Tuesday, 11th December 2018

Recent News

1 month ago

ರಾಮ ಮಂದಿರ ನಿರ್ಮಾಣ ಕುರಿತು ಬಿಜೆಪಿ ಸುಗ್ರೀವಾಜ್ಞೆ ಹೊರಡಿಸಲಿ – ಓವೈಸಿ ಸವಾಲು

ನವದೆಹಲಿ: ರಾಮಮಂದಿರ ನಿರ್ಮಾಣದ ಕುರಿತು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಯಾಕೆ ಸುಗ್ರೀವಾಜ್ಞೆ ಹೊರಡಿಸಬಾರದು ಎಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ. ಆಯೋಧ್ಯೆ ಕುರಿತು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಜನವರಿಗೆ ಮುಂದೂಡಿದ ಆದೇಶದ ಬಳಿಕ ಓವೈಸಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಪ್ರತಿ ಬಾರಿಯೂ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೆಸರು ಹೇಳುವ ಮೂಲಕ ಹೆದರಿಸುವ ಕಾರ್ಯ ಮಾಡುತ್ತಿದೆ ಎಂದು ದೂಷಿಸಿದರು. Why don't they bring it (ordinance […]

1 month ago

ಲೋಕಸಭಾ ಚುನಾವಣೆಗೆ ಮೊದಲೇ ಆಯೋಧ್ಯೆ ತೀರ್ಪು ಬರೋದು ಅನುಮಾನ

ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನವೇ ಆಯೋಧ್ಯೆ ಭೂ ವಿವಾದ ತೀರ್ಪು ಪ್ರಕಟವಾಗುವುದು ಅನುಮಾನವಾಗಿದೆ. 2010 ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿಗೆ ಮುಂದೂಡಿದೆ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್, ನ್ಯಾ. ಎಸ್‍ಕೆ ಕೌಲ್, ಕೆಎಂ ಜೋಸೆಫ್ ನೇತೃತ್ವದ...

ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

1 year ago

ಉಡುಪಿ/ಮೈಸೂರು: ಮೋದಿ ಸರ್ಕಾರದ ಅವಧಿ ಮುಗಿಯುವ ಮೊದಲೇ ರಾಮಮಂದಿರ ನಿರ್ಮಾಣ ಮಾಡಬೇಕು ಎನ್ನುವ ನಿರ್ಣಯವನ್ನು ಧರ್ಮ ಸಂಸದ್ ನಲ್ಲಿ ಕೈಗೊಳ್ಳಲಾಗಿದೆ. ಆಯೋಧ್ಯೆಯಲ್ಲಿ ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ 2019 ರ...

ಧರ್ಮ ಸಂಸದ್ ನಲ್ಲಿ ರಾಮಮಂದಿರ ಬಗ್ಗೆ ಚರ್ಚೆ ಆಗುತ್ತಾ: ತೊಗಾಡಿಯಾ ಹೇಳಿದ್ದು ಹೀಗೆ

1 year ago

ಮಂಗಳೂರು: ನಗರದಲ್ಲಿ ನಡೆಯಲಿರುವ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕುರಿತು ಚರ್ಚೆಯಾಗಲಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಪ್ರತಿಕ್ರಿಯಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಉಡುಪಿ ಧರ್ಮಸಂಸತ್‍ನಲ್ಲಿ ಭಾಗವಹಿಸಲು...

ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಅಯೋಧ್ಯೆಗೆ ಹೊರಟ ಕೊಪ್ಪಳದ ಮುಸ್ಲಿಂ ಯುವಕ

2 years ago

ಕೊಪ್ಪಳ: ಜಿಲ್ಲೆಯ ಮುಸ್ಲಿಂ ಯುವಕರೊಬ್ಬರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೈತಿಕ ಬೆಂಬಲ ನೀಡಿದ್ದು, ಸಾಂಕೇತಿಕವಾಗಿ ಒಂದು ಸಿಮೆಂಟ್ ಚೀಲ ನೀಡಲು ಅಯೋಧ್ಯೆಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಆಟೋ ಚಾಲಕ ಶಂಶುದ್ದೀನ್ ರಾಮಮಂದಿರ...

ಬೆಂಗಳೂರು ಐಟಿ ಉದ್ಯಮಿಯ ಮೊಬೈಲ್ ನಂಬರ್‍ನಲ್ಲಿ ಆಯೋಧ್ಯೆ ಫೇಕ್ ವೆಬ್‍ಸೈಟ್ ಓಪನ್!

2 years ago

ಲಕ್ನೋ: “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕಾ? ಮಸೀದಿ ನಿರ್ಮಾಣವಾಗಬೇಕಾ? ನಿಮ್ಮ ಅಭಿಪ್ರಾಯ ಏನು? www.ayodhya-issue.gov-up.in ವೆಬ್‍ಸೈಟ್‍ನಲ್ಲಿ ನೀವು ಅಭಿಪ್ರಾಯವನ್ನು ತಿಳಿಸಿ ಉತ್ತರಪ್ರದೇಶ ಸರ್ಕಾರಕ್ಕೆ ಸಹಕಾರ ನೀಡಿ” ಎನ್ನುವ ಸಂದೇಶ ನಿಮ್ಮ ವಾಟ್ಸಪ್‍ಗೆ ಬಂದಿದೆಯೇ? ಈ ರೀತಿಯ ಮೆಸೇಜ್ ನಿಮ್ಮ ವಾಟ್ಸಪ್‍ಗೆ ಬಂದಿದ್ದರೆ...