Thursday, 18th July 2019

4 months ago

ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದ ಪ್ರಯಾಣಿಕನ ಜೀವ ಉಳಿಸಿದ ಟ್ಯಾಕ್ಸಿ ಡ್ರೈವರ್

ಆಗ್ರಾ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಕಾಲುಜಾರಿ ಚಕ್ರಕ್ಕೆ ಸಿಲುಕುತ್ತಿದ್ದ ಪ್ರಯಾಣಿಕನನ್ನು ಟ್ಯಾಕ್ಸಿ ಚಾಲಕರೊಬ್ಬರು ಕಾಪಾಡಿ ಜೀವ ಉಳಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಸುರೇಶ್(34) ಎಂಬ ಪ್ರಯಾಣಿಕರನ್ನು ರಾಜೇಶ್ ಶರ್ಮಾ ಎಂಬ ಟ್ಯಾಕ್ಸಿ ಚಾಲಕ ಬಚಾವ್ ಮಾಡಿದ್ದಾರೆ. ಮಂಗಳ ಲಕ್ಷದ್ವೀಪ ಎಕ್ಸ್ ಪ್ರೆಸ್ ರೈಲು ಆಗ್ರಾ ನಿಲ್ದಾಣದಿಂದ ಹೊರಟ ಸಮಯಕ್ಕೆ ಸುರೇಶ್ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿದ್ದಾರೆ. […]

6 months ago

ಗಾಂಧೀಜಿ ಭಾವಚಿತ್ರಕ್ಕೆ ಗುಂಡಿಟ್ಟು ಗೋಡ್ಸೆ ಅಮರ್ ರಹೇ ಎಂದ ಹಿಂದೂ ಮಹಾಸಭಾ ನಾಯಕಿ!

ಆಗ್ರಾ: ಹಿಂದೂ ಮಹಾಸಭಾ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಅಟಿಕೆ ಗನ್ ಮೂಲಕ ಗುಂಡಿಟ್ಟಿದ್ದು, ಈ ಮೂಲಕ ಗಾಂಧೀಜಿ ಅವರು ಸಾವನ್ನಪ್ಪಿದ ದಿನದಂದು ಸಂಭ್ರಮಿಸಿದ್ದಾರೆ. ಗಾಂಧೀಜಿ ಅವರ ಸಾವನ್ನಪ್ಪಿದ ದಿನವನ್ನು ಶೌರ್ಯ ದಿನ ಎಂದು ಆಚರಣೆ ಮಾಡಿ ಸಂಭ್ರಮಿಸಿದ ಹಿಂದೂ ಮಹಾಸಭಾ ಸಂಘಟನೆಯ ಕಾರ್ಯಕರ್ತರು ಎಲ್ಲರಿಗೂ ಸಿಹಿ ನೀಡಿ...

ಟೀಂ ಇಂಡಿಯಾ ಬೌಲರ್ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದ 6 ಮಂದಿ ಅರೆಸ್ಟ್

9 months ago

ಆಗ್ರಾ: ಟೀಂ ಇಂಡಿಯಾ ಯುವ ವೇಗಿ ದೀಪಕ್ ಚಹಾರ್ ಮನೆಯಲ್ಲಿ 6 ಮಂದಿ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಆಗ್ರಾದ ಮನಸರೋವರ ಕಾಲೋನಿಯಲ್ಲಿ ನಡೆದಿದೆ. ವೇಗಿ ಚಹಾರ್ ಅವರ ತಾಯಿ ಒಬ್ಬರೇ ಮನೆಯಲ್ಲಿ ಇದ್ದ ವೇಳೆ ಘಟನೆ...

ಕೊಟ್ಟ ಭರವಸೆ ನೆನಪಿಸಲು ಮೋದಿ ಭೇಟಿಗಾಗಿ 1,350 ಕಿ.ಮೀ ನಡೆದ ಯುವಕ!

1 year ago

ಲಕ್ನೋ: ಮೋದಿ ಕೊಟ್ಟ ಮಾತನ್ನು ನೆನಪಿಸುವುದಕ್ಕೆ ಒಡಿಶಾ ಮೂಲದ ಯುವಕ ಸುಮಾರು 1,350 ಕಿ.ಮೀ ಪಾದಯಾತ್ರೆ ಕ್ರಮಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಆಗ್ರಾದಲ್ಲಿ ನಡೆದಿದೆ. ಒಡಿಶಾ ರಾಜ್ಯದ ರೂರ್ಕೆಲಾ ಜಿಲ್ಲೆಯ ಗ್ರಾಮದ 30 ವರ್ಷದ ಮುಕ್ತಿಕಾಂತ್ ಬಿಸ್ವಾಲ್ ಅಸ್ವಸ್ಥಗೊಂಡ ಯುವಕ....

ಕಾಮಗಾರಿ ವೇಳೆ ಕಾರ್ಮಿಕರ ನಿರ್ಲಕ್ಷ್ಯ: ನಾಯಿಯ ಮೇಲೆಯೇ ರಸ್ತೆ ನಿರ್ಮಾಣ!

1 year ago

ಲಕ್ನೋ: ರಸ್ತೆ ಬದಿ ಮಲಗಿದ್ದ ನಾಯಿಯ ದೇಹದ ಮೇಲೆಯೇ ರಸ್ತೆ ನಿರ್ಮಾಣ ಮಾಡಿದ ಘಟನೆ ಉತ್ತರಪ್ರದೇಶದ ಆಗ್ರಾ ನಗರದಲ್ಲಿ ನಡೆದಿದೆ. ಆಗ್ರಾದ ಪತೇಹಾಬಾದ್‍ನ ರಸ್ತೆಗಳಿಗೆ ಮಂಗಳವಾರ ರಾತ್ರಿ ಡಾಂಬರೀಕರಣ ಕಾಮಗಾರಿ ನಡೆಸುತ್ತಿದ್ದರು. ಈ ವೇಳೆ ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆಯೇ...

ವ್ಯಕ್ತಿಯ ಮೇಲೆ ದಾಳಿ – 1.4 ಲಕ್ಷ ರೂ. ದೋಚಿತು ವಾನರಪಡೆ!

1 year ago

ಆಗ್ರಾ: ಬ್ಯಾಂಕಿಗೆ ಹಣ ಜಮಾ ಮಾಡಲು ಹೋದ ವ್ಯಕ್ತಿಯ ಮೇಲೆ ಕೋತಿಗಳು ದಾಳಿ ಮಾಡಿ ಹಣದ ಬ್ಯಾಗ್ ಅನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಉತ್ತರಪ್ರದೇಶದ ನೈಕಿ ಮಂಡಿ ಪ್ರದೇಶದಲ್ಲಿ ನಡೆದಿದೆ. ಸೋಮವಾರ ಬೆಳಿಗ್ಗೆ ಬನ್ಸಾಲಿ ಎಂಬುವರು ತಮ್ಮ ಪುತ್ರಿಯೊಡನೆ ನೈಕಿ ಮಂಡಿ...

5 ವರ್ಷದ ಬಾಲಕನ ಆಟಕ್ಕೆ 60 ಮನೆಗಳು ಹೊತ್ತಿ ಉರಿಯಿತು!

1 year ago

(ಸಾಂದರ್ಭಿಕ ಚಿತ್ರ) ಆಗ್ರಾ: 5 ವರ್ಷದ ಬಾಲಕನ ಆಟಕ್ಕೆ 60 ಮನೆಗಳು ಹೊತ್ತಿ ಉರಿದಿರುವ ಘಟನೆ ಉತ್ತರ ಪ್ರದೇಶದ ಆಗ್ರ ಸಮೀಪದ ಝಾಂಡಿ ಕಿ ಮಾಡಿಯಾ ಹಳ್ಳಿಯಲ್ಲಿ ನಡೆದಿದೆ. ಬೆಂಕಿ ಕಡ್ಡಿಗಳ ಜೊತೆ ಆಟವಾಡುತ್ತಿದ್ದ ಬಾಲಕ ಕಡ್ಡಿಯನ್ನು ಹೊತ್ತಿಸಿ ತಮ್ಮ ಗುಡಿಸಿಲಿನ...

ಕುಸಿದು ಬಿತ್ತು ತಾಜ್‍ಮಹಲ್ ಕಂಬ

1 year ago

ಲಕ್ನೋ: ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ ರಾಜ್ಯದಲ್ಲಿ ಮಳೆಯಾಗುತ್ತಿದೆ. ಸತತ ಮಳೆಯಿಂದಾಗಿ ವಿಶ್ವವಿಖ್ಯಾತ ತಾಜ್‍ಮಹಲ್ ನ ಕಂಬವೊಂದು ಕುಸಿದು ಬಿದ್ದಿದೆ. ಇಂದು ಬೆಳಗಿನ ಜಾವ ತಾಜ್‍ಮಹಲ್ ನ ದಕ್ಷಿಣ ಭಾಗದಲ್ಲಿಯ ಕಂಬ ಬಿದ್ದಿದೆ. ಘಟನೆ ವೇಳೆ ಯಾರು ಇಲ್ಲದಿದ್ದರಿಂದ ಅವಘಡವೊಂದು...