Monday, 26th August 2019

2 months ago

ಗಾಯಗೊಂಡಿದ್ದ ನವಿಲನ್ನು ರಕ್ಷಿಸಿದ ಗ್ರಾಮಸ್ಥರು

ಬೆಂಗಳೂರು: ಗಾಯಗೊಂಡಿದ್ದ ನವಿಲಿಗೆ ಆರೈಕೆ ಮಾಡುವ ಮೂಲಕ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆಯ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ. ಕಾಡಿನಿಂದ ನಾಡಿಗೆ ಬಂದಿದ್ದ ಗಂಡು ನವಿಲಿನ ಕಾಲಿಗೆ ಗಾಯವಾಗಿತ್ತು. ಹೀಗಾಗಿ ಹಾರಲು ಸಾಧ್ಯವಾಗದೇ ಬಿಲ್ಲಿನಕೋಟೆಯ ಅಂಗಡಿಯೊಂದರ ಮುಂದೆ ಬಿದ್ದಿತ್ತು. ಅದನ್ನು ನೋಡಿದ ಸ್ಥಳೀಯರು ಎತ್ತಿಕೊಂಡು ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಆರೈಕೆಗೂ ಮುನ್ನ ಜನರನ್ನು ಕಂಡ ನವಿಲು ಭಯಗೊಂಡಿತ್ತು. ಇದನ್ನು ಗಮನಿಸಿದ ಕೆಲವರು ನವಿಲನ್ನು ಎತ್ತಿಕೊಂಡು ನಿಲ್ಲಿಸುವ ಪ್ರಯತ್ನಿಸಿದರು. ಎಲ್ಲ ರೀತಿಯ ಉಪಚಾರ ಮಾಡಿದ ಸಾರ್ವಜನಿಕರು ನಂತರ ಅರಣ್ಯ ಇಲಾಖೆ […]

2 months ago

ಪಬ್ಲಿಕ್ ಇಂಪ್ಯಾಕ್ಟ್- 890 ಮರಗಳ ಮಾರಣ ಹೋಮಕ್ಕೆ ಕಾರಣವಾದ ಡಿಸಿಎಫ್ ಅಮಾನತು

ಮಡಿಕೇರಿ: 890 ಮರಗಳ ಮಾರಣ ಹೋಮಕ್ಕೆ ಖುದ್ದು ಅರಣ್ಯ ಇಲಾಖೆಯೇ ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ಮಡಿಕೇರಿ ಉಪಾವಲಯ ಸಂರಕ್ಷಣಧಿಕಾರಿ ಮಂಜುನಾಥ್ ಅವರು ಕರ್ತವ್ಯ ಲೋಪವೆಸೆಗಿದ್ದಾರೆಂದು ಎಂದು ಪರಿಗಣಿಸಿ ಅಮಾನತು ಮಾಡಲಾಗಿದೆ. ಮಡಿಕೇರಿ ನಗರದ ಹೊರಭಾಗದಲ್ಲಿರೋ ಕೆ.ನಿಡುಗಡೆ ಗ್ರಾಮದ 68 ಏಕರೆ ಜಾಗದ ಪೈಕಿ 30 ಏಕರೆಯಲ್ಲಿದ್ದ 890 ಮರಗಳ ಮಾರಣ ಹೋಮ ನಡೆದಿದೆ. ಇದಕ್ಕೆ ಖುದ್ದು...

8 ಸಾಕಾನೆ ಬಳಸಿ ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ

3 months ago

ಮಡಿಕೇರಿ: ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ 8 ಸಾಕಾನೆಗಳನ್ನು ಬಳಸಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿತ್ತು. ಕಾಡಾನೆಯ ಉಪಟಳಕ್ಕೆ ಬೇಸತ್ತಿದ್ದ ಜನರು ಆನೆಗಳನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ...

ಕಾಳಿ ನದಿಯಲ್ಲಿ ನೀರಿಲ್ಲ- ನೀರಿನ ದಾಹಕ್ಕೆ ಪ್ರಾಣ ಬಿಟ್ಟ ಕಾಡುಕೋಣ!

3 months ago

ಕಾರವಾರ: ಬಿರು ಬೇಸಿಗೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ನೀರು ಬತ್ತಿಹೋಗಿದ್ದು, ನೀರನ್ನರಸಿ ನದಿ ದಂಡೆಗೆ ಬಂದಿದ್ದ ಕಾಡುಕೋಣವು ನೀರು ಸಿಗದೇ ದಾಹದಿಂದ ಪ್ರಾಣ ಬಿಟ್ಟಿದೆ. ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವನ್ಯಜೀವಿ ವಲಯದ...

ಕಾಳಗದಲ್ಲಿ ಗಾಯಗೊಂಡಿದ್ದ ಚಿರತೆಯ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ

3 months ago

ಚಾಮರಾಜನಗರ: ಅರಣ್ಯದಲ್ಲಿ ಮತ್ತೊಂದು ಚಿರತೆಯೊಂದಿಗಿನ ಕಾಳಗದಲ್ಲಿ ಗಾಯಗೊಂಡಿದ್ದ ಚಿರತೆಯೊಂದು ಚಾಮರಾಜನಗರ ಸಮೀಪದ ಹೊನ್ನಳ್ಳಿ ಬಳಿ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿಸಿತ್ತು. ಕಳೆದ ನಾಲ್ಕೈದು ದಿನಗಳಿಂದ ಹೊನ್ನಳ್ಳಿ ಹೊರಭಾಗದ ಜಮೀನುಗಳಲ್ಲಿ ಅಡ್ಡಾಡುತ್ತಿದ್ದ ಈ ಚಿರತೆ ಸೋಮವಾರ ತೋಟವೊಂದರ ಮನೆಯ ಬಾಗಿಲಿನ ಬಳಿ ಮಲಗಿತ್ತು....

ದರ್ಶನ್ ಸಮಾಜ ಸೇವೆಗೆ ಕೈ ಜೋಡಿಸಿದ ಚಿಕ್ಕಣ್ಣ

3 months ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿ ಹಾಗೂ ಪರಿಸರದ ಮೇಲೆ ಇರುವ ಪ್ರೀತಿಯಿಂದ ಅರಣ್ಯ ಇಲಾಖೆ ನೆರವಿಗೆ ಮುಂದಾಗಿರುವುದು ಎಲ್ಲರಿಗೂ ತಿಳಿದಿದೆ. ಸದ್ಯ ದರ್ಶನ್ ಅವರ ಈ ಕಾರ್ಯಕ್ಕೆ ಹಾಸ್ಯ ನಟ ಚಿಕ್ಕಣ್ಣ ಅವರು ಕೂಡ ಕೈ...

ಮೊಲ ನುಂಗಿ ಸುಸ್ತಾಗಿ ಪರದಾಡಿದ ಹೆಬ್ಬಾವು! – ವಿಡಿಯೋ ನೋಡಿ

4 months ago

ಕೋಲಾರ: ಮೊಲ ನುಂಗಿ ಸುಸ್ತಾಗಿ ಪರದಾಡುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವೊಂದನ್ನ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಕುಪ್ಪಂ ತಾಲೂಕಿನ ಗುಡಿಪಲ್ಲಿ ಬಳಿ ಈ ಹೆಬ್ಬಾವು ಪತ್ತೆಯಾಗಿದ್ದು, ಮೊಲ ನುಂಗಿ ಸುಸ್ತಾಗಿ ಗಿಡಗಳ ಮಧ್ಯೆ ಅವಿತುಕೊಂಡಿತ್ತು. ಇದನ್ನು ಕಂಡ...

ಕಾಡಿನಿಂದ ನಾಡಿಗೆ ಬಂದ ಅತಿಥಿಗೆ ಭರ್ಜರಿ ಸೇವೆ!

4 months ago

ಬೆಳಗಾವಿ: ಕಾಡಿನಿಂದ ನಾಡಿಗೆ ಬಂದ ವಿಶೇಷ ಅತಿಥಿಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ, ಊಟ, ಉಪಚಾರ ನೀಡಿ ಭಾರಿ ಸೇವೆ ಮಾಡುತ್ತಿದ್ದಾರೆ. ಹೌದು. ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದ ಹೊರವಲಯದಲ್ಲಿ ಹದಿನೈದು ದಿನಗಳ ಹಿಂದೆ ಕಾಡುಕೋಣವೊಂದು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು....