Recent News

1 month ago

ಒಗ್ಗಟ್ಟಿನಲ್ಲಿ ಬಲ- ಸಾಬೀತುಪಡಿಸಿದ ಇರುವೆ ಸೈನ್ಯ

-ಸ್ಪೂರ್ತಿ ಚಿಲುಮೆಯ ವಿಡಿಯೋ ನೋಡಿ ಬೆಂಗಳೂರು: ಓರ್ವನಿಂದ ಸಾಧ್ಯವಾಗದಿದ್ದರೆ ಅದಕ್ಕೆ ಮತ್ತೋರ್ವನ ಸಹಾಯ ಪಡೆದುಕೊಳ್ಳಬೇಕು. ಒಗ್ಗಟ್ಟಿನಿಂದ ಯಾವುದೇ ಕೆಲಸ ಮಾಡಿದ್ದಲ್ಲಿ ಅದಕ್ಕೆ ಯಶಸ್ಸು ಸಿಗುತ್ತೆ ಎಂಬ ಮಾತನ್ನು ಇರುವೆಗಳ ಸೈನ್ಯವೊಂದು ಸಾಬೀತು ಮಾಡಿದೆ. ಇರುವೆ ಸೈನ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದೊಂದು ಸ್ಪೂರ್ತಿಯ ಚಿಲುಮೆ ಎಂದು ಹಾಡಿ ಹೊಗಳಿದ್ದಾರೆ. ಇರುವೆಗಳ ಸಾಲೊಂದು ಕಾಂಪೌಂಡ್ ಗಳಿಗೆ ಅಳವಡಿಸಿರುವ ಬ್ಯಾರಿಕೇಡ್ ಮೇಲೆ ಹೊರಟಿದೆ. ಆದ್ರೆ ಕಾಂಪೌಂಡ್ ಗಳಿಗೆ ಅಳವಡಿಸಿಲಾಗಿರುವ ಬ್ಯಾರಿಕೇಡ್ ಗಳ ನಡುವೆ ಅಂತರವಿದೆ. ಈ […]

4 months ago

ಗದಗ ಜಿಲ್ಲಾಸ್ಪತ್ರೆಯಲ್ಲಿ ಇರುವೆಗಳ ಕಾಟ

ಗದಗ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕಪ್ಪು ಇರುವೆಗಳ ಹಾವಳಿಯಿಂದ ಬಾಣಂತಿಯರು ಮತ್ತು ಹಸುಗೂಸುಗಳು ರಾತ್ರಿ ನಿದ್ರೆಯಿಲ್ಲದೆ ಹೈರಾಣಾಗುತ್ತಿದ್ದಾರೆ. ನಗರದ ಜಿಮ್ಸ್ ಆಸ್ಪತ್ರೆ ಸ್ವಚ್ಛತೆ ಇಲ್ಲದಿರೋದರಿಂದ ಬಹುತೇಕ ವಾರ್ಡ್ ಗಳಲ್ಲಿ ಇರುವೆಗಳ ಲೋಕವೇ ಸೃಷ್ಟಿಯಾಗುತ್ತದೆ. ಇರುವೆಗಳಿಂದ ತಪ್ಪಿಸಿಕೊಳ್ಳಲು ಬಾಣಂತಿಯರು ಕಷ್ಟಪಡುವ ದೃಶ್ಯಗಳು ಜಿಮ್ಸ್ ನಲ್ಲಿ ಕಾಣಸಿಗುತ್ತವೆ. ಇತ್ತ ಬಾಣಂತಿಯರಿಗೆ ನಮಗೆ ಕಚ್ಚಿದ್ರೆ ಸಹಿಸಿಕೊಳ್ಳಬಹುದು, ನವಜಾತ ಶಿಶುಗಳಿಗೆ ಕಚ್ಚಿದರೆ ಮುಂದೇನು...