Sunday, 18th August 2019

Recent News

2 years ago

ವಿಡಿಯೋ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು, ದಾರಿ ತಿಳಿಯದೇ ಸಮುದ್ರಕ್ಕೆ ಬಿದ್ದ ಕಡವೆ

ಕಾರವಾರ: ಇಂದು ಬೆಳಗ್ಗೆ ಕಾಡಿನಿಂದ ನಾಡಿಗೆ ಬಂದ ಕಡವೆಯೊಂದು ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕಾರವಾರ ನಗರದ ಆಲಿಗದ್ದಾ ಕಡಲ ತೀರದ ಸಮುದ್ರದಲ್ಲಿ ಬಿದ್ದಿತ್ತು. ಸಮುದ್ರದಲ್ಲಿ ಸುಮಾರು ಒಂದು ಘಂಟೆಗಳ ಕಾಲ ಕಡವೆ ಈಜುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಿಯ ಮೀನುಗಾರರ ಸಹಾಯದಿಂದ ಕಡವೆಯನ್ನು ರಕ್ಷಿಸಿದ್ದಾರೆ. ಮೂರು ವರ್ಷದ ಪ್ರಾಯದ ಕಡವೆಯನ್ನು ರಕ್ಷಿಸಿ, ಚಿಕಿತ್ಸೆ ನೀಡಿ ಅದನ್ನು ಮರಳಿ ಕಾಡಿಗೆ ಬಿಡಲಾಗಿದೆ.   […]

2 years ago

ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಪ್ರತ್ಯಕ್ಷವಾಗೋ ಮಂಗ- 6 ತಿಂಗ್ಳಲ್ಲಿ 80ಕ್ಕೂ ಹೆಚ್ಚು ಜನರ ಮೇಲೆ ದಾಳಿ

ಬೆಳಗಾವಿ: ಜಿಲ್ಲೆಯ ಅರಸಗಿ ಗ್ರಾಮದಲ್ಲಿ ಮಂಗವೊಂದು ಜನರ ನೆಮ್ಮದಿಯನ್ನು ಹಾಳು ಮಾಡಿದೆ. ಗ್ರಾಮದಲ್ಲಿ ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಸಾಕು ಪ್ರತ್ಯಕ್ಷವಾಗುವ ಮಂಗ ಕಳೆದ 6 ತಿಂಗಳಿಂದ ಸುಮಾರು 80ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ. ಇತ್ತೀಚಿಗಷ್ಟೆ ಟ್ರ್ಯಾಕ್ಟರ್‍ನಲ್ಲಿ ಸುರಕ್ಷತೆಗಾಗಿ ಕಟ್ಟಿಗೆ ತೆಗೆದುಕೊಂಡು ಹೋಗ್ತಿದ್ದ ರೈತನ ಮೇಲೂ ಮಂಗ ಮಾರಣಾಂತಿಕ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾದ ರೈತನನ್ನು...

ಆಹಾರ ಅರಸುತ್ತಾ ಬಂದು ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿ ರಕ್ಷಣೆ

2 years ago

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕರೆ ತಾಲೂಕಿನ ತಿರುಮಲಾಪುರ ಗ್ರಾಮಕ್ಕೆ ಆಹಾರ ಅರಸುತ್ತಾ ಬಂದು ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆಹಾರ, ನೀರು ಹುಡುಕುತ್ತಾ ನಾಡಿನತ್ತ ಬಂದ ಕರಡಿ ರೈತರು ಗದ್ದೆಗೆ ಹಾಕಿದ ತಂತಿಗೆ ಸಿಲುಕಿತ್ತು. ಗ್ರಾಮದ ವೆಂಕಟೇಶ್ ಎಂಬವರ ಗದ್ದೆಯಲ್ಲಿ...

ಚಿಕ್ಕಮಗಳೂರು: ಬೆಂಕಿಗಾಹುತಿಯಾದ ಮೆರುತಿ ಗುಡ್ಡದ ವಿಶೇಷತೆ ಏನ್ ಗೊತ್ತಾ..?

2 years ago

ಚಿಕ್ಕಮಗಳೂರು: ಈ ಬಾರಿಯ ಭೀಕರ ಬರಗಾಲದಿಂದ ರಾಜ್ಯಾದ್ಯಂತ ಸಾವಿರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಅರಣ್ಯಕ್ಕೆ ಬೆಂಕಿ ಬಿದ್ದಾಗೆಲ್ಲಾ ಸ್ಥಳಿಯರು ಮಾಹಿತಿ ನೀಡಿದ್ರು ಅರಣ್ಯ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬರೋದಿಲ್ಲ ಅನ್ನೋದು ರಾಜ್ಯದ ಜನರ ಆರೋಪ. ಅದೇ ರೀತಿ, ರಾಜ್ಯದ ಅತಿ...

ಬಿಳಿಗಿರಿ ರಂಗನ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಬೆಂಕಿ

2 years ago

ಚಾಮರಾಜನಗರ: ಕಳೆದ ಎಂಟು ದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮೂರು ದಿನಗಳಿಂದ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಣಾ ಪ್ರದೇಶ ಅಕ್ಷರಶಃ ಬೆಂಕಿಯಿಂದ ಹೊತ್ತಿ ಉರಿದಿತ್ತು. ಇದೀಗ ಬೆಂಕಿಯನ್ನು ನಂದಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಬೆಂಕಿ ಜ್ವಾಲೆಯ ನಡುವೆ ಅರಣ್ಯ ಇಲಾಖೆ...