Saturday, 15th June 2019

9 months ago

ಎಂಜಿನಿಯರ್ ಆಗಲು ಸಾಧ್ಯವಾಗ್ತಿಲ್ಲ, ನಾನು ಬದ್ಕೋದಕ್ಕಿಂತ ಸಾಯೋದೇ ಮೇಲು

-ಡೆತ್‍ನೋಟ್ ಬರೆದು ವಿದ್ಯಾರ್ಥಿನಿ ನೇಣಿಗೆ ಶರಣು ಶಿವಮೊಗ್ಗ: ಎಂಜಿನಿಯರ್ ಆಗಲು ನನಗೆ ಸಾಧ್ಯವಾಗ್ತಿಲ್ಲ, ನಾನು ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಶಿವಮೊಗ್ಗದ ಐಐಟಿ ವಿದ್ಯಾರ್ಥಿನಿಯೊಬ್ಬಳು ಅಸ್ಸಾಂನ ಗುಹವಾಟಿಯಲ್ಲಿನ ಹಾಸ್ಟೆಲ್‍ನಲ್ಲಿ ಆತ್ಮಹತ್ಯಗೆ ಶರಣಾಗಿದ್ದಾಳೆ. ಅಸ್ಸಾಂನ ಗುವಾಹಟಿ ಐಐಟಿಯ ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥಿನಿ ನಾಗಶ್ರೀ ಐತಾಳ್ ಹಾಸ್ಟೆಲ್ ಕೊಠಡಿಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಗಶ್ರೀ ಐತಾಳ್ ಕೇವಲ ಒಂದೂವರೆ ತಿಂಗಳ ಹಿಂದೆಯಷ್ಟೇ ಐಐಟಿ ಸೇರಿದ್ದಳು. ಈಕೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮತ್ತಿಮನೆ ಸಮೀಪದ ಸೂರೆಘಟ್ಟದ […]

9 months ago

ಹಾಸನಕ್ಕೆ ಐಐಟಿ ಹೆಂಗೆ ತರಬೇಕು ಅಂತ ನಂಗೊತ್ತು: ರೇವಣ್ಣ

ಹಾಸನ: ಸ್ವಕ್ಷೇತ್ರಕ್ಕೆ ಬೆಳಗಾವಿಯಿಂದ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್) ಕಚೇರಿಯನ್ನು ಸ್ಥಳಾಂತರ ಮಾಡಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್‍ಡಿ ರೇವಣ್ಣ ಈಗ ಹಾಸನಕ್ಕೆ ಐಐಟಿ ಹೇಗೆ ತರಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ. ನಗರದ ಕಲಾಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2019ರ ವೇಳೆಗೆ ಜಿಲ್ಲೆಯಲ್ಲಿ ಐಐಟಿ ಕಾಲೇಜು ಆರಂಭವಾಗುವುದು...

ಬಡತನದಲ್ಲೇ ಓದಿ ದೆಹಲಿ ಐಐಟಿ ಯಲ್ಲಿ ಪ್ರವೇಶ ಪಡೆದ ಆದಿವಾಸಿ ವಿದ್ಯಾರ್ಥಿಗಳು

1 year ago

ರಾಯ್‍ಪುರ್: ಸಾಧಿಸುವ ಛಲವಿರುವವರಿಗೆ ಬಡತನ ಅಡ್ಡಿ ಬರಲ್ಲ ಎಂಬುದನ್ನ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಛತ್ತೀಸ್‍ಗಡದ ಆದಿವಾಸಿ ಜನಾಂಗದ ಇಬ್ಬರು ವಿದ್ಯಾರ್ಥಿಗಳು ದೆಹಲಿಯ ಐಐಟಿಯಲ್ಲಿ ಪ್ರವೇಶಾತಿ ಪಡೆಯುವ ಮೂಲಕ ಇದನ್ನ ಸಾಬೀತುಪಡಿಸಿದ್ದಾರೆ. ಛತ್ತೀಸ್‍ಗಢದ ಜಸ್ಪುರ್ ಜಿಲ್ಲೆಯ ಕುದೆಕೆಲಾ ಹಾಗೂ ಜಾಗ್ರಮ್ ಗ್ರಾಮದ ಅದಿವಾಸಿ ಜನಾಂಗಕ್ಕೆ...

ಫಸ್ಟ್ ಟೈಂ ಕ್ಯಾಂಪಸ್ ಆಯ್ಕೆಗಾಗಿ ಭಾರತಕ್ಕೆ ಬರುತ್ತಿದೆ ಆಪಲ್

2 years ago

ಹೈದರಾಬಾದ್: ಪ್ರಖ್ಯಾತ ಐಫೋನ್ ತಯಾರಕಾ ಕಂಪೆನಿ ಆಪ್ ಇದೇ ಮೊದಲ ಬಾರಿಗೆ ಕ್ಯಾಂಪಸ್ ಸೆಲೆಕ್ಷನ್‍ಗಾಗಿ ಭಾರತಕ್ಕೆ ಬರುತ್ತಿದೆ. ಈ ವರ್ಷ ಹೈದರಾಬಾದ್ ನಲ್ಲಿರುವ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿಗೆ ಕ್ಯಾಂಪಸ್ ಸಂದರ್ಶನಕ್ಕೆ ಆಪಲ್ ಬರಲಿದೆ. ಇದೇ ಮೊದಲ ಬಾರಿಗೆ ಕ್ಯಾಂಪಸ್...

ನೀಟ್‍ನಂತೆ 2018ರಿಂದ ಎಂಜಿನಿಯರಿಂಗ್ ಏಕರೂಪದ ಪರೀಕ್ಷೆ

2 years ago

ನವದೆಹಲಿ: ಎಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚರ್ ಕೋರ್ಸ್‍ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಒಂದೇ ಪ್ರವೇಶ ಪರೀಕ್ಷೆ ನಡೆಸುವ ಪ್ರಸ್ತಾವನೆಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ. ವೈದ್ಯಕೀಯ ಕೋರ್ಸ್‍ಗಳಿಗೆ ನೀಟ್ ಪರೀಕ್ಷೆ ಇರುವ ಮಾದರಿಯಲ್ಲೇ ಇನ್ಮುಂದೆ ಆರ್ಕಿಟೆಕ್ಚರ್ ಹಾಗೂ ಎಂಜಿನಿಯರಿಂಗ್‍ಗೆ ದೇಶದಲ್ಲಿ ಒಂದೇ ಪ್ರವೇಶ ಪರೀಕ್ಷೆ...