Recent News

2 years ago

ಹಕ್ಕಿಗಳ ಹಿಕ್ಕೆ ವಾಸನೆ ಬರುತ್ತದೆಂದು 500 ಕ್ಕೂ ಹೆಚ್ಚು ಹಕ್ಕಿ ಮರಿಗಳ ಮಾರಣಹೋಮ ಮಾಡಿದ್ರು

ಮಂಡ್ಯ: ಹಕ್ಕಿಗಳ ಹಿಕ್ಕೆ ವಾಸನೆ ಬರುತ್ತದೆಂದು ಮರದ ರೆಂಬೆಗಳನ್ನು ಕಡಿದು ಹಾಕಿದ ಪರಿಣಾಮ ಐನೂರಕ್ಕೂ ಹೆಚ್ಚು ಹಕ್ಕಿ ಮರಿಗಳು ನೆಲಕ್ಕೆ ಬಿದ್ದು ನರಳಾಡುತ್ತಿರುವ ಮನಕಲಕುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕಾವೇರಿ ನೀರಾವರಿ ನಿಗಮ ಕಚೇರಿ ಆವರಣದಲ್ಲಿ ಹತ್ತಿ ಮರವಿದ್ದು ಅದರಲ್ಲಿ ಸಾವಿರಾರು ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸವಾಗಿದ್ದವು. ಪಕ್ಷಿಗಳು ಗೂಡಿನಲ್ಲಿ ಮೊಟ್ಟೆಯಿಟ್ಟು ಮರಿ ಮಾಡಿದ್ದವು. ಹಕ್ಕಿಗಳ ಹಿಕ್ಕೆ ವಾಸನೆ ಬರುತ್ತದೆಂದು ಮೃಗೀಯರಾದ ಕಾವೇರಿ ನೀರಾವರಿ ನಿಗಮ ಕಚೇರಿಯ ಕೆಲವು ಅಧಿಕಾರಿಗಳು ಮರದ ರೆಂಬೆಗಳನ್ನು […]

2 years ago

ಆಹಾರ ಅರಸಿ ಗ್ರಾಮಕ್ಕೆ ಬಂದ ಜಿಂಕೆಯ ರಕ್ಷಣೆ

ಮಂಡ್ಯ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ಜಿಲ್ಲೆ ನಾಗಮಂಗಲ ತಾಲೂಕಿನ ಕೆಸವಿನಕಟ್ಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಜಿಂಕೆಯೊಂದು ಬೆಳಗ್ಗೆಯಿಂದ ಆಹಾರ ಅರಸಿ ಅಡ್ಡಾಡುತ್ತಿತ್ತು. ಗ್ರಾಮದಲ್ಲಿ ಜಿಂಕೆ ಸುತ್ತಾಡುತ್ತಿರುವುದನ್ನು ಗ್ರಾಮದ ನಾಯಿಗಳು ನೋಡಿ ಬೊಗಳಲಾರಂಭಿಸಿದ್ದವು. ನಾಯಿಗಳು ಬೊಗಳುವುದನ್ನು ನೋಡಿ ಗ್ರಾಮಸ್ಥರು ಜಿಂಕೆಗೆ ಯಾವುದೇ ರೀತಿಯ ಅನಾಹುತ ಆಗಬಾರದೆಂದು...

ನಾಯಿ ತಿನ್ನುವ ಆಸೆಯಿಂದ ಚನ್ನರಾಯಪಟ್ಟಣದಲ್ಲಿ ಬೋನಿಗೆ ಬಿತ್ತು ಭಾರೀ ಗಾತ್ರದ ಚಿರತೆ

2 years ago

ಹಾಸನ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಭಾರೀ ಗಾತ್ರದ ಚಿರತೆಯೊಂದು ಸೆರೆಯಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಕೆಲ ದಿನಗಳಿಂದ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿತ್ತು. ಗ್ರಾಮದ ಎರಡು ಕುರಿಗಳನ್ನು ಚಿರತೆ ತಿಂದು...

ಧಗಧಗನೆ ಹೊತ್ತಿ ಉರಿದ ಚಾರ್ಮಾಡಿ ಘಾಟ್ – ಹಸಿರ ರಾಶಿಗೆ ಬೆಂಕಿ ಇಟ್ಟಿದ್ದು ಯಾರು?

2 years ago

ಮಂಗಳೂರು: ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯ ಅರಣ್ಯ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಕಳೆದ ಐದಾರು ದಿನಗಳಿಂದ ಘಾಟಿ ಪ್ರದೇಶದ ಹಲವೆಡೆ ಬೆಂಕಿ ಕೆನ್ನಾಲಿಗೆ ಬೀರುತ್ತಿದ್ದರೂ ಬೆಂಕಿ ನಂದಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿಲ್ಲ. ಹೀಗಾಗಿ ಅಮೂಲ್ಯ...

1 ತಿಂಗ್ಳ ಹಿಂದೆಯೇ ಅಳವಡಿಸಿದ್ದ ಬೋನ್ ಗೆ ಕೊನೆಗೂ ಬಿತ್ತು ಚಿರತೆ- ನಿಟ್ಟುಸಿರುಬಿಟ್ಟ ಸ್ಥಳೀಯರು

2 years ago

ಹಾಸನ: ಹಲವು ದಿನಗಳಿಂದ ರೈತರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯೊಂದು ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ಸೆರೆಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಎನ್. ಸಿಂಗೇನಹಳ್ಳಿ ಬಳಿ ನಡೆದಿದೆ. ಕಳೆದ ಕೆಲ ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಪ್ರಾಣ ಭಯದೊಂದಿಗೆ...

ಹಸಿವು ತಾಳಲಾಗದೇ ಮನೆಯಂಗಳದಲ್ಲಿ ಎದ್ದು ಬಿದ್ದು ಒದ್ದಾಡಿ ಚಿರತೆ ಸಾವು: ವಿಡಿಯೋ ನೋಡಿ

2 years ago

ಉಡುಪಿ: ಹೆಣ್ಣು ಚಿರತೆಯೊಂದು ಮನೆಯಂಗಳದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪ್ಪಾಡಿಯಲ್ಲಿ ನಡೆದಿದೆ. ಈ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ತಾಲೂಕಿನ ಎರ್ಲಪ್ಪಾಡಿ ಗ್ರಾಮದ ಕಾಂತರಗೋಡಿಯ ವಿಲಿಎಂ ಎಂಬವರ ಮನೆಯ ಅಂಗಳಕ್ಕೆ ದೊಡ್ಡ ಗಾತ್ರದ ಹೆಣ್ಣು ಚಿರತೆಯೊಂದು ಏಕಾಏಕಿ ಬಂದಿದೆ....

ಅಂದು ರೈತರ ಮೇಲೆ ಜೀಪ್ ಹತ್ತಿಸಿದ್ರು, ಇಂದು ಬಂಧಿಸಿ ಹಿಗ್ಗಾಮುಗ್ಗಾ ಥಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳು!

2 years ago

ಚಿಕ್ಕಮಗಳೂರು: ಅಂದು ರೈತರ ಮೇಲೆ ಜೀಪ್ ಹತ್ತಿಸೋಕೆ ಹೋಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಇಂದು ಮತ್ತೆ ತಮ್ಮ ರಾಕ್ಷಸ ಪ್ರವೃತ್ತಿ ಮೆರೆದಿದ್ದಾರೆ. ಚಿಕ್ಕಮಗಳೂರಿನ ತರಿಕೆರೆ ತಾಲೂಕಿನ ಎಂಸಿ.ಹಳ್ಳಿಯ ಸರ್ವೆ ನಂಬರ್ 4ರಲ್ಲಿ 438 ಎಕರೆ ಜಾಗಕ್ಕೆ ನಾಲ್ಕು ದಶಕಗಳಿಂದ ಅರಣ್ಯ ಇಲಾಖೆ...

30ಕ್ಕೂ ಹೆಚ್ಚು ಕೋತಿಗಳನ್ನು ಕೊಂದು ಬೆಟ್ಟದಲ್ಲಿ ತಂದು ಬಿಸಾಡಿದ್ರು!

2 years ago

ಕೋಲಾರ: ಮೂವತ್ತಕ್ಕೂ ಹೆಚ್ಚು ಕೋತಿಗಳನ್ನು ದುಷ್ಕರ್ಮಿಗಳು ಕೊಂದು ಬೆಟ್ಟದಲ್ಲಿ ತಂದು ಬಿಸಾಡಿರುವ ದಾರುಣ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಬಳಿಯ ಯರ್ರಕೊಂಡ ಬೆಟ್ಟದಲ್ಲಿ ನಡೆದಿದೆ. ಬುಧವಾರ ರಾತ್ರಿ ಯಾರೋ ದುಷ್ಕರ್ಮಿಗಳು ಕೋತಿಗಳನ್ನು ಕೊಂದು, ಮೂಟೆಗಳಲ್ಲಿ ತುಂಬಿಕೊಂಡು ಬಂದು ಬಿಸಾಡಿ ಹೋಗಿದ್ದಾರೆ....