Tuesday, 19th March 2019

Recent News

2 days ago

ಗೋವಾ ಸಿಎಂ ಮನೋಹರ್ ಪರಿಕ್ಕರ್ ವಿಧಿವಶ

ಪಣಜಿ: ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಪಣಜಿಯಲ್ಲಿರುವ ಮಗನ ನಿವಾಸದಲ್ಲಿ ಪರಿಕ್ಕರ್ ಸಂಜೆ ವಿಧಿವಶರಾಗಿದ್ದಾರೆ. 63 ವರ್ಷದ ಮನೋಹರ್ ಪರಿಕ್ಕರ್ ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆ (ಮೆದೋಜೀರಕ ಗೃಂಥಿ ಸಮಸ್ಯೆ)ಯಿಂದ ಬಳಲುತ್ತಿದ್ದರು. ಅಲ್ಲದೇ ಕಳೆದ ವರ್ಷ ಅಮೆರಿಕದಲ್ಲಿ 3 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರು ಸೆ.6 ರಂದು ಚೇತರಿಸಿಕೊಂಡು ಮತ್ತೆ ತಾಯ್ನಾಡಿಗೆ ಮರಳಿದ್ದರು. ಗೋವಾ, ಮುಂಬೈ, ನವದೆಹಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. […]

2 days ago

ರಾಯಚೂರಿನ ಸರ್ಕಾರಿ ವೈದ್ಯರಿಗೆ ವಾಸ್ತು ಕಂಟಕ

-ವೈದ್ಯರ ಮೂಢನಂಬಿಕೆಗೆ ಜನಸಾಮಾನ್ಯರ ಪರದಾಟ ರಾಯಚೂರು: ಮೂಢನಂಬಿಕೆ ಅನ್ನೋದು ಎಂಥವರನ್ನೂ ಬಿಟ್ಟಿಲ್ಲ. ಮನೆಯ ವಾಸ್ತುದೋಷದ ಬಗ್ಗೆ ಕೇಳಿರ್ತೀರಿ, ಸರ್ಕಾರಿ ಕಚೇರಿಗಳ ವಾಸ್ತುದೋಷದ ಬಗ್ಗೆಯೂ ಕೇಳಿರ್ತೀರಿ. ಆದ್ರೆ ವಿಜ್ಞಾನ ನಂಬುವ ವೈದ್ಯರಿಗೂ ವಾಸ್ತುದೋಷ ಕಾಡುತ್ತಿದೆ. ರಾಯಚೂರಲ್ಲಿ ವೈದ್ಯರ ಮೂಢನಂಬಿಕೆಗೆ ಪರದಾಡ್ತಿರೋದು ಮಾತ್ರ ಜನಸಾಮಾನ್ಯರು. ರಾಯಚೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಾದ ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆಗಳ ನಡುವೆ ಮಾರ್ಗದ...

ನಿಯಂತ್ರಣ ತಪ್ಪಿದ ಕಾರ್ ಮತ್ತೊಂದು ಕಾರ್, ಲಾರಿಗೆ ಡಿಕ್ಕಿ – ಒಂದೇ ಕುಟುಂಬದ ಮೂವರ ದುರ್ಮರಣ

5 days ago

ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮತ್ತೊಂದು ಕಾರು ಹಾಗೂ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಬೊಗಳೆರಹಟ್ಟಿ ಬಳಿ ನಡೆದಿದೆ. ಅಪಘಾತದಲ್ಲಿ ಮೃತರಾದವರು ದಾವಣಗೆರೆ ಜಿಲ್ಲೆಯ ಜಗಳೂರು...

ಆರೋಪಿಗಳ ಬೆನ್ನತ್ತಿದ ಸಿಸಿಬಿ – ಲಕ್ಷ್ಮಣನ ಹತ್ಯೆಗೆ ಸಂಬಂಧಿಸಿದಂತೆ ಇನ್ನೊಬ್ಬನ ಮೇಲೆ ಫೈರಿಂಗ್

6 days ago

ಬೆಂಗಳೂರು: ರೌಡಿ ಲಕ್ಷ್ಮಣ ಹತ್ಯೆ ಪ್ರಕರಣದ ಕುರಿತು ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ದಿನಕ್ಕೊಬ್ಬ ಆರೋಪಿಗೆ ಗುಂಡೇಟು ನೀಡಿ ಬಂಧಿಸುತ್ತಿದ್ದಾರೆ. ನಿನ್ನೆಯಷ್ಟೇ ಹೇಮಿಯನ್ನು ಬಂಧಿಸಿದ ಪೊಲೀಸರು ಇಂದು ಮತ್ತೊಬ್ಬ ಆರೋಪಿಯ ಮೇಲೆ ಫೈರಿಂಗ್ ಮಾಡಿದ್ದಾರೆ. ಆರೋಪಿ ಆಕಾಶ್ ಅಲಿಯಾಸ್ ಮಾಮನ ಕಾಲಿಗೆ...

ಅಪಘಾತಗೊಂಡಿದ್ದ ವ್ಯಕ್ತಿಯ ರಕ್ಷಣೆಗೆ ಹೋಗ್ತಿದ್ದಾಗ ಗುದ್ದಿತು ಲಾರಿ – ಪಾದಚಾರಿ ಸ್ಥಳದಲ್ಲೇ ಸಾವು

1 week ago

ಬೆಂಗಳೂರು: ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಡಕಿಮಾರನಹಳ್ಳಿ ಬಳಿ ಭೀಕರ ರಸ್ತೆ ಅಪಘಾತವಾಗಿದ್ದು, ಪಾದಚಾರಿ ಮೃತಪಟ್ಟಿದ್ದಾರೆ. ಅಡಕಿಮಾರನಹಳ್ಳಿ ಬಳಿ ಆಟೋ ಅಪಘಾತವಾಗಿತ್ತು. ಆಟೋದಲ್ಲಿರುವ ವ್ಯಕ್ತಿಯ ರಕ್ಷಣೆಗೆಂದು ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ತಮಿಳುನಾಡು ಮೂಲದ ಲಾರಿ ಗುದ್ದಿದೆ. ಗುದ್ದಿದ ರಭಸಕ್ಕೆ...

KSRTC-ಕಾರ್ ಮುಖಾಮುಖಿ ಡಿಕ್ಕಿ – ಧರ್ಮಸ್ಥಳಕ್ಕೆ ಹೋಗ್ತಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ

1 week ago

ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 275ರ ಮಾರನಹಳ್ಳಿ ಸಮೀಪ ಈ ಭೀಕರ ಅಪಘಾತ ಸಂಭವಿಸಿದೆ. ಜಗದೀಶ್(30), ಗೌರಮ್ಮ(45),...

ಆಕಸ್ಮಿಕ ಬೆಂಕಿಯಿಂದ ಪೆಟ್ರೋಲ್ ಬಂಕ್ ಸ್ಫೋಟ

1 week ago

ಚಾಮರಾಜನಗರ: ಆಕಸ್ಮಿಕ ಬೆಂಕಿ ತಗುಲಿ ಪೆಟ್ರೋಲ್ ಬಂಕ್ ಬ್ಲಾಸ್ಟ್ ಆಗಿರುವ ಘಟನೆ ಗಡಿ ಜಿಲ್ಲೆಯಲ್ಲಿ ನಡೆದಿದೆ. ಭುವನೇಶ್ವರಿ ವೃತ್ತದಲ್ಲಿರುವ ಹೆಚ್‍ಪಿ ಪೆಟ್ರೋಲ್ ಬಂಕ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಡೀ ಪೆಟ್ರೋಲ್ ಬಂಕ್ ಸ್ಫೋಟವಾಗಿ ಸುಟ್ಟು ಕರಕಲಾಗಿದೆ. ಮಧ್ಯಾಹ್ನ ಸುಮಾರು 1.30ಕ್ಕೆ ವೇಳೆ...

ನಾಮಕರಣಕ್ಕೆ ಹೋಗ್ತಿದ್ದ ಟಾಟಾ ಏಸ್ ಪಲ್ಟಿ – 15ಕ್ಕೂ ಅಧಿಕ ಮಂದಿ ಗಾಯ

1 week ago

ರಾಮನಗರ: ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಏಸ್ ವಾಹನ ಉರುಳಿಬಿದ್ದ ಪರಿಣಾಮ ವಾಹನದಲ್ಲಿದ್ದ 15ಕ್ಕೂ ಅಧಿಕ ಜನರಿಗೆ ಗಾಯಗಳಾಗಿರುವ ಘಟನೆ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಗ್ರಾಮದ ಬಳಿ ನಡೆದಿದೆ. ಸಂಬಂಧಿಕರ ಮಗುವಿನ ನಾಮಕರಣಕ್ಕೆಂದು 20 ಜನರು ಟಾಟಾ ಏಸ್ ವಾಹನದಲ್ಲಿ ರಾಮನಗರದ...