Thursday, 19th September 2019

Recent News

3 weeks ago

ಶಾರ್ಟ್ ಸರ್ಕ್ಯೂಟ್- ಆರು ಎಕ್ರೆ ಕಬ್ಬು ಬೆಂಕಿಗಾಹುತಿ

ಚಾಮರಾಜನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬಿಗೆ ಬೆಂಕಿ ಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಪಾಪಣ್ಣ ಆರು ಎಕರೆ ಜಮೀನಿನಲ್ಲಿ ಕಬ್ಬನ್ನು ಬೆಳೆದಿದ್ದರು. ಆದರೆ ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ರೂಪಾಯಿ ಬೆಳೆ ಬೆಂಕಿಗೆ ಆಹುತಿಯಾಗಿದೆ. ಕೆಇಬಿ ಅಧಿಕಾರಿಗಳು ಎಳೆದಿರುವ ವಿದ್ಯುತ್ ಕಂಬದ ಲೈನ್ ಜೋತು ಬಿದ್ದಿರುವ ಹಿನ್ನೆಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬು ಹೊತ್ತಿ ಉರಿದಿದೆ. ಈಗಾಗಲೇ ಕಬ್ಬನ್ನು ಬೆಳೆಯುವ ಸಲುವಾಗಿ ಲಕ್ಷಾಂತರ ರೂಪಾಯಿ […]

3 months ago

ಕಾರ್ಖಾನೆ ಬೇಜವಾಬ್ದಾರಿಯಿಂದ ಜೀವಜಲಕ್ಕೆ ಕುತ್ತು- ಬೋರ್‌ವೆಲ್‌ನಲ್ಲಿ ಬರ್ತಿದೆ ಕೆಂಪು ಮಿಶ್ರಿತ ಹಳದಿ ನೀರು

ಮೈಸೂರು: ನಮ್ಮೂರಲ್ಲೊಂದು ಸಕ್ಕರೆ ಕಾರ್ಖಾನೆಯಾದರೆ ಉದ್ಯೋಗ ಸಿಗುತ್ತದೆ, ಜೊತೆಗೆ ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬನ್ನು ಊರಿನಲ್ಲಿರುವ ಕಾರ್ಖಾನೆಗೆ ಕಳುಹಿಸಬಹುದು. ಕಾರ್ಖಾನೆಯಿಂದ ಬದುಕು ಹಸನಾಗುತ್ತದೆ ಅಂದು ಕೊಂಡವರಿಗೆ ಇದೀಗ ಆ ಕಾರ್ಖಾನೆ ಕುಡಿಯುವ ನೀರಿನ ಕಂಟಕ ತಂದಿಟ್ಟಿದೆ. ಜೊತೆಗೆ ಭೂಮಿಯಲ್ಲಿ ಬೆಳೆ ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಾರ್ಖಾನೆ ವಿರುದ್ಧವೇ ಗ್ರಾಮಸ್ಥರು ಬೀದಿಗಿಳಿದಿದ್ದಾರೆ. ಹೌದು. ಮೈಸೂರು ಜಿಲ್ಲೆಯ...

ಸಿಎಂ ಆದೇಶಕ್ಕೂ ಕಿಮ್ಮತ್ತಿಲ್ಲ- ಕಬ್ಬು ಬೆಳೆಗಾರರಿಗೆ ಇನ್ನೂ ಬಾಕಿ ಪಾವತಿಯಾಗಿಲ್ಲ

3 months ago

ಬಾಗಲಕೋಟೆ: ಈ ಕಬ್ಬು ಬೆಳೆಗಾರರ ಸಮಸ್ಯೆ ಸದ್ಯಕ್ಕೆ ಮುಗಿಯೋ ಹಾಗೆ ಕಾಣುತ್ತಿಲ್ಲ. ಪ್ರತಿ ವರ್ಷ ಬೆಳೆಗಾರರು ಬಾಕಿ ಪಾವತಿಗೆ ಹೋರಾಟ ಮಾಡುತ್ತಿದ್ದರೂ ಸರ್ಕಾರ ಮಾತ್ರ ಕ್ಯಾರೆ ಅನ್ನುತ್ತಿಲ್ಲ. ಪದೇ ಪದೇ ಕಾರ್ಖಾನೆ ಮಾಲೀಕರು ಬಾಕಿ ಹಣ ಇವತ್ತು ಕೊಡ್ತೀವಿ, ನಾಳೆ ಕೊಡ್ತಿವಿ...

ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ- ನೋಡ ನೋಡುತ್ತಿದ್ದಂತೆ ಸುಟ್ಟುಹೋಯ್ತು 10 ಎಕ್ರೆ ಬೆಳೆ

9 months ago

ಸಾಂದರ್ಭಿಕ ಚಿತ್ರ ಬೆಳಗಾವಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಟಾವಿಗೆ ಬಂದಿದ್ದ ಸುಮಾರು 10 ಕ್ಕೂ ಹೆಚ್ಚು ಎಕರೆ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರಟೇಕ ಗ್ರಾಮದಲ್ಲಿ ನಡೆದಿದೆ. ಇಂದು ಮಧ್ಯಾಹ್ನದ ವೇಳೆ ಚಂದೂರಟೇಕ ಗ್ರಾಮದ ಕಬ್ಬಿನ ಗದ್ದೆಯಲ್ಲಿದ್ದ...

ಕಟಾವ್ ಮಾಡಿದ್ದ ಕಬ್ಬು ನಿರಾಕರಿಸಿದ್ದಕ್ಕೆ ಫ್ಯಾಕ್ಟರಿಯಲ್ಲೇ ರೈತ ಆತ್ಮಹತ್ಯೆ!

9 months ago

ಗದಗ: ಕಟಾವ್ ಮಾಡಿ ಫ್ಯಾಕ್ಟರಿಗೆ ತಂದಿದ್ದ ಕಬ್ಬನ್ನು ಖರೀದಿ ಮಾಡುವುದಿಲ್ಲ ಎಂದು ಹೇಳಿದ್ದಕ್ಕೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮನಕಲುಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ತಿಗರಿ ಗ್ರಾಮದ ಸಣ್ಣಹನುಮಪ್ಪ ತಿಗರಿ(55) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. ಮುಂಡರಗಿ...

ಸರ್ಕಾರ & ಸಕ್ಕರೆ ಕಾರ್ಖಾನೆ ಮಾಲೀಕರ ಸೂತ್ರಕ್ಕೆ ಒಪ್ಪದ ರೈತರು -ಮುಂದುವರೆದ ಪ್ರತಿಭಟನೆ

10 months ago

ಬೆಳಗಾವಿ: ರಾಜ್ಯ ಸರ್ಕಾರಕ್ಕೆ ಸಕ್ಕರೆ ಸಮಸ್ಯೆ ಜಾಸ್ತಿಯಾಗುವ ಲಕ್ಷಣ ಕಾಣಿಸುತ್ತಿದೆ. ಸಕ್ಕರೆ ಕಾರ್ಖಾನೆಗಳ ಸಾಹುಕಾರರ ಜೊತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಡೆಸಿದ ಸಂಧಾನ ಸಭೆಯೇನೋ ಸಕ್ಸಸ್ ಆಗಿದೆ. ಸರ್ಕಾರ ಫಿಫ್ಟಿ ಫಿಫ್ಟಿ ಸೂತ್ರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಅಸ್ತು ಎಂದಿದ್ದಾರೆ. ಅಂತೂ...

ಸಿಎಂ ಜೊತೆಗಿನ ಕಬ್ಬು ಬೆಳೆಗಾರರ ಸಭೆ ಯಶಸ್ವಿ- ಎಫ್ಆರ್​ಪಿ ದರ ನೀಡುವಂತೆ ಸೂಚನೆ

10 months ago

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತ ಮುಖಂಡರ ಜೊತೆ ನಡೆಸಿದ ಕಬ್ಬಿನ ಬಿಲ್ ಬಾಕಿ ಕುರಿತ ಸಭೆ ಸಂಪೂರ್ಣ ಯಶಸ್ವಿಯಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಏನೋ ಮಾತನಾಡಿದೇ ಅಂತ ಪ್ರತಿಭಟನೆ ನಡೆಯಿತು. ಇವತ್ತಿನ ಸಭೆಗೆ ರೈತರ...

ಬಾಗಲಕೋಟೆ ರೈತನಿಗೆ ಸಾಲಕಟ್ಟುವಂತೆ ಸಮನ್ಸ್!

10 months ago

ಬಾಗಲಕೋಟೆ: ಒಂದು ಕಡೆ ಕಬ್ಬು ಬೆಳೆಗಾರರ ಹೋರಾಟ ಮುಗಿಲು ಮುಟ್ಟಿದೆ. ಈ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕಬ್ಬು ಬೆಳೆಗಾರನೋರ್ವರಿಗೆ ಬ್ಯಾಂಕ್ ನಿಂದ ಕೋರ್ಟ್ ಸಮನ್ಸ್ ಬಂದಿದೆ. ಸಾಲ ಮರುಪಾವತಿ ಮಾಡುವಂತೆ ಸಮನ್ಸ್ ಜಾರಿಯಾಗಿದ್ದು, ರೈತ ಕಂಗಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ...