Tag: ಕಲ್ಲಡ್ಕ ಪ್ರಭಾಕರ ಭಟ್

  • ರಾಜಶೇಖರ ರೆಡ್ಡಿಗೆ ಏನಾಯ್ತು? ಓರ್ವ ಹಿಂದೂ ಭಾರತದಿಂದ ಹೊರ ಹೋದರೆ ಎಲ್ಲಿದೆ ದೇಶ – ಪ್ರಭಾಕರ ಭಟ್ ಪ್ರಶ್ನೆ

    ರಾಜಶೇಖರ ರೆಡ್ಡಿಗೆ ಏನಾಯ್ತು? ಓರ್ವ ಹಿಂದೂ ಭಾರತದಿಂದ ಹೊರ ಹೋದರೆ ಎಲ್ಲಿದೆ ದೇಶ – ಪ್ರಭಾಕರ ಭಟ್ ಪ್ರಶ್ನೆ

    – ರಾಜಶೇಖರ ರೆಡ್ಡಿ ಮತಾಂತರ ಮುಖ್ಯಮಂತ್ರಿಯಾಗಿದ್ದ
    – ಈಗ ನಿಮ್ಮ ಸರ್ಕಾರವಿಲ್ಲ, ಇಲ್ಲಿ ನೀವು ಮಂತ್ರಿಗಳಲ್ಲ
    – ಧರ್ಮದ ವಿರುದ್ಧ ಮೋಸ ಮಾಡಬೇಡಿ

    ರಾಮನಗರ: ರಾಜಶೇಖರ ರೆಡ್ಡಿ ಮತಾಂತರ ಮುಖ್ಯಮಂತ್ರಿಯಾಗಿದ್ದ. ತಿರುಪತಿಯಲ್ಲಿ 1 ಸಾವಿರ ಕ್ರಿಶ್ಚಿಯನ್ನರಿಗೆ ಮನೆ ಕಟ್ಟಿ ಕೊಟ್ಟ. 400 ಜನರಿಗೆ ತಿರುಪತಿಯಲ್ಲಿ ಕೆಲಸ ಕೊಟ್ಟ ಹಿಂದುಯೇತರರಿಗೆ ತಿರುಪತಿ ಪ್ರವೇಶ ಇಲ್ಲ. ಒಬ್ಬ ಮತಾಂತರಿ ಏನು ಮಾಡಿದ ಎನ್ನುವುದಕ್ಕೆ ರಾಜಶೇಖರ ರೆಡ್ಡಿ ಉದಾಹರಣೆ. ರಾಜಶೇಖರ ರೆಡ್ಡಿ ಕೊನೆಗೆ ಏನಾದ ಗೊತ್ತಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿ ಶಿವಕುಮಾರ್ ಅವರೇ ನೀವು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತೀರಿ ಎಂಬುದು ನೆನಪಿರಲಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

    ಕಪಾಲ ಬೆಟ್ಡದ ಏಸು ಪ್ರತಿಮೆ ನಿರ್ಮಾಣ ಖಂಡಿಸಿ ‘ಕನಕಪುರ ಚಲೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದರ್ ತೆರೆಸಾ ಕ್ರೈಸ್ತ ಮಿಷನರಿಗಳಿಂದ ದುಡ್ಡು ತೆಗೆದುಕೊಂಡು ಲೆಕ್ಕ ಕೊಟ್ಟಿಲ್ಲ. ಸೇವೆ ಹೆಸರಲ್ಲಿ ಶಿಲುಬೆ ಹಾಕುತ್ತಿದ್ದರು ಇದನ್ನ ಇಂಗ್ಲೆಡಿನ ಕ್ರಿಶ್ಚಿಯನ್ ಒಬ್ಬ ಪ್ರಶ್ನಿಸಿದ. ಇವತ್ತು ನಿಮ್ಮ ಸರ್ಕಾರವಿಲ್ಲ. ಇಲ್ಲಿ ನೀವು ಮಂತ್ರಿಗಳಲ್ಲ, ಕಂತ್ರಿಗಳು ನೀವು. ಏನೇ ಮಾಡಿದರೂ ನೆಲವೇ ಗತಿ. ನಾನು ರಾಜಕಾರಣಿಯಂತೆ ಮಾತನಾಡುವುದಿಲ್ಲ. ಕೆಟ್ಟ ರಾಜಕಾರಣಕ್ಕೆ ಮುಂದಾಗಬೇಡಿ ಎಂದರು. ಇದನ್ನೂ ಓದಿ: ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ

    rmg

    ಇದು ಕೃಷ್ಣನ ನಾಡು:
    ಅಲ್ಪಸಂಖ್ಯಾತರ ಹೆಸರಿನಲ್ಲಿ ದೇಶವನ್ನು ಲೂಟಿ ಮಾಡ್ತಿದ್ದೀರಾ? ಇದು ಹಿಂದೂ ಧರ್ಮದ ಭೂಮಿ, ಅಲ್ಲಿ ಹಿಂದೂಗಳ ಪ್ರತಿಮೆಯಾಗಬೇಕು ಏಸುವಿನದ್ದಲ್ಲ. ಏಸುವಿನ ಹೆಸರಿನಲ್ಲಿ ಮೋಸ ಮಾಡ್ತೀರಲ್ಲ. ಅಲ್ಲಿರುವ 223 ಕುಟುಂಬದವರಿಗೆ ಜಾಗ ಕೊಡ್ತೀರಾ? ಭೂಮಿ ಆಸೆ ತೋರಿಸಿ ಮತಾಂತರ ಮಾಡ್ತೀರಲ್ಲ ಯಾಕೆ? ಇಡೀ ಗ್ರಾಮವನ್ನು ಕ್ರಿಶ್ಚಿಯನ್ ಗ್ರಾಮ ಮಾಡಲು ಹೋಗ್ತಿದ್ದೀರಾ. ಈ ದೇಶದಲ್ಲಿ ಕ್ರಿಸ್ತನ ನಾಡಿದ್ಯಾ? ಕ್ರಿಸ್ತನ ನಾಡಲ್ಲ ಕೃಷ್ಣನ ನಾಡಿದೆ. ದೇಶದ ಹಲವೆಡೆ ಮತಾಂತರ ನಡೆದು ಕ್ರಿಶ್ಚಿಯನ್ ಗೆ ಬದಲಾಗಿದ್ದಾರೆ. ಈ ಭೂ ಭಾಗವನ್ನು ಮತ್ತೆ ಇಂಗ್ಲೆಂಡ್‍ಗೆ ತೆಗೆದುಕೊಂಡು ಹೋಗುವ ಪ್ರಯತ್ನ ಅವರದ್ದು ಎಂದು ಪ್ರಭಾಕರ ಭಟ್ ದೂರಿದರು.

    ಹಲವಾರು ವರ್ಷಗಳಿಂದ ಹೊರದೇಶದಲ್ಲಿ ನಮ್ಮವರ ಮೇಲೆ ಲಕ್ಷಾಂತರ ಅತ್ಯಾಚಾರ, ಕೊಲೆ ನಡೆದಿವೆ. ಇಷ್ಟು ದಿನ ಪೌರತ್ವ ಕಾಯ್ದೆಗೆ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಇದೀಗ ಸರ್ಕಾರ ಪೌರತ್ವಕ್ಕೆ ಮುಂದಾಗಿದೆ. ನಾನು ಈ ದೇಶದ ಮಗ ಎನ್ನಲು ಪೌರತ್ವ ಕಾಯ್ದೆ ಬೇಕು. ಮಂಗಳೂರಿನಲ್ಲಿ ಪೊಲೀಸರ ಮೇಲೆ ಎಸೆದ ಕಲ್ಲು ಡಿಕೆಶಿ ಕಲ್ಲು ಇರಬಹುದು. ದೇಶದಲ್ಲಿ ಆ ಕಡೆ ಮುಸ್ಲಿಮರು, ಈ ಕಡೆ ಕ್ರೈಸ್ತರು, ಮತ್ತೊಂದು ಕಡೆ ಕಮ್ಯುನಿಸ್ಟರ್ ದೇಶ ನಮ್ಮದು ಎನ್ನುತ್ತಿದ್ದಾರೆ ಈ ಮಧ್ಯೆ ಹಿಂದೂಗಳು ಒದ್ದಾಡುವಂತಾಗಿದೆ. ತಾಕತ್ ಇದ್ದರೆ ಬನ್ನಿ, ಇವತ್ತು ಡಿಕೆಶಿ ವಿರುದ್ಧ ನಾನು ನಿಂತಿಲ್ಲ. ಅಧಿಕಾರ ಅನುಭವಿಸಿದ್ದಾಯ್ತು ಅದಕ್ಕೂ ಇತಿಮಿತಿಗಳು ಇರಲ್ವಾ? ಎಲ್ಲವನ್ನೂ ಡಿಕೆ ಸಹೋದರರು ಅರಿಯಬೇಕು. ಎಂತಹ ಕೆಟ್ಟವರನ್ನ ಆಯ್ಕೆ ಮಾಡಿದ್ದೀರಿ. ಒಳ್ಳೆಯ ಕೆಲಸಕ್ಕೆ ಮುಂದೆ ಬರುವಂತಹವರು ಇರಬೇಕು.

    RMG DKSHI Christ copy

    ಭಾರತದಲ್ಲಿ ಬೇಡ:
    ಅವರದ್ದು ಭೋಗದ ಭೂಮಿ, ನಮ್ಮದು ತ್ಯಾಗದ ಭೂಮಿ. ಯೋಗ ದಿನಾಚರಣೆ ಬುದ್ಧಿ ಜೀವಿಗಳಿಗೆ ಆಗುವುದಿಲ್ಲ. ಜಗತ್ತು ಈಗ ಭಾರತದ ಕಡೆಗೆ ನೋಡುತ್ತಿದೆ ಡಿಕೆಶಿಯವರೆ, ಹಿಂದೂ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ. ನಾವು ಕೋಮುವಾದಿಗಳಾ? ನೀವು ಕೋಮುವಾದಿಗಳಾ? ನಮಗೆ ಏಸು ಕ್ರಿಸ್ತನ ಪ್ರತಿಮೆ ಬೇಡ, ದೇಶದ ಪರ ಹೋರಾಡಿದವರ ಪ್ರತಿಮೆ ಬೇಕು. ಹಿಂದೂ ಸಮಾಜಕ್ಕಿರುವ ಒಂದೇ ದೇಶ ಭಾರತ ಇಲ್ಲಿ ಏಸು ಪ್ರತಿಮೆ ಇರುವುದು ಬೇಡ ಎಂದು ಆಗ್ರಹಿಸಿದರು.

    ಧರ್ಮವಲ್ಲ ಮತಗಳು:
    ಎಲ್ಲರನ್ನು ಒಪ್ಪಿಕೊಳ್ಳುವ, ಎಲ್ಲರನ್ನು ಅಪ್ಪಿಕೊಳ್ಳುವ ಶ್ರೇಷ್ಠವಾದ ಧರ್ಮವೆಂದರೆ ಅದು ಹಿಂದೂ ಧರ್ಮ. ಅನೇಕರು ಹೇಳುತ್ತಾರೆ ಮುಸಲ್ಮಾನ್ ಧರ್ಮ, ಕ್ರೈಸ್ತ ಧರ್ಮ ಎಂದು. ಆದರೆ ಅದು ಧರ್ಮವಲ್ಲ ಮತಗಳು. ಅದು ಯಾವುದೋ ಒಂದು ಪುಸ್ತಕ, ಯಾವುದೋ ಒಂದು ಪ್ರವಾಸಿಗ, ಪದ್ಧತಿ ತಂದ ಮತಗಳು ಅವು. ಅಂತಹ ಬೇರೆ ಬೇರೆ ಮತಗಳು ನಮ್ಮಲಿವೆ. ಅವು ಧರ್ಮವಲ್ಲ ಮತಗಳು ಎಂದು ಹೇಳಿದರು.

    kaladka prabhakar 2

    ಹಿಂದೂ ಧರ್ಮ ಏನು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಧರ್ಮ ಎಂದರೆ ಆರಾಧನೆ ಮಾಡುವುದು ಅಲ್ಲ. ಜೀವನದ ಪದ್ಧತಿಯೇ ಧರ್ಮ. ಹಿಂದೂ ಧರ್ಮ ಎಂದರೆ ಜೀವನದ ಪದ್ಧತಿ. ಆದ್ದರಿಂದ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಹಿಂದೂ ಸಾಮಾಜದ ಮೇಲಿದೆ. ಅದಕ್ಕಾಗಿ ಇಂತಹ ಏಸುವಿನ ಪ್ರತಿಮೆ ಬೇಡ ನಮಗೆ. ಅಲ್ಲಿ ಬಸವೇಶ್ವರ, ಬಾಲಗಂಗಾಧರನಾಥ ಮಹಾತ್ಮ ಗಾಂಧೀಜಿ ಅವರದ್ದೋ, ಪೇಜಾವರ ಶ್ರೀಗಳದ್ದೋ ಪ್ರತಿಮೆ ಬೇಕು. ಈ ದೇಶಕ್ಕಾಗಿ, ಧರ್ಮಕ್ಕಾಗಿ ಬದುಕಿದಂತಹ ಮಹಾನ್ ವ್ಯಕ್ತಿಗಳ ಪ್ರತಿಮೆ ಬೇಕು. ಹಿಂದೂಗಳಿಗೆ ಒಂದೇ ಒಂದು ಭೂಮಿ, ಅದು ಭಾರತ ಎಂದರು.

    ಹಿಂದೂಗಳಿಗೆ ಜಾಗ ಎಲ್ಲಿ?
    ಕನಕಪುರದಲ್ಲಿರುವ ಮುಸ್ಲಿಂ ವ್ಯಕ್ತಿ ಕನಕಪುರ ಬೇಡವೆಂದು ಮಂಗಳೂರಿಗೆ ಹಾರಿದರೆ, ಅಲ್ಲಿಂದ ಬೇರೆ ಕಡೆಗೆ ಹೋದರೆ 70 ಮುಸ್ಲಿಂ ರಾಷ್ಟ್ರಗಳು ಆತನಿಗೆ ನೆಲೆ ನೀಡುತ್ತದೆ. ಹಾಗೆಯೇ ಕ್ರೈಸ್ತ ವ್ಯಕ್ತಿ ದೇಶ ಬೇಡವೆಂದು ಹೋದರೆ ಆತನಿಗಾಗಿ ಸುಮಾರು 70 ಕ್ರೈಸ್ತ ರಾಷ್ಟ್ರಗಳು ಇವೆ. ಆದರೆ ಓರ್ವ ಹಿಂದೂ ಭಾರತದಿಂದ ಹೊರಹೋದರೆ ಆತನಿಗಾಗಿ ಬೇರೆ ದೇಶವಿಲ್ಲ. ಆತ ಹೋಗಿ ಸಮುದ್ರಕ್ಕೆ ಹಾರಬೇಕಾಗುತ್ತೆ. ಹಿಂದೂ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಲು ಇರುವುದು ಒಂದೇ ಒಂದು ದೇಶ. ಇಲ್ಲಿ ನೀವು ಏಸು ಪ್ರತಿಮೆಯನ್ನ ಇಡಬೇಡಿ ಎಂದು ಕಿಡಿಕಾರಿದರು.

    DK SHIVAKUMAR 1

    ಜನರು ಹೆಲಿಕಾಪ್ಟರ್ ಮೇಲೆ ಹಾರಬಹುದು, ವಿಮಾನದಲ್ಲಿ ಆಕಾಶದಲ್ಲಿ ಸಂಚರಿಸಬಹುದು. ಆದರೆ ಕೊನೆಗೆ ಎಲ್ಲರಿಗೂ ನೆಲವೇ ಗತಿ ತಾನೇ. ಎಲ್ಲರೂ ಭೂಮಿ ಮೇಲೆ ಇಳಿಯಲೇ ಬೇಕು. ಅದಕ್ಕಾಗಿ ಈ ಕೆಟ್ಟದಾದ ರಾಜಕೀಯ ಮಾಡಬೇಡಿ. ಈ ರೀತಿ ರಾಜಕಾರಣಕ್ಕೆ ನಮ್ಮ ಒಪ್ಪಿಗೆ ಇಲ್ಲ. ನಾವು ಕೆಟ್ಟ ರಾಜಕಾರಣ ವಿರುದ್ಧ ನಿಂತು ಹೋರಾಟ ಮಾಡುತ್ತಿದ್ದೇವೆ. ಅದಕ್ಕಾಗಿ ಡಿಕೆಶಿ ಸಹೋದರರು ಯಾರಿದ್ದೀರಿ ದಯವಿಟ್ಟು ಹಿಂದಕ್ಕೆ ಬನ್ನಿ. ಮುನೇಶ್ವರ ಬೆಟ್ಟವನ್ನು ಮುನೇಶ್ವರ ಬೆಟ್ಟವನ್ನಾಗಿಯೇ ಇರಲು ಬಿಡಿ ಎಂದು ಕೇಳಿಕೊಂಡರು.

    ಏಸುಕ್ರಿಸ್ತ ದೇವರಲ್ಲ, ಅವನು ಸತ್ತ ಬಳಿಕ ಜನಾಂಗ ಸೃಷ್ಟಿ ಮಾಡಿಕೊಂಡರು. ಅವರ ಬಗ್ಗೆ ಗೌರವವಿದೆ, ಅವರ ಹೆಸರಿನಲ್ಲಿ ಮತಾಂತರ, ಮೋಸ ಮಾಡಬೇಡಿ. ದಯವಿಟ್ಟು ಅದನ್ನ ಬಿಟ್ಟು ಬಿಡಿ ನೀವು ಏಸುವನ್ನ ಆರಾಧನೆ ಮಾಡಿ. ನಾವು ಕೃಷ್ಣನ ಆರಾಧಿಸುತ್ತೇವೆ. ವೋಟಿನ, ಸೀಟಿನ, ನೋಟಿನ ರಾಜಕಾರಣ ಮಾಡಬೇಡಿ. ಧರ್ಮದ ವಿರುದ್ಧ ಮೋಸ ಮಾಡಬೇಡಿ. ಸಾಮರಸ್ಯದ ಜೀವನ ಕೆಡಿಸಲು ಅನ್ಯಾಯ ಮಾಡಬೇಡಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಮನವಿ ಮಾಡಿಕೊಂಡರು.

  • ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ

    ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ

    – ಸೋನಿಯಾ ಓಲೈಕೆಗಾಗಿ ಏಸು ಪ್ರತಿಮೆ
    – ಡಿಕೆಶಿ ಮಗಳು ಲಿಲ್ಲಿ, ಮಗ ಡೇವಿಡ್ ಆಗಬಹುದು

    ರಾಮನಗರ: ನಾವು ಶಾಂತಿ ಕದಡುತ್ತೇವೆ ಎಂದು ಡಿಕೆಶಿ ಹೇಳುತ್ತಾರೆ. ನಾವು ಶಾಂತಿ ಕದಡಿಲ್ಲ. ನೀವು ಶಾಂತಿಯ ಹೆಸರಲ್ಲಿ ನಮ್ಮ ತಾಳ್ಮೆ ಕೆದಕುತಿದ್ದೀರಿ. ಬಾಲಗಂಗಾಧರ ನಾಥ ಸ್ವಾಮಿ ಪ್ರತಿಮೆ ಮಾಡಬಹುದಿತ್ತು. ಮಹಾತ್ಮ ಗಾಂಧೀಜಿಯವರ ಮೂರ್ತಿ ನಿರ್ಮಿಸಿದರೂ ನಮಗೆ ಅಡ್ಡಿಯಿಲ್ಲ. ಆದರೆ ಸೋನಿಯಾ ಗಾಂಧಿ ಓಲೈಕೆಗಾಗಿ ಮೂರ್ತಿ ಮಾಡಿದ್ದಕ್ಕೆ ನಮ್ಮ ವಿರೋಧವಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಕಪಾಲ ಬೆಟ್ಡದ ಏಸು ಪ್ರತಿಮೆ ನಿರ್ಮಾಣ ಖಂಡಿಸಿ ‘ಕನಕಪುರ ಚಲೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಗ್ದರಿಗೆ ಮೋಸ ಮಾಡಿ ಕೆಲಸ ಮಾಡುತ್ತಿದ್ದೀರಾ? ಮೋಸ ವಂಚನೆ ಮೂಲಕ ಪ್ರತಿಮೆ ನಿರ್ಮಿಸುತ್ತಿದ್ದೀರಾ? ಮೋಸ ವಂಚನೆಯಿಂದ ಮತಾಂತರ ಮಾಡುತ್ತಿದ್ದೀರಾ? ಈ ಮತಾಂತರಕ್ಕೆ ಡಿಕೆ ಸಹೋದರರು ಸಾಥ್ ನೀಡುತ್ತಿದ್ದಾರೆ. ನಿಮ್ಮ ಅಪ್ಪ- ಅಮ್ಮ ನಿಮಗೆ ಜನ್ಮ ನೀಡಿದ್ದಾರೆ. ನಿಮಗೆ ಶಿವ, ಸುರೇಶ ಎಂದು ಹೆಸರಿಟ್ಟಿದ್ದಾರೆ. ಸುರೇಶನ್ನು ದಿನೇಶ ಅಂತಾ ಕರೆಯಲು ಆಗುತ್ತಾ? ಒಂದು ಕಡೆಯ ಓಟು, ನೋಟು ಮುಖ್ಯವಾಯಿತೇ? ವೋಟಿಗೋಸ್ಕರ ಸೀಟಿಗೋಸ್ಕರ ಈ ರೀತಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

    DK SHI RMG c copy 1

    ನಾವು ಮುಗ್ಧ ಜನರು, ಹಿಂದೂಗಳು ಮುಗ್ದರು. 33 ಕೋಟಿ ದೇವರು 1947ರಲ್ಲೇ ಇದ್ದಾರೆ ಎಂದು ಹೇಳುತ್ತಾರೆ. ದೇವರಲ್ಲಿ ಒಬ್ಬ ಅಲ್ಲ, ಒಬ್ಬ ಏಸು ಇದ್ದರೆ ನಮ್ಮ ವಿರೋಧವಿಲ್ಲ. ಆದರೆ ಅವರ ಹೆಸರಿನಲ್ಲಿ ಮತಾಂತರ ನಡೆಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. 33 ಕೋಟಿ ದೇವರು ಎಲ್ಲಿ ಬರುತ್ತಾರೆ ಎಂದು ಕೇಳುತ್ತಾರೆ? ನಮಗೆ 33 ಕೋಟಿ ದೇವರ ಪೈಕಿ ಒಬ್ಬರು ನಮ್ಮನ್ನು ಕಾಪಾಡುತ್ತಾರೆ ಎಂದು ಹೇಳಿದರು.

    kaladka prabhakar

    ಪ್ರಭಾಕರ್ ಭಟ್ ಯಾರು ಅಂತಾ ಡಿಕೆ ಶಿವಕುಮಾರ್ ಹೇಳುತ್ತಾರೆ. ನಾನು ಯಾರು ಎನ್ನುವುದು ಗೊತ್ತಿಲ್ಲ ಅಂದಿದ್ದಕ್ಕೆ ಸಂತೋಷ. ಶ್ರೀರಾಮುಲು ಮಗಳ ಮದುವೆಯಲ್ಲಿ ಡಿಕೆಶಿ ನನ್ನನ್ನು ಕರೆದು ಮಾತನಾಡಿಸಿದರು. ಈಗ ಪ್ರಭಾಕರ ಭಟ್ಟ ನನಗೆ ಗೊತ್ತಿಲ್ಲ ಅಂತಾರೆ. ಮದುವೆಯಲ್ಲಿ ಸಿಕ್ಕ ಪ್ರಭಾಕರ ಭಟ್ಟನೆ ನಾನು ನೆನಪಿರಲಿ. ಇದೀಗ ನಾನು ಅವರ ಊರಿಗೆ ಬಂದಿದ್ದರೂ ನಾನು ಯಾರೂ ಎನ್ನುವುದು ಗೊತ್ತಿಲ್ಲ ಎಂದು ಹೇಳುತ್ತಾರೆ. ಡಿಕೆಶಿಯವರೇ ನಿಮ್ಮ ಮಗಳು ಲಿಲ್ಲಿ ಆಗಬಹುದು. ದುನೇಶ್ ಅಂತ ಮಗನ ಹೆಸರಿದ್ದರೆ ಅವನು ಮುಂದೆ ಡೇವಿಡ್ ಆಗಬಹುದು. ನಿಮಗೆ ಶಿವ ಅಂತ ತಮ್ಮನಿಗೆ ಸುರೇಶ ಅಂತ ಹೆಸರಿಟ್ಟಿದ್ದಾರೆ ಅದನ್ನ ಉಳಿಸಿ. ವೋಟು ಸೀಟು ಎರಡು ಆಗಿದ್ದು ಡಿಕೆಶಿ ಸಹೋದರರಿಗೆ ಈಗ ಬೇಕಾಗಿರುವುದು ನೋಟು ಎಂದು ವ್ಯಂಗ್ಯವಾಡಿದರು.

    DK SHI RMG a copy

    ಅಮೆರಿಕ, ಇಂಗ್ಲೆಂಡ್ ಚರ್ಚಿನಲ್ಲಿ ಜನರೇ ಇಲ್ಲದೇ ಚರ್ಚ್ ಖಾಲಿ ಖಾಲಿ ಆಗಿದೆ. ವಿಶ್ವ ಹಿಂದೂ ಪರಿಷತ್ 3 ಖಾಲಿ ಚರ್ಚ್ ಖರೀದಿಸಿದ್ದಾರೆ. ಬಲಿದಾನಕ್ಕೆ ನಾವು ತಯಾರಿದ್ದೇವೆ. ಆದರೆ ಅದಕ್ಕೆ ಮೊದಲು ನಿಮ್ಮ ಬಲಿದಾನ ಗ್ಯಾರಂಟಿ. ಸಿದ್ದರಾಮಯ್ಯ ಜೊತೆ ಸೇರಿ ನಮ್ಮ ಮೂರುವರೆ ಸಾವಿರ ಮಕ್ಕಳ ಅನ್ನದ ಮೇಲೆ ಕಲ್ಲು ಹಾಕಿದ್ದೀರಿ. ಇಲ್ಲಿ ಒಡೆದ ಅಕ್ರಮ ಕಲ್ಲು ತಂದು ಕಲ್ಲಡ್ಕದ ಮಕ್ಕಳ ತಟ್ಟೆಗೆ ಹಾಕಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

    ರಾಂಚಿ ಯಲ್ಲಿ ಪೋಪ್ ಬರುವ ಕಾರ್ಯಕ್ರಮವಿತ್ತು. ಮತಾಂತರದ ಬಗ್ಗೆ ಸಂಘ ಎಚ್ಚರಿಸಿತು. ಆಗ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿ ಕಾಂಗ್ರೆಸ್ ಡಿಸಿ. ಅವನು ಪೋಪ್ ಅವರನ್ನ ತಡೆಯಲು ಆಗುವುದಿಲ್ಲ ಎಂದ. ಆಗ ಅಲ್ಲಿದ್ದ ಆದಿವಾಸಿ ಜನಾಂಗದವನೊಬ್ಬ ಬಾಣವನ್ನ ಮೇಲಕ್ಕೆ ಬಿಟ್ಟ ಹಾರುತ್ತಿದ್ದ ಹಕ್ಕಿ ಕೆಳಗೆ ಬಿತ್ತು. ಆಗ ಡಿಸಿ ನನಗೂ ಬಾಣ ಬಿಡುಬಹುದು ಎಂದು ಹೆದರಿದ. ಇಲ್ಲೂ ಹೀಗೆಯೇ ಆಗಬೇಕು ಎಂದು ಹೇಳಿದರು.

  • ರಾಮಮಂದಿರ ನೋಡಲು ಪೇಜಾವರಶ್ರೀ ಇರಬೇಕು: ಕಲ್ಲಡ್ಕ ಪ್ರಭಾಕರ ಭಟ್

    ರಾಮಮಂದಿರ ನೋಡಲು ಪೇಜಾವರಶ್ರೀ ಇರಬೇಕು: ಕಲ್ಲಡ್ಕ ಪ್ರಭಾಕರ ಭಟ್

    ಉಡುಪಿ: ಪೇಜಾವರ ಶ್ರೀಗಳಿಗೆ ತೀವ್ರ ಅನಾರೋಗ್ಯ ಬಾಧಿಸಿದ್ದು, ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

    ಕಲ್ಲಡ್ಕ ಪ್ರಭಾಕರ ಅವರು ಐಸಿಯುಗೆ ಭೇಟಿ ಕೊಟ್ಟು ಮಾಧ್ಯಮಗಳ ಜೊತೆ ಮಾತನಾಡಿದರು. ಪೇಜಾವರ ಶ್ರೀಗಳು ಭಾರತಕ್ಕೆ ಬೇಕು. ಭಗವಂತನಿಗೂ ಅವರು ಬೇಕು ಎನ್ನಿಸಿದ್ಯೋ ಏನೋ? ಎಂದು ಖೇದ ವ್ಯಕ್ತಪಡಿಸಿದರು. ರಾಮಮಂದಿರ ನಿರ್ಮಾಣವನ್ನು ಪೇಜಾವರಶ್ರೀ ನೋಡಬೇಕು ಎಂದರು. ಇದನ್ನೂ ಓದಿ: ಪೇಜಾವರ ಶ್ರೀಗಳಿಗೆ ತೀವ್ರ ಅನಾರೋಗ್ಯ – ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

    udp kalladka prabhakar bhat 1 e1576836935727

    ಪೇಜಾವರರು ಕೇವಲ ಸನ್ಯಾಸಿಯಲ್ಲ, ದಾರ್ಶನಿಕರು. ಅವರು ರಾಷ್ಟ್ರದ ಬಗ್ಗೆ ಚಿಂತನೆಯುಳ್ಳ ಮಹಾನ್ ಸಂತ. ಈಗ ಅವರ ಅಗತ್ಯ ನಮಗೆ ಬಹಳ ಇದೆ. ರಾಮಮಂದಿರ ಹೋರಾಟದ ಮುಂಜೂಣಿಯಲ್ಲಿದ್ದರು. ಅವರು ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದರು.

    ಸದ್ಯ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರಾಜಕೀಯ ನಾಯಕರು, ಭಕ್ತರು, ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ಆರೋಗ್ಯ ವಿಚಾರಿಸಿದ್ದಾರೆ. ಶನಿವಾರ ಅಮಿತ್ ಶಾ, ಸಿಎಂ ಯಡಿಯೂರಪ್ಪ ಉಡುಪಿಗೆ ಬರುವ ಸಾಧ್ಯತೆಯಿದೆ. ಆಸ್ಪತ್ರೆ ಸುತ್ತ ಝೀರೋ ಜೋನ್ ನಿರ್ಮಾಣ ಮಾಡಲಾಗಿದೆ.

  • ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕೇಸ್ ದಾಖಲು

    ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕೇಸ್ ದಾಖಲು

    – ಇತಿಹಾಸದ ಘಟನೆಯನ್ನು ತೋರಿಸುವುದರಲ್ಲಿ ತಪ್ಪೇನಿದೆ
    – ಬಾಬರ್ ವಿದೇಶಿ ದಾಳಿಕೋರ
    – ಕೇಸ್ ಬಗ್ಗೆ ಪ್ರಭಾಕರ ಭಟ್ ಪ್ರತಿಕ್ರಿಯೆ

    ಮಂಗಳೂರು: ಅಯೋಧ್ಯೆಯ ಬಾಬರಿ ಮಸೀದಿ ಘಟನೆಯನ್ನು ಮರುಸೃಷ್ಟಿಸಿದ ವಿವಾದ ಈಗ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕೊರಳು ಸುತ್ತಿಕೊಂಡಿದೆ.

    ಅಯೋಧ್ಯೆ ತೀರ್ಪು ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಬಾಬರಿ ಮಸೀದಿಯಾಗಲಿ ಅಥವಾ ರಾಮ ಮಂದಿರದ ವಿಚಾರದಲ್ಲಾಗಲಿ ಮಾಧ್ಯಮಗಳು ಸಂಯಮ ಕಾಪಾಡಿಕೊಳ್ಳಬೇಕು. ಬಾಬರಿ ಮಸೀದಿ ಕೆಡವಿದ ದೃಶ್ಯ ಬಿತ್ತರಿಸಿ ಕೋಮು ಪ್ರಚೋದನೆಗೆ ಕಾರಣ ಆಗಬಾರದು ಎಂದು ಪ್ರಮುಖವಾಗಿ ಸುದ್ದಿ ವಾಹಿನಿಗಳಿಗೆ ಕೇಂದ್ರ ಸರ್ಕಾರದ ಮೂಲಕ ಸೂಚನೆ ನೀಡಲಾಗಿತ್ತು. ಆದರೆ ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕ್ರೀಡೋತ್ಸವ ಸಂದರ್ಭದಲ್ಲಿ ಬಾಬರಿ ಮಸೀದಿ ಕೆಡವಿದ್ದನ್ನು ಮರುಸೃಷ್ಟಿ ಮಾಡಿ ತೋರಿಸಲಾಗಿತ್ತು.

    MNG 1 2

    ಕಲ್ಲಡ್ಕದ ಕ್ರೀಡೋತ್ಸವದಲ್ಲಿ ಪ್ರತಿ ವರ್ಷ ಆಯಾ ಸಾಲಿನ ವಿಶೇಷ ಘಟನೆಗಳ ಬಗ್ಗೆ ಯಥಾವತ್ ಚಿತ್ರಿಸಲಾಗುತ್ತದೆ. ಈ ಬಾರಿ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ರಾಮಮಂದಿರ ಕುರಿತ ಸಾಕ್ಷ್ಯಚಿತ್ರದ ರೂಪದಲ್ಲಿ ಇಡೀ ಘಟನಾವಳಿಗಳನ್ನು ಮಕ್ಕಳ ಮೂಲಕ ಮಾಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಪಾಂಡಿಚೇರಿ ರಾಜ್ಯಪಾಲೆ ಕಿರಣ್ ಬೇಡಿ ಸೇರಿ ಪ್ರಮುಖರು ಸಾಕ್ಷಿಯಾಗಿದ್ದರು. ಆದರೆ, ಬಾಬರಿ ಮಸೀದಿ ಕೆಡವಿದ ವಿಚಾರ ಮುಸ್ಲಿಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದವು.

    ಅಂದು ಮಸೀದಿ ಕೆಡವಿದ ಮರುಸೃಷ್ಟಿ ದೃಶ್ಯಗಳನ್ನೂ ಮೊಬೈಲಿನಲ್ಲಿ ವೈರಲ್ ಮಾಡಲಾಗಿತ್ತು. ಪರ- ವಿರೋಧ ಚರ್ಚೆ ಆಗಿರುವಾಗಲೇ ಮುಸ್ಲಿಂ ಸಂಘಟನೆಗಳು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿತ್ತು. ಇದೀಗ ಪೊಲೀಸರು ದೂರು ಆಧರಿಸಿ, ಕಲ್ಲಡ್ಕ ವಿದ್ಯಾಕೇಂದ್ರದ ಮುಖ್ಯಸ್ಥ ಪ್ರಭಾಕರ ಭಟ್ ಸೇರಿ ವಿದ್ಯಾಸಂಸ್ಥೆಯ ಐವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

    ಇದೇ ವೇಳೆ, ಪ್ರಭಾಕರ ಭಟ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಕ್ರೀಡೋತ್ಸವದಲ್ಲಿ ನಡೆದಿರುವ ಘಟನಾವಳಿ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಬಾಬರಿ ಮಸೀದಿ ಕೆಡವಿದ್ದು ಐತಿಹಾಸಿಕ ಸತ್ಯ. ಅದನ್ನು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ. ನಮ್ಮ ಕ್ರೀಡೋತ್ಸವ ಸಂದರ್ಭದಲ್ಲಿ ಪ್ರತಿ ವರ್ಷವೂ ಆಯಾ ಸಾಲಿನ ವಿಶೇಷ ಘಟನೆಗಳ ಬಗ್ಗೆ ದೃಶ್ಯ ರೂಪಕ ತೋರಿಸುತ್ತೇವೆ. ಈ ಬಾರಿ ರಾಮಜನ್ಮಭೂಮಿ ತೀರ್ಪು ಪ್ರಮುಖ ವಿಚಾರವಾದ್ದರಿಂದ ಇಡೀ ಘಟನಾವಳಿಯನ್ನು ಚಿತ್ರಿಸಿದ್ದೇವೆ. ಅದರಲ್ಲಿ ಬಾಬರಿ ಮಸೀದಿ ಕೆಡವಿದ ಘಟನೆಯೂ ಒಂದು. ಆ ಬಗ್ಗೆ ಯಾವುದೇ ಸಮುದಾಯವನ್ನು ಅಪಮಾನಿಸುವ ಪ್ರಯತ್ನ ಮಾಡಿಲ್ಲ. ಬಾಬರ್ ಒಬ್ಬ ವಿದೇಶಿ ದಾಳಿಕೋರ. ಆತನ ಬಗ್ಗೆ ಹೇಳಿದರೆ ಇಲ್ಲಿನ ಮುಸ್ಲಿಮರಿಗೆ ಯಾಕೆ ನೋವಾಗಬೇಕು. ಅಲ್ಲದೆ, ಇತಿಹಾಸದ ಘಟನೆಯನ್ನು ತೋರಿಸುವುದರಲ್ಲಿ ತಪ್ಪೇನಿದೆ ಅಂತ ಪ್ರಶ್ನೆ ಮಾಡಿದ್ದಾರೆ.

  • ಶ್ಯಾಂಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಕೇಸ್: ಬೆದರಿಕೆ ಹಾಕಿದ್ದ ಧ್ವನಿ ಕಲ್ಲಡ್ಕ ಭಟ್ ಅವರದ್ದೇ ಅನ್ನೋದು ಧೃಢ

    ಶ್ಯಾಂಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಕೇಸ್: ಬೆದರಿಕೆ ಹಾಕಿದ್ದ ಧ್ವನಿ ಕಲ್ಲಡ್ಕ ಭಟ್ ಅವರದ್ದೇ ಅನ್ನೋದು ಧೃಢ

    ಬೆಂಗಳೂರು: ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ಸಂಕಷ್ಟ ಎದುರಿಸುತ್ತಿರುವ ರಾಘವೇಶ್ವರ ಶ್ರೀಗಳ ಜೊತೆ ಕಲ್ಲಡ್ಕ ಪ್ರಭಾಕರ ಭಟ್‍ಗೆ ಕೂಡ ಸಂಕಷ್ಟ ಎದುರಾಗಿದೆ.

    ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಮಾಡಿಕೊಳ್ಳಲು ಕಲ್ಲಡ್ಕ ಪ್ರಭಾಕರ ಭಟ್ ಕೂಡ ಕಾರಣ ಎಂದು ಸಿಐಡಿ ಹೇಳಿದೆ. ತನಿಖೆ ಮಾಡಿರುವ ಸಿಐಡಿ ಅಧಿಕಾರಿಗಳು ದೋಷಾರೋಪಣಾಟ್ಟಿಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರದ್ದೇ ಧ್ವನಿ ಎಂದು ಹೇಳಿದರೆ ವಿಧಿ ವಿಜ್ಞಾನ ಪ್ರಯೋಗಾಲಯ ಕೂಡ ಪ್ರಭಾಕರ ಭಟ್ ಅವರದ್ದೇ ಎಂದು ದೃಢ ಪಡಿಸಿದೆ.

    vlcsnap 2018 10 24 09h55m27s952

    ಆಡಿಯೋದಲ್ಲಿ ಏನಿದೆ?
    ಶ್ಯಾಂಪ್ರಸಾದ್ ಶಾಸ್ತ್ರಿ : ಹರಿ ಓಂ ಡಾಕ್ಟ್ರೇ ನಮಸ್ತೇ
    ಪ್ರಭಾಕರ ಭಟ್ : ಹಾ.. ಹೇಳಿ.
    ಶ್ಯಾಂಪ್ರಸಾದ್ ಶಾಸ್ತ್ರಿ : ಈಗ ಗಣೇಶಂಗೆ ಸೂತಕ ಇದ್ದು ನೆನಪಿದ್ದಿಲ್ಲೆ. ಒಂಟ್ಟಿಗೆ ಹೋಪ ಎರಡು ಮೂರು ದಿನ ಬಿಟ್ಟು ಅವಂಗೆ ಶುದ್ಧ ಆಗ್ತು ಆಗ ಒಟ್ಟಿಗೆ ಹೋಪ ಹೇಳಿ, ಶಿವಣ್ಣಂಗೆ ಕೇಳಿದೆ ಮತ್ತಾ ಪ್ರಭಾಕರ್ ಭಟ್ರು ಸಿಕ್ಕುತ್ತಾ ಹೇಳಿ ಅದಕ್ಕೆ.

    ಪ್ರಭಾಕರ ಭಟ್ : ಈಗ ಆನು ಎಲ್ಲರೊಟ್ಟಿಗೆ ಮಾತ್ನಾಡಿಟ್ಟಿದ್ದ, ನೀನೀಗ ಹೊರಟ್ಟಿದ್ದೆ ಹೋಗು, ಇದು ಬಾರಿ ಸೂಕ್ಷ್ಮ ವಿಷ್ಯ, ಮಕ್ಕಳಾಟ ಮಾಡಲಾಗ, ಅವ ಮಾಡಿ ಆಯ್ತು ಮಕ್ಕಳಾಟಿಕೆ. ಇದು ಬಾರಿ ಸೂಕ್ಷ್ಮ ಸಂಗತಿ. ನಾನು ಎಲ್ರೋಟ್ಟಿಗೆ ಮಾತಾಡಿ ಆಜು. ನೀನು ಹೊರಟು ಹೋಗಕ್ಕೀಗ ಇಲ್ಲದಿದ್ರೆ ಎಂಗಳ ಮರ್ಯಾದೆ ಎಲ್ಲಾ ಹೋಗ್ತು.

    ಶ್ಯಾಂಪ್ರಸಾದ್ ಶಾಸ್ತ್ರಿ : ಅಪ್ಪ ಮಾತಾಡಿ ಎಲ್ಲಾ ಆಯ್ತು.
    ಪ್ರಭಾಕರ ಭಟ್ : ಅದಕ್ಕೋಸ್ಕರ ನೀನು ಹೋಗು ಏನು ತೊಂದರೆ ಇಲ್ಲೆ. ಇಂದು ನೀನು ಮಾತ್ರ ಹೋಯಕ್ಕು ಇಂದು ನಿಘಂಟು ಮಾಡಿದ ಹೊತ್ತಲ್ಲಿ ನೀನು ಹೋಗಲೇ ಬೇಕು ಯೋಚ್ನೆ ಮಾಡಿದ್ದಿ?

    ಶ್ಯಾಂಪ್ರಸಾದ್ ಶಾಸ್ತ್ರಿ : ಈಗ 1, 1:15ಕ್ಕೆ ಹೋಹೋದು ಅಂತ ಯೋಚ್ನೆ ಮಾಡಿದ್ದಿ
    ಪ್ರಭಾಕರ ಭಟ್ : ಹಾ. ಸರಿ ಸರಿ ಅವನ್ಹತ್ರ ಹೇಳು. ಇನ್ನೊಮ್ಮೆ ನಾನು ಕರ್ಕೊಂಡು ಹೋಗ್ತೆ ಹೇಳು
    ಶ್ಯಾಂಪ್ರಸಾದ್ ಶಾಸ್ತ್ರಿ : ಅಂಬಗ ಹೇಳ್ತೆ. ಈಗ ಹೇಳ್ತಿ
    ಪ್ರಭಾಕರ ಭಟ್ : ಹಾಂ. ನೀನು 1:15ಕ್ಕೆ ಹೊರಟಕ್ಕು
    ಶ್ಯಾಂಪ್ರಸಾದ್ ಶಾಸ್ತ್ರಿ : ಹೇಳ್ತಾ ಈಗ

    vlcsnap 2018 10 24 09h55m46s594

    ಏನಿದು ಪ್ರಕರಣ?
    ಕೆದಿಲ ಶ್ಯಾಮಪ್ರಸಾದ್ ಶಾಸ್ತ್ರಿ 2014ರ ಆ.31ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ತನಿಖೆ ನಡೆಸಿದ್ದ ಸಿಐಡಿ ಆತ್ಮಹತ್ಯಗೆ ಕಲ್ಲಡ್ಕ ಪ್ರಭಾಕರ ಭಟ್, ಬೋನಂತಾಯ ಶಿವಶಂಕರ ಭಟ್ ಮತ್ತು ರಾಘವೇಶ್ವರ ಶ್ರೀಗಳ ಪ್ರೇರಣೆ ಇದೆ ಎಂದು ದೋಷಾರೋಪಣಾ ಪಟ್ಟಿ ಸಲ್ಲಿಸಿದೆ. ಶ್ಯಾಮಪ್ರಸಾದ್ ಶಾಸ್ತ್ರಿ ಅವರ ಅಣ್ಣನ ಪತ್ನಿ ರಾಮಕಥಾ ಗಾಯಕಿಯಾಗಿದ್ದು, ಅವರ ಮೇಲೆ ನಡೆದಿತ್ತು ಎನ್ನಲಾದ ಅತ್ಯಾಚಾರ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದ್ದ ಸಮಯದಲ್ಲೇ ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣವೂ ಸುದ್ದಿಯಾಗಿತ್ತು. ಈ ಪ್ರಕರಣದ ಆರೋಪಿಯಾಗಿರುವ ಕಲ್ಲಡ್ಕ ಪ್ರಭಾಕರ ಭಟ್‍ಗೆ ಪುತ್ತೂರಿನ ಐದನೇ ಹೆಚ್ಚುವರಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇವತ್ತು ಕೊನೆಯ ದಿನ: ಮಂಗಳೂರು ಮುಸ್ಲಿಮ್ಸ್ ಪೇಜ್

    ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇವತ್ತು ಕೊನೆಯ ದಿನ: ಮಂಗಳೂರು ಮುಸ್ಲಿಮ್ಸ್ ಪೇಜ್

    ಮಂಗಳೂರು: “ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇಂದು ಕೊನೆಯ ದಿನ” ಎಂದು ಮಂಗಳೂರು ಮುಸ್ಲಿಮ್ ಹೆಸರಿನಲ್ಲಿರುವ ಫೇಸ್‍ಬುಕ್ ಪೇಜ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಆಗಿದೆ.

    ಭಯೋತ್ಪಾದಕ ಕಲ್ಲಡ್ಕ ಪ್ರಭಾಕರ ಭಟ್ಟ ಸತ್ತರೆ ಅವನಿಗೆ ರಾಷ್ಟ್ರ ಧ್ವಜ ಹಾಕಿ ಗೌರವಿಸುತ್ತಿರೋ ಇಲ್ಲಾ ಕೇಸರಿ ಧ್ವಜ ಹಾಕುತ್ತಿರೋ? ಇವತ್ತು ಅವನ ಕೊನೆಯ ದಿನ..ತೀರ್ಮಾನಿಸಿ ಎಂದು ಈ ಎಫ್‍ಬಿ ಪೇಜ್‍ನಲ್ಲಿ ಸ್ಟೇಟಸ್ ಹಾಕಲಾಗಿದೆ.

    ಈ ಪೇಜ್ ನಲ್ಲಿ ರಾಜ್ಯಸರ್ಕಾರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದ್ದು, ಬಂಟ್ವಾಳದಲ್ಲಿ ಪ್ರತಿಭಟನೆ ಮುಂದಾದ ಸಂಘ ಪರಿವಾರದ ವ್ಯಕ್ತಿಗಳನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಲಾಗಿದೆ.

    ಪೋಸ್ಟ್ ನಲ್ಲಿ ಏನಿದೆ?
    ಕಲಾಯಿ ಅಸ್ರಫ್ ಅವರನ್ನು ಆರ್‍ಎಸ್‍ಎಸ್ ಸಂಘಪರಿವಾರದವರು ಭೀಕರವಾಗಿ ಕೊಲೆ ಮಾಡಿದನ್ನು ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ನಡೆಸಲು ತಯಾರಾದಾಗ, ಇಲ್ಲಿ ನಿಷೇಧಾಜ್ಞೆ ಇದೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಪ್ರತಿಭಟನೆಗೆ ಮುಂದಾದರೆ ಎಲ್ಲರನ್ನೂ ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಕಾಂಗ್ರೆಸ್ ಸರಕಾರದ ಪೋಲೀಸ್ ಇಲಾಖೆ ಹೇಳಿತ್ತು.

    ಈಗ ಏನು ಮಾಡುತ್ತಿದೆ? ಇಷ್ಟು ಸಂಖ್ಯೆಯಲ್ಲಿ ಸಂಘಪರಿವಾರ ದವರು ಪ್ರತಿಭಟನೆಗಾಗಿ ಬಿಸಿ ರೋಡ್ ಬಂದು ಸೇರಲು ಎಲ್ಲಾ ರೀತಿಯ ಸಹಕಾರ ಪೊಲೀಸ್ ಇಲಾಖೆ ಮಾಡುವಂತೆ ಮಾಡಿದ್ದು ಪ್ರಭಾಕರ ಭಟ್ಟನಾ ಇಲ್ಲ? ಉಸ್ತುವಾರಿ ಸಚಿವರಾ? ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರ ಉತ್ತರಿಸಬೇಕು.

    ನಿಷೇಧಾಜ್ಞೆ ಯನ್ನು ಲೆಕ್ಕಿಸದೆ ಸರಕಾರಕ್ಕೆ ಕಾನೂನಿಗೆ ಸವಾಲೆಸೆದು ಪ್ರತಿಭಟನೆಗಾಗಿ ಅಲ್ಲಿ ಬಂದು ಸೇರಿದ ಪ್ರತಿಯೊಬ್ಬರ ಮೇಲೂ ಕೇಸು ದಾಖಲಿಸಿ ಜೈಲಿಗೆ ಕಳುಹಿಸುವ ಧೈರ್ಯ ಕಾಂಗ್ರೆಸ್ ಸರಕಾರಕ್ಕೆ ಇದೆಯಾ? ಕಾನೂನು ಕ್ರಮವೆಲ್ಲಾ ಮುಸ್ಲಿಮರ ಮೇಲೆ ಮಾತ್ರ ಪ್ರಯೋಗಿಸಲಿಕ್ಕಾಗಿ ಮಾತ್ರ ಇರುವುದಾ ಕಾಂಗ್ರೆಸ್ ನಾಯಕರೇ ಉತ್ತರಿಸಿ.

    ಈ ಪೋಸ್ಟಿಗೆ #ಅಕ್ರವಾಗಿ_ಪ್ರತಿಭಟನೆ_ನಡೆಸಿದ_ಸಂಘಪರಿವಾರದ_ಗೂಂಡಗಳ_ಮೇಲೆ_ಲಾಠಿ_ಬೀಸಲಾಗದ_ಪೋಲಿಸರೇನು_ಗಂಡಸರಲ್ಲವೇ ಎನ್ನುವ ಹ್ಯಾಶ್ ಟ್ಯಾಗ್ ಬಳಸಲಾಗಿದೆ. ಈ ಪೋಸ್ಟಿಗೆ ಸಾಕಷ್ಟು ಪರ ವಿರೋಧ ಪ್ರತಿಕ್ರಿಯೆಗಳು ಬಂದಿದೆ.

     

    mangaluru muslims 1

    mangaluru muslims 2