿದ್ದ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ವಾಹನದ ಒಳಗಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಪೂರ್ವ ದೆಹಲಿಯ ಅಕ್ಷರಧಾಮ ಫ್ಲೈಓವರ್ ನಲ್ಲಿ ನಡೆದಿದೆ. ಭಾನುವಾರ ಸಂಜೆ ಸುಮಾರು 6.30ರ ಹೊತ್ತಿಗೆ ಈ...

ಸಂಬಂಧಿಕರ ಮನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದವರು ದಾರಿ ಮಧ್ಯೆ ಪ್ರಾಣ ಬಿಟ್ರು

1 week ago

– ಕಾರಿಗೆ ಬಸ್ ಡಿಕ್ಕಿ ಇಬ್ಬರು ಮಹಿಳೆಯರು ಸಾವು, ಮೂವರಿಗೆ ಗಾಯ ಹಾವೇರಿ: ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಹಾನಗಲ್ ತಾಲೂಕಿನ ಗೆಜ್ಜೀಹಳ್ಳಿ ಗ್ರಾಮದ ಬಳಿ ನಡೆದಿದೆ. ಹಾವೇರಿ...

ಮಡದಿಗೆ ಪುನೀತ್ ರಾಜ್‍ಕುಮಾರ್ ಭರ್ಜರಿ ಗಿಫ್ಟ್

1 week ago

ಬೆಂಗಳೂರು: ಮಹಿಳಾ ದಿನಾಚರಣೆಯ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಮಡದಿ ಅಶ್ವಿನಿಯವರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಮಡದಿಯ ಬಹುದಿನಗಳ ಇಷ್ಟದ ಲಾಂಬೋರ್ಗಿನಿ ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ. ಐದು ಕೋಟಿಗೂ ಮೀರಿದ ಐಶಾರಾಮಿ ಕಾರ್ ಇದಾಗಿದ್ದು ಈಗಾಗಲೇ ದರ್ಶನ್ ಹಾಗೂ...

ಅಂಬಾಸಿಡರ್ ಕಾರೇ ಅಂಬುಲೆನ್ಸ್ – 30 ವರ್ಷಗಳಿಂದ ಉಚಿತ ಸೇವೆ ನೀಡ್ತಿದ್ದಾರೆ ಮಂಡ್ಯದ ಚಿಕ್ಕಲಿಂಗಯ್ಯ

2 weeks ago

ಮಂಡ್ಯ: ಕಳೆದ ಮೂವತ್ತು ವರ್ಷಗಳ ಹಿಂದಿನ ಚಿತ್ರಣವಾಗಿದೆ. ಆ ಸಮಯದಲ್ಲಿ ಕಾಯಿಲೆ ಬಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ ಸೇವೆ ಇರಲಿಲ್ಲ. ಆಗಿನಿಂದ್ಲೂ ಮಂಡ್ಯದ ಮಾರೇಗೌಡನ ದೊಡ್ಡಿ ಜನರ ಪಾಲಿಗೆ ಚಿಕ್ಕಲಿಂಗಯ್ಯನವರ ಕಾರೇ ಅಂಬುಲೆನ್ಸ್. ಅಂದಿನಿಂದ ಉಚಿತ ಸೇವೆ ನೀಡ್ತಿರೋ ಚಿಕ್ಕಲಿಂಗಯ್ಯ ಇಂದಿನ...

ಸಿಟಿ ರವಿ ಕಾರು ಗುದ್ದಿದ ಅನತಿ ದೂರದಲ್ಲಿ ಮತ್ತೊಂದು ಅಪಘಾತ – ಇಬ್ಬರ ದುರ್ಮರಣ, ಮೂವರು ಗಂಭೀರ

2 weeks ago

ತುಮಕೂರು: ಆಟೋಗೆ ಕಾರು ಗುದ್ದಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ನಡೆದಿದೆ. ಹೇರೂರು ಮತ್ತು ಚೊಟ್ಟನಹಳ್ಳಿ ಮಧ್ಯಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಶಾಸಕ ಸಿ.ಟಿ ರವಿ ಕಾರು...

ಬೆಂಗ್ಳೂರು-ಪುಣೆ ನಡುವೆ ಅನುಮಾನಾಸ್ಪದ ಕಾರು ಓಡಾಟ.!

2 weeks ago

ನವದೆಹಲಿ: ಬೆಂಗಳೂರು ಹಾಗೂ ಪುಣೆ ನಡುವೆ ಅನುಮಾನಾಸ್ಪದವಾಗಿ ಕಾರೊಂದು ಓಡಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದ್ದು, ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಕಾರು ಮಾಚ್ 1 ರಂದು ಪುಣೆ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಟ ಮಾಡಿದ್ದು, ಇದೀಗ...