Tuesday, 19th November 2019

1 month ago

ಐಎಂಎ ಕೇಸಲ್ಲಿ ಜೈಲು ಸೇರಿದ್ದವನ ಜೊತೆ ಜಮೀರ್ ಅಹ್ಮದ್ ಪಾರ್ಟಿ

ಬೆಂಗಳೂರು: ಐಎಂಎ ಬಹು ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯ ಜೊತೆಗೆ ಮಾಜಿ ಸಚಿವ ಜಮೀರ್ ಅಹ್ಮದ್  ಹಾಗೂ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಪಾರ್ಟಿ ಮಾಡಿದ್ದಾರೆ. ಐಎಂಎ ಪ್ರಕರಣದಲ್ಲಿ ಜೈಲು ಸೇರಿದ್ದ ಮುಜಾಹಿದ್ದೀನ್ ಅಕ್ಟೋಬರ್ 13ರಂದು ಜಾಮೀನಿನ ಆಧಾರದ ಮೇಲೆ ಹೊರ ಬಂದಿದ್ದ. ಅಂದು ರಾತ್ರಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಮುಜಾಹಿದ್ದೀನ್ ಜೊತೆಗೆ ಪಾರ್ಟಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಈ ನಡೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಐಎಂಎ ಪ್ರಕರಣದಲ್ಲಿ ಮುಖ್ಯ ಆರೋಪಿ […]

1 month ago

ಐಎಂಎ ಪ್ರಕರಣ: ಜೈಲಿನಿಂದ ಹೊರಬಂದವನಿಗೆ ರಾಜಮರ್ಯಾದೆ

ಬೆಂಗಳೂರು: ಐಎಂಎ ಜ್ಯುವೆಲ್ಸ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಅಮಾಯಕರ ಹಣ ತಿಂದವನಿಗೆ ರಾಜಮರ್ಯಾದೆ ನೀಡಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ನಿರ್ದೇಶಕರಲ್ಲಿ ಒಬ್ಬನಾದ ಮುಜಾಹಿದ್ದೀನ್ ಜೈಲಿನಿಂದ ಹೊರಬಂದಿದ್ದು, ಆತನಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಐಎಂಎ ಕೇಸಲ್ಲಿ ಮುಖ್ಯ ಆರೋಪಿ ಆಗಿರುವ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ಪರಾರಿಯಾಗಲು ಮುಜಾಹಿದ್ದೀನ್ ಸಹಾಯ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು...

ಅತ್ತ ಡಿಕೆಶಿಗೆ ಜೈಲು, ಇತ್ತ ಜಮೀರ್ ಅಹ್ಮದ್‍ಗೆ ಸಿಬಿಐ ನೋಟಿಸ್

2 months ago

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ತಿಹಾರ್ ಜೈಲಿಗೆ ಶಿಫ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್‍ನ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ....

ಐಎಂಎ ಪ್ರಕರಣ ಸಿಬಿಐಗೆ ನೀಡುವಂತೆ ಮೊದಲು ಆಗ್ರಹಿಸಿದ್ದು ನಾನು: ಜಮೀರ್ ಅಹಮದ್

2 months ago

ಬೆಂಗಳೂರು: ಬಹುಕೋಟಿ ವಂಚನೆ ಐಎಂಎ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಮೊದಲು ಆಗ್ರಹಿಸಿದ್ದು ನಾನೇ ಎಂದು ಮಾಜಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅವರು, ನನ್ನ ಕ್ಷೇತ್ರದ ಕೆಲಸ ಸಂಬಂಧ...

ಮನ್ಸೂರ್‌ನಿಂದ 38 ಕೆಜಿ ಚಿನ್ನ ಕರಗಿಸಿದ 9 ಕೋಟಿ ಪಡೆದಿದ್ದ ಸ್ನೇಹಿತನಿಗೆ ನೋಟಿಸ್

3 months ago

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸದ್ಯ ಎಸ್‍ಐಟಿಯಿಂದ ಸಿಬಿಐಗೆ ವರ್ಗಾವಣೆ ಆಗಿದೆ. ಆದರೆ ಮನ್ಸೂರ್ ಖಾನ್ ಚಿನ್ನ ಕರಗಿಸಿ ಬರೋಬ್ಬರಿ 9 ಕೋಟಿ ರೂ. ಹಣವನ್ನು ಸ್ನೇಹಿತನಿಗೆ ಕೊಟ್ಟಿದ್ದು, ಈ ಬಗ್ಗೆ ತಿಳಿದ ಬಳಿಕ ಎಸ್‍ಐಟಿಯಿಂದ ಮನ್ಸೂರ್ ಸ್ನೇಹಿತನಿಗೆ ನೋಟಿಸ್...

ಮನ್ಸೂರ್ ಖಾನ್ ಪೊಲೀಸ್ ಕಸ್ಟಡಿ ಅಂತ್ಯ- ಎಸ್‍ಐಟಿಗೆ ಸಿಕ್ಕಿಲ್ಲ ಪೂರ್ಣ ಮಾಹಿತಿ

3 months ago

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ. ಸತತ 14 ದಿನಗಳ ಕಾಲ ಮನ್ಸೂರ್ ಖಾನ್ ವಿಚಾರಣೆ ನಡೆಸಿದರೂ ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆ. ಶಿವಾಜಿನಗರ ಅನರ್ಹ ಶಾಸಕ ರೋಷನ್ ಬೇಗ್‍ಗೆ 400 ಕೋಟಿ...

ತೀವ್ರಗೊಂಡ ಮನ್ಸೂರ್ ವಿಚಾರಣೆ – ಜಮೀರ್, ಬೇಗ್‍ಗೆ ಎಸ್‍ಐಟಿ ನೋಟಿಸ್ ಜಾರಿ

4 months ago

ಬೆಂಗಳೂರು: ಬಹುಕೋಟಿ ವಂಚಕ ಮನ್ಸೂರ್ ಖಾನ್ ವಿಚಾರಣೆ ಇಡಿ ತೀವ್ರಗೊಳಿಸಿದ್ದರೆ ಇತ್ತ ವಿಶೇಷ ತನಿಖಾ ತಂಡ(ಎಸ್‍ಐ) ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಶಾಸಕ ರೋಷನ್ ಬೇಗ್‍ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಈ...

ಐಎಂಎ ಪ್ರಕರಣ ಮುಚ್ಚಲು ಎಸ್‍ಐಟಿ ಬಳಕೆ: ಸೊಗಡು ಶಿವಣ್ಣ

4 months ago

ತುಮಕೂರು: 40 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಐಎಂಎ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರವೇ ಇಲ್ಲಾ, ಮಳೆ ಬೆಳೆ ಇಲ್ಲಾ, ಶವ ಸಂಸ್ಕಾರಕ್ಕೂ ನೀರಿಲ್ಲದ್ದಂತಹ ಪರಿಸ್ಥಿತಿ...