Thursday, 12th December 2019

Recent News

1 week ago

ಜೀಪ್ ಮೇಲೆ ಎರಗಿದ ಒಂಟಿ ಸಲಗ

ಮೈಸೂರು: ಆನೆಯೊಂದು ಜೀಪ್‍ನಲ್ಲಿ ಬರುತ್ತಿದ್ದ ಪ್ರವಾಸಿಗರ ಮೇಲೆ ಎರಗಲು ಮುಂದಾದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ನಾಗರಹೊಳೆ ಸಂರಕ್ಷಿತ ಅರಣ್ಯದ ಬಳಿ ನಡೆದಿದೆ. ಪ್ರವಾಸಿಗರು ಜೀಪ್‍ನಲ್ಲಿ ಕಾಡಿನೊಳಗೆ ಹೋಗಿದ್ದರು. ಈ ವೇಳೆ ಕಾಡಾನೆ ಅವರನ್ನು ನೋಡಿ ಜೀಪ್ ಮೇಲೆ ಎರಗಲು ಮುಂದಾಗಿದೆ. ಆದರೆ ಅರಣ್ಯ ಪ್ರದೇಶದ ಟ್ರಂಚ್ ಪಕ್ಕ ಅಳವಡಿಸಿದ್ದ ಕಬ್ಬಿನದ ರಾಡ್‍ಗೆ ಒಂಟಿ ಸಲಗ ಡಿಕ್ಕಿ ಹೊಡೆದಿದೆ. ಕಬ್ಬಿಣದ ರಾಡ್‍ನಿಂದಾಗಿ ಜೀಪ್ ಸವಾರರು ಸೇಫ್ ಆಗಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ […]

1 month ago

ಸೌದೆ ತರಲು ಕಾಡಿಗೆ ಹೋಗಿದ್ದ ಮಹಿಳೆಗೆ ಚಾಕು ಇರಿತ

ತುಮಕೂರು: ಸೌದೆ ತರಲು ಕಾಡಿಗೆ ಹೋಗಿದ್ದ ಮಹಿಳೆಯೋರ್ವಳು ನಿಗೂಢವಾಗಿ ಕೊಲೆಯಾದ ಘಟನೆ ತುಮಕೂರು ತಾಲೂಕಿನ ಊರ್ಡಿಗೆರೆ ಗ್ರಾಮದ ದೊಡ್ಡ ತಿಮ್ಮಯ್ಯನ ಪಾಳ್ಯದಲ್ಲಿ ನಡೆದಿದೆ. ಮೃತ ಪಟ್ಟ ಮಹಿಳೆಯನ್ನು 33 ವರ್ಷದ ಸೌಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸೌದೆ ತರಲು ಕಾಡಿಗೆ ಹೋದ ಸೌಭಾಗ್ಯಮ್ಮಳ ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಆದರೆ...

ಹುಲಿ ದಾಳಿಗೆ ರೈತ ಬಲಿ

3 months ago

ಚಾಮರಾಜನಗರ: ಹುಲಿ ದಾಳಿಗೆ ರೈತನೋರ್ವ ಬಲಿಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ನಡೆದಿದೆ. ಈ ಘಟನೆ ಕಳೆದ ರಾತ್ರಿ ನಡೆದಿದ್ದು, ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ರೈತ ಶಿವಮಾದಯ್ಯ (55) ಹುಲಿದಾಳಿಗೆ ಬಲಿಯಾಗಿದ್ದಾರೆ. ಎತ್ತುಗಳೊಂದಿಗೆ ಕಾಡಂಚಿನಲ್ಲಿ ಬರುತ್ತಿದ್ದಾಗ...

ಹಾಸನದಲ್ಲಿ ಆಪರೇಷನ್ ಎಲಿಫೆಂಟ್ ಆರಂಭ

5 months ago

ಹಾಸನ: ಜಿಲ್ಲೆಯ ಅಡವಿಬಂಟೇನಹಳ್ಳಿಯಲ್ಲಿ ಕಾಡಿನಿಂದ ನಾಡಿಗೆ ಬಂದಿರುವ ಒಂಟಿ ಸಲಗವನ್ನು ಸೆರೆಹಿಡಿಯಲು ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆ ಆರಂಭವಾಗಿದೆ. ಹಾಸನ ನಗರ ಹಾಗೂ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸಿಕೊಂಡ ಆನೆ ಅಲ್ಲಿನ ಜನರಿಗೆ ಆತಂಕ ಹುಟ್ಟಿಸಿತ್ತು. ಕಳೆದ ಒಂದು ತಿಂಗಳಲ್ಲಿ ಇಬ್ಬರನ್ನು ಬಲಿ...

ಬೆಳ್ಳಂಬೆಳಗ್ಗೆ ಹಾಸನ ನಗರಕ್ಕೆ ಬಂದಿದ್ದ ಕಾಡಾನೆ ಮರಳಿ ಕಾಡಿಗೆ

5 months ago

ಹಾಸನ: ಇಂದು ಬೆಳ್ಳಂಬೆಳಗ್ಗೆ ಹಾಸನ ನಗರಕ್ಕೆ ಬಂದಿದ್ದ ಕಾಡಾನೆ ಈಗ ಕಾಡಿಗೆ ಮರಳಿದೆ. ಇಂದು ಮುಂಜಾನೆ ನಗರದ ಪಿಎನ್‍ಟಿ ಕಾಲೋನಿಗೆ ಕಾಡಾನೆ ಬಂದಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಡಿಎಫ್‍ಓ, ಆರ್‍ಎಫ್‍ಓ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದರು. ಅರಣ್ಯಾಧಿಕಾರಿಗಳ ತಂಡ...

ಬೆಳ್ಳಂಬೆಳಗ್ಗೆ ಗ್ರಾಮದೊಳಗೆ ಎಂಟ್ರಿ ಕೊಟ್ಟ ಗಜ – ವಿಡಿಯೋ

5 months ago

ಹಾಸನ: ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮುಂದುವರಿದಿದ್ದು, ಬೆಳ್ಳಂಬೆಳಗ್ಗೆ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಗ್ರಾಮದೊಳಗೆ ಆನೆಯೊಂದು ಎಂಟ್ರಿ ಕೊಟ್ಟಿದೆ. ಕೆಂಚಮ್ಮನ ಹೊಸಕೋಟೆ ಬಳಿ ಅನೇಕ ಕಾಡಾನೆಗಳು ಇವೆ. ಆದರೆ ಇಂದು ಗ್ರಾಮದೊಳಗೆ ಏಕಾಏಕಿ ಒಂಟಿ ಸಲಗವೊಂದು ನುಗ್ಗಿದೆ. ಕಾಡಾನೆ...

ನಗರಕ್ಕೆ ಬಂದ್ರೆ ಸಿರಿತನ, ಕಾಡಿಗೆ ಮರಳಿದ್ರೆ ಮತ್ತೆ ಬಡತನ- ಇದು ದಸರಾ ಕ್ಯಾಪ್ಟನ್ ಅರ್ಜುನನ ಸ್ಥಿತಿ

8 months ago

ಮೈಸೂರು: ನಗರಕ್ಕೆ ಬಂದ್ರೆ ಸಿರಿತನ, ಕಾಡಿಗೆ ಮರಳಿದ್ರೆ ಮತ್ತೆ ಬಡತನ. ಇದು ಮೈಸೂರಿನ ದಸರಾ ಗಜಪಡೆಯ ಕ್ಯಾಪ್ಟನ್ ಅರ್ಜುನನ ಸ್ಥಿತಿ. ದಸರೆಯಲ್ಲಿ ಬೆಣ್ಣೆ, ಕಾಳುಗಳ ಮೃಷ್ಠಾನ್ನಾ ಭೋಜನ ಅರ್ಜುನನಿಗೆ ಸಿಗುತ್ತೆ. ಆದರೆ ವಾಪಾಸ್ ಸ್ವಸ್ಥಾನಕ್ಕೆ ಮರಳಿದಾಗ ಮೇವು, ನೀರಿಲ್ಲದೆ ಆನೆ ದಿನದೂಡ...

ಕಾಡಿನ ಮಧ್ಯೆ ಪಾಳುಬಿದ್ದ ದೇವಸ್ಥಾನದಲ್ಲಿ ಪತ್ತೆಯಾಯ್ತು ವಿಶಿಷ್ಟ ದೇವರ ಮೂರ್ತಿಗಳು!

8 months ago

ಮಂಗಳೂರು: ಕಾಡಿನ ಮಧ್ಯೆ ಪಾಳುಬಿದ್ದು ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ದೇವಸ್ಥಾನವೊಂದರ ಉತ್ಖನನದ ವೇಳೆ ವಿಶಿಷ್ಟ ದೇವರ ಮೂರ್ತಿಗಳು ಪತ್ತೆಯಾಗಿದ್ದು ಜನರಲ್ಲಿ ಅಚ್ಚರಿ ಸೃಷ್ಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಮಾಡತ್ತಾರುವಿನಲ್ಲಿ ನಡೆದ ಉತ್ಖನನದ ವೇಳೆ ಹಲವು ಮೂರ್ತಿಗಳು...