Thursday, 19th July 2018

2 weeks ago

ಮಾನವ ಸಹಿತ ಬಾಹ್ಯಾಕಾಶ ಪ್ರಯಾಣ ಮತ್ತಷ್ಟು ಹತ್ತಿರ: ಇಸ್ರೋ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಕನಸಿನ ಯೋಜನೆ `ಮಾನವ ಸಹಿತ ಬಾಹ್ಯಾಕಾಶ ಪಯಣ’ ಮತ್ತಷ್ಟು ಹತ್ತಿರವಾಗಿದ್ದು, ಇಸ್ರೋ ನಡೆಸಿದ ಪರೀಕ್ಷೆ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಇಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ ಬೆಳಿಗ್ಗೆ 7 ಗಂಟೆಗೆ ಇಸ್ರೋ ಈ ಪರೀಕ್ಷೆ ಮಾಡಿದ್ದು, ನಿರೀಕ್ಷೆಯಂತೆಯೇ ನೌಕೆ ಉಡಾವಣಾ ವಾಹಕದಿಂದ ಬೇರ್ಪಟ್ಟು ಪ್ಯಾರಾಚೂಟ್ ಗಳ ಮೂಲಕ ಸುರಕ್ಷಿತವಾಗಿ ಭೂಮಿಗೆ ಇಳಿದಿದೆ. ಭವಿಷ್ಯದಲ್ಲಿ ಮಾನವರನ್ನು ಬಾಹ್ಯಕಾಶಕ್ಕೆ ಕಳುಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಮುಂದಾಗಿರುವ ಇಸ್ರೋ […]

4 months ago

48 ಗಂಟೆಯ ಬಳಿಕ ಸಂಪರ್ಕ ಕಳೆದುಕೊಂಡ ಜಿಸ್ಯಾಟ್-6ಎ ಉಪಗ್ರಹ

ನವದೆಹಲಿ: ಉಡಾವಣೆಗೊಂಡ 48 ಘಂಟೆ ಬಳಿಕ ಜಿಸ್ಯಾಟ್-6ಎ ಉಪಗ್ರಹ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇಸ್ರೋ ದೃಢಪಡಿಸಿದೆ. ಮಾರ್ಚ್ 29 ಗುರುವಾರದಂದು ಸಂವಹನ ಉಪಗ್ರಹ ಉಡಾವಣೆಯಾಗಿತ್ತು. ದೇಶದ ಸಂವಹನ ಕ್ಷೇತ್ರದ ಸುಧಾರಣೆಗಾಗಿ ಉಪಗ್ರಹವನ್ನು  ಉಡಾವಣೆ ಮಾಡಲಾಗಿತ್ತು. ಸಂಪೂರ್ಣ ಭೂ ಭಾಗದ ಸಂಪರ್ಕವನ್ನು ಈ ಭೂಸ್ಥಿರ ಉಪಗ್ರಹದಿಂದ ನಿರೀಕ್ಷೆ ಮಾಡಲಾಗಿತ್ತು. ಶುಕ್ರವಾರ ಉಪಗ್ರಹವನ್ನು ಎರಡನೇ ಕಕ್ಷೆಗೆ ಏರಿಸುವಾಗ ಸಂಪರ್ಕ...

ಕೆಲವೇ ನಿಮಿಷಗಳಲ್ಲಿ ಇಸ್ರೋದಿಂದ ಶತಕ ಸಾಧನೆ- ಭಾರತದ 100ನೇ ಉಪಗ್ರಹದ ಜೊತೆ 30 ಉಪಗ್ರಹಗಳ ಉಡಾವಣೆ

6 months ago

ನವದೆಹಲಿ: ಇನ್ನು ಕೆಲವೇ ನಿಮಿಷಗಳಲ್ಲಿ ನಮ್ಮ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಂದು ಬೆಳಗ್ಗೆ 9.29ಕ್ಕೆ ಇಸ್ರೋ ಭಾರತದ 100ನೇ ಉಪಗ್ರಹವನ್ನು ನಭಕ್ಕೆ ಚಿಮ್ಮಿಸಲಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಉಡಾವಣಾ ಕೇಂದ್ರದಿಂದ ಭಾರತದ ಕಾರ್ಟೋಸ್ಯಾಟ್-2 ಸಿರೀಸ್‍ನ ಒಂದು,...

ರಾಜ್ಯಪಾಲನಾಗಲ್ಲ, ವಿಜ್ಞಾನಿಯಾಗಿಯೇ ಇರ್ತೀನಿ: ಕೇಂದ್ರದ ಆಫರ್ ತಿರಸ್ಕರಿಸಿದ್ದ ಯು.ಆರ್.ರಾವ್

12 months ago

ಉಡುಪಿ: ಇಸ್ರೋ ಮಾಜಿ ಅಧ್ಯಕ್ಷ ಪ್ರೊ. ಯು. ಆರ್ ರಾವ್ ಅವರಿಗೆ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರಾಗುವ ಅವಕಾಶ ಸಿಕ್ಕಿತ್ತು. ಆದರೆ ನಾನು ವಿಜ್ಞಾನಿಯಾಗಿಯೇ ಮುಂದುವರೆಯುತ್ತೇನೆ. ರಾಜಕಾರಣಿಯಾಗುವುದಿಲ್ಲ ಎಂದು ಹೇಳಿ ತನಗೆ ಸಿಕ್ಕಿದ್ದ ಆಫರ್ ಅನ್ನು ಅವರು ನಯವಾಗಿ ತಿರಸ್ಕರಿಸಿದ್ದರು. ಯು.ಆರ್ ರಾವ್...

ಇಸ್ರೋ ಮಾಜಿ ಅಧ್ಯಕ್ಷ ಯು.ಆರ್.ರಾವ್ ಇನ್ನಿಲ್ಲ- ವಿಜ್ಞಾನಿ ನಿಧನಕ್ಕೆ ಗಣ್ಯರ ಕಂಬನಿ

12 months ago

ಬೆಂಗಳೂರು: ಇಸ್ರೋ ಮಾಜಿ ಅಧ್ಯಕ್ಷ ಯು.ಆರ್.ರಾವ್ ಇಂದು ಬೆಳಗಿನ ಜಾವ ಸುಮಾರು 2.30ರ ಸಮಯದಲ್ಲಿ ಮೃತಪಟ್ಟಿದ್ದಾರೆ. ವಿಜ್ಞಾನಿಯ ನಿಧನಕ್ಕೆ ನಾಡಿನ ಗಣ್ಯರೆಲ್ಲ ಸಂತಾಪ ಸೂಚಿಸಿದ್ದಾರೆ. ರಾವ್ ಭಾರತದ ಮೊದಲ ಕೃತಕ ಉಪಗ್ರಹ ಆರ್ಯಭಟ ದಲ್ಲಿಯೂ ಕೆಲಸ ನಿರ್ವಹಿಸಿದ್ದರು. ಇದೇ ತಿಂಗಳು ಹೃದಯ...

29 ವಿದೇಶಿ ಉಪಗ್ರಗಳ ಉಡಾವಣೆಯಿಂದ ಇಸ್ರೋಗೆ ಬಂದ ಆದಾಯವೆಷ್ಟು ಗೊತ್ತಾ?

12 months ago

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್‍ಎಲ್‍ವಿ) ಅನೇಕ ಉಪಗ್ರಹಗಳನ್ನ ಕಕ್ಷೆಗೆ ಸೇರಿಸುವ ಮೂಲಕ ಇಸ್ರೋದ ಹಿರಿಮೆಯನ್ನು ಹೆಚ್ಚಿಸುವ ಜೊತೆ ಜೊತೆಗೆ ಕೋಟಿ ಕೋಟಿ ಆದಾಯವನ್ನೂ ತಂದುಕೊಟ್ಟಿದೆ. ವಿವಿಧ ದೇಶಗಳ ಅನೇಕ ಉಪಗ್ರಹಗಳನ್ನ ಒಂದೇ ರಾಕೆಟ್‍ನಲ್ಲಿ ಹೊತ್ತೊಯ್ದು...

ಬಾಹ್ಯಾಕಾಶದಲ್ಲಿ ಮುಂದುವರಿದ ಇಸ್ರೋ ಪರಾಕ್ರಮ: ಜಿಸ್ಯಾಟ್-17 ಉಪಗ್ರಹ ಉಡಾವಣೆ ಯಶಸ್ವಿ

1 year ago

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪರಾಕ್ರಮ ಮುಂದುವರಿದಿದ್ದು, ಹವಾಮಾನ ದತ್ತಾಂಶ, ಉಪಗ್ರಹ ಆಧರಿತ ಶೋಧ ಸೇವೆಗೆ ಬಳಕೆಯಾಗುವ ಜಿಸ್ಯಾಟ್-17 ಉಡಾವಣೆ ಯಶಸ್ವಿಯಾಗಿದೆ. ಫ್ರೆಂಚ್ ಗಯಾನದ ಕೌರೌ ಉಡಾವಣಾ ಕೇಂದ್ರದಿಂದ ಭಾರತೀಯ ಕಾಲಮಾನ ನಸುಕಿನ ಜಾವ 2.30ರ ವೇಳೆಗೆ 3,477...

ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!

1 year ago

ನವದೆಹಲಿ: ಮಾನವರಹಿತ ಲೆವೆಲ್ ಕ್ರಾಸಿಂಗ್ ನಿಂದಾಗಿ ರೈಲಿಗೆ ಸಿಕ್ಕಿ ಅಪಘಾತವಾಗುವುದನ್ನು ತಡೆಯಲು ರೈಲ್ವೇ ಸಚಿವಾಲಯ ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನೆರವನ್ನು ಪಡೆದುಕೊಂಡಿದೆ. ಹೌದು. ಉಪಗ್ರಹ ಆಧಾರಿತ ಚಿಪ್ ವ್ಯವಸ್ಥೆಯನ್ನು ಇಸ್ರೋ ಅಭಿವೃದ್ಧಿಪಡಿಸಿದ್ದು ಪರೀಕ್ಷಾರ್ಥ ಪ್ರಯೋಗವಾಗಿ ಮುಂಬೈ ಮತ್ತು ಅಸ್ಸಾಂ...