Sunday, 18th August 2019

Recent News

11 months ago

ಏಕಾಏಕಿ 11 ಸಿಂಹಗಳ ಸಾವು: ತನಿಖೆಗೆ ಆದೇಶಿಸಿದ ಗುಜರಾತ್ ಸರ್ಕಾರ

ಅಹಮದಾಬಾದ್: ಗುಜರಾತಿನ ಗಿರ್ ಅರಣ್ಯ ಪ್ರದೇಶದಲ್ಲಿ ಏಕಾಏಕಿ 11 ಸಿಂಹಗಳು ಸಾವನ್ನಪ್ಪಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಸಿಂಹಗಳ ರಾಜ್ಯವೆಂದೆ ಹೆಸರು ಪಡೆದುಕೊಂಡಿರುವ ಗುಜರಾತ್‍ನಲ್ಲಿ ಏಕಾಏಕಿ 11 ಸಿಂಹಗಳು ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗಿರ್ ಅರಣ್ಯ ಪ್ರದೇಶದ ದಾಲ್ಕನೀಯಾ ವ್ಯಾಪ್ತಿಯಲ್ಲಿ ಸಿಂಹಗಳ ಮೃತದೇಹಗಳು ಪತ್ತೆಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿ ಪಿ ಪುರುಷೋತ್ತಮ್, ಕಳೆದ ಬುಧವಾರ ಗಿರ್ ಅರಣ್ಯ ಪ್ರದೇಶದ ದಾಲ್ಕನಿಯಾ ರೇಂಜ್ ನಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ […]

1 year ago

ಈರುಳ್ಳಿ, ಬೆಳ್ಳುಳ್ಳಿ ತಿನ್ನಲು ಪತಿ ಕುಟುಂಬಸ್ಥರ ಒತ್ತಾಯ – ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

ಅಹಮದಾಬಾದ್: ಪತಿ ಮನೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯಿಂದ ತಯಾರಿಸಿದ ಆಹಾರ ತಿನ್ನಲು ಒತ್ತಾಯ ಮಾಡಿದ್ದು, ನಿರಾಕರಿಸಿದಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗುಜರಾತ್ ನ ಕಾದಿ ಟೌನ್ ನಿವಾಸಿಯಾದ 25 ವರ್ಷದ ಮಹಿಳೆ ಪತಿ ಹಾಗೂ ಕುಟುಂಬದ ವಿರುದ್ಧ ಜುಲೈ 10 ರಂದು ಗಾಂಧಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ....

ಸಾರ್ವಜನಿಕ ಕಾರ್ಯಕ್ರಮದಲ್ಲಿ ನೋಟಿನ ಸುರಿಮಳೆಗೈದ ಕೈ ಶಾಸಕ: ವಿಡಿಯೋ ನೋಡಿ

1 year ago

ಅಹಮದಾಬಾದ್: ಸಾರ್ವಜನಿಕ ಸಭೆಯೊಂದರಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಠಾಕೂರ್ ಸಮುದಾಯದ ನಾಯಕ ಅಲ್ಪೇಶ್ ಠಾಕೂರ್ ನೋಟುಗಳ ಸುರಿಮಳೆಗೈದಿದ್ದಾರೆ. ಶನಿವಾರ ರಾತ್ರಿ ಜಿಲ್ಲೆಯ ರಧನ್ ಪೂರ್ ಪಟ್ಟಣದ ಭಭರ್ ರಸ್ತೆಯಲ್ಲಿನ ಬಾಲಕರ ಹಾಸ್ಟೆಲ್ ನಲ್ಲಿ ಸಾಂಸ್ಕೃತಿಕಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಬಿಸಿ ನಾಯಕ...

ನೂರು ಕೋಟಿ ಆಸ್ತಿ ತ್ಯಜಿಸಿ ಜೈನ ದೀಕ್ಷೆ ಪಡೆದ 24ರ ಯುವಕ!

1 year ago

ಅಹಮದಾಬಾದ್: ಮುಂಬೈ ಮೂಲದ 24ರ ಹರೆಯದ ಯುವಕ ಮೋಕ್ಷೇಶ್ ಸೇಟ್ ಶುಕ್ರವಾರ ಬೆಳಗ್ಗೆ ಜೈನ ದೀಕ್ಷೆಯನ್ನು ಸ್ವೀಕರಿಸಿದರು. ಮೋಕ್ಷೇಶ್ ಕುಟುಂಬಕ್ಕೆ ಜೆ ಕೆ ಕಾರ್ಪೊರೇಷನ್ ಹೆಸರಿನ ವಜ್ರ ಲೋಹದ ಮತ್ತು ಸಕ್ಕರೆ ಉದ್ಯಮಗಳಿವೆ. ಸುಮಾರು ನೂರು ಕೋಟಿ ಆಸ್ತಿಯನ್ನು ತ್ಯಜಿಸಿದ್ದಾರೆ. ಚಾರ್ಟೇಡ್...

ಪತಿ ನಪುಂಸಕ, ವಂಶ ಬೆಳೆಯಲು ಮಾವ, ಮೈದುನನಿಂದಲೇ ಮಹಿಳೆಗೆ ಕಿರುಕುಳ!

1 year ago

ಅಹಮದಾಬಾದ್: ಪತಿ ನಪುಂಸಕನಾದ ಹಿನ್ನೆಲೆಯಲ್ಲಿ ಮಾವನೇ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಮಹಿಳೆಯೊಬ್ಬರು ಗುಜರಾತಿನ ಅಹಮದಾಬಾದ್ ಸರ್ದಾರ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ಪತಿ ನಪುಂಸಕ. ವಂಶ ಬೆಳೆಯಬೇಕೆಂದು ನನ್ನ ಮಾವ ಹಾಗೂ ನನ್ನ ಮೈದುನ ದೈಹಿಕ ಸಂಬಂಧ ಬೆಳೆಸುವಂತೆ...

ಕುದುರೆಯೇರಿ ಸವಾರಿ ಹೊರಟಿದ್ದ ದಲಿತ ಯುವಕನ ಬರ್ಬರ ಹತ್ಯೆ!

1 year ago

ಅಹಮದಾಬಾದ್: ಕುದುರೆ ಏರಿ ಸವಾರಿ ಹೊರಟಿದ್ದ ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಆಘತಕಾರಿ ಘಟನೆಯೊಂದು ಗುಜರಾತಿನ ಭಾವ್ ನಗರ್ ಜಿಲ್ಲೆಯಲ್ಲಿ ನಡೆದಿದೆ. 21 ವರ್ಷದ ಪ್ರದೀಪ್ ರಾಥೋಡ್ ಮೃತ ದುರ್ದೈವಿ ಯುವಕ. ಘಟನೆಗೆ ಸಂಬಂಧಿಸಿದಂತೆ ಗುರುವಾರ ಸಂಜೆ ಭಾವ್ ನಗರ್ ಜಿಲ್ಲೆಯ...

ಪೋಲಿಸರ ವಿರುದ್ಧ ಸೇಡು- ಕಾಂಟ್ರೋಲ್ ರೂಮ್ ಗೆ 1,264 ಬಾರಿ ಕರೆ ಮಾಡಿದ ವ್ಯಕ್ತಿ

1 year ago

ಅಹಮದಾಬಾದ್: ವ್ಯಕ್ತಿಯೊಬ್ಬ ಪೊಲೀಸ್ ಕಾಂಟ್ರೋಲ್ ರೂಮ್ ಗೆ ಸುಮಾರು 1,264 ಬಾರಿ ಕರೆ ಮಾಡಿ ನಿಂದಿಸಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ. ಈಶ್ವರ್ ಭೋಯ್(40) ಎಂಬಾತ ಈ ಕೃತ್ಯವೆಸಗಿದ್ದಾನೆ. ಭೂವಿವಾದವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಈತನನ್ನು ಹೊಡೆದಿದ್ದರಿಂದ ಅವರ ಮೇಲೆ...

20 ದಿನದ ಗಂಡುಮಗುವಿನ ಹೊಟ್ಟೆಯಿಂದ ಭ್ರೂಣ ಹೊರತೆಗೆದ ವೈದ್ಯರು!

1 year ago

ಅಹಮದಾಬಾದ್: ಅಪರೂಪದಲ್ಲಿ ಅಪರೂಪವೆಂಬಂತೆ 20 ದಿನಗಳ ಪುಟ್ಟ ಗಂಡುಮಗುವಿನ ಹೊಟ್ಟೆಯಿಂದ ಭ್ರೂಣ ಹೊರತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಅಹಮದಾಬಾದ್ ನ ಸನಂದ ಪಟ್ಟಣದಲ್ಲಿ ನಡೆದಿದೆ. 20 ದಿನದ ಗಂಡು ಶಿಶುವಿನ ಹೊಟ್ಟೆಯಿಂದ 750 ಗ್ರಾಂ ತೂಕದ ಬೆಳವಣಿಗೆಯಾಗದ ಭ್ರೂಣವನ್ನು ಹೊರತೆಗೆಯಲು...