Tuesday, 22nd January 2019

6 hours ago

ಪಲ್ಟಿ ಹೊಡೆದು 60 ಅಡಿ ಆಳಕ್ಕೆ ಬಿದ್ದ 50 ಜನರಿದ್ದ ಟ್ರಕ್

ಭುವನೇಶ್ವರ: ಓರಿಸ್ಸಾ ರಾಜ್ಯದ ಕಂಧಮಾಲಾ ಜಿಲ್ಲೆಯ ಬಾಲಿಗುಡಾ ಎಂಬಲ್ಲಿ 50 ಜನರು ಹೊತ್ತು ಸಾಗುತ್ತಿದ್ದ ಟ್ರಕ್ ಪಲ್ಟಿ ಹೊಡೆದು 60 ಅಡಿ ಆಳಕ್ಕೆ ಬಿದ್ದಿದೆ. ಘಟನೆಯಲ್ಲಿ 8 ಜನರು ಮೃತಪಟ್ಟಿದ್ದು, 25ಕ್ಕೂ ಹೆಚ್ಚಿನ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಹಲವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಬೆರಹಮಪುರ ನಗರದ ಕೃಷ್ಣಚಂದ ಗಜಪತಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಲುಮಾ ಕ್ಷೇತ್ರದ ಸುಮಾರು 50 ಜನರು ಚರ್ಚ್ ಕಾರ್ಯಕ್ರಮದಲ್ಲಿ ಭಾಗಿಯಾಗಲು […]

11 hours ago

ಸಿದ್ದಗಂಗಾ ಶ್ರೀ ಅಂತಿಮ ದರ್ಶನ ಪಡೆದು ಮರಳುವಾಗ ಅಪಘಾತ – ಓರ್ವ ಸಾವು

ಚಿಕ್ಕಮಗಳೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದು ಹಿಂದಿರುಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗೆದ್ಲೆಹಳ್ಳಿ ಬಳಿ ನಡೆದಿದೆ. ಪರಮೇಶ್ವರಪ್ಪ(40) ಸ್ಥಳದಲ್ಲೇ ಮೃತ ವ್ಯಕ್ತಿ. ಕಡೂರಿನ ಮಲ್ಲೇಶ್ವರ ಗ್ರಾಮದ ಏಳು ಮಂದಿ ಬೊಲೆರೋ ಮಾಡಿಕೊಂಡು...

ರೆಸಾರ್ಟಿನಲ್ಲಿ ಗಲಾಟೆ ಆಗಿದ್ದು ನಿಜ : ಸಿದ್ದರಾಮಯ್ಯ

2 days ago

ಕೊಪ್ಪಳ: ಪಕ್ಷದ ಕಾರ್ಯಕರ್ತರು ರೆಸಾರ್ಟಿನಲ್ಲಿ ತಂಗಿದ್ದ ವೇಳೆ ರಾತ್ರಿ ಸ್ವಲ್ಪ ಜಗಳ ನಡೆದಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ರೆಸಾರ್ಟಿನಲ್ಲಿ...

ಮೊದ್ಲು ಮದುವೆ ಬಳಿಕ ಎದೆನೋವು ಈಗ ಆಕ್ಸಿಡೆಂಟ್ – ಕಡೆಗೂ ಆನಂದ್ ಸಿಂಗ್ ತಲೆಗೆ 12 ಹೊಲಿಗೆ!

2 days ago

ಬೆಂಗಳೂರು: ಶಾಸಕ ಆನಂದ್ ಸಿಂಗ್ ಅವರ ತಲೆಗೆ ಪೆಟ್ಟಾಗಿದ್ದು, ವೈದ್ಯರು 12 ಹೊಲಿಗೆ ಹಾಕಿದ್ದಾರೆ ಎಂಬ ಮಾಹಿತಿ ಅಪೋಲೋ ಆಸ್ಪತ್ರೆಯ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಆನಂದ್ ಸಿಂಗ್ ಅವರಿಗೆ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮೊದಲಿನಿಂದಲೂ ಭಿನ್ನ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್...

ಪತಿಯನ್ನೇ ಕೊಲೆ ಮಾಡಿ, ಅಪಘಾತವೆಂದು ಬಿಂಬಿಸಿದ್ದ ಪತ್ನಿ ಅಂದರ್

3 days ago

ಮೈಸೂರು: ಪ್ರಿಯತಮನ ಜೊತೆ ಇರಲು ಪತಿ ಅಡ್ಡವಾಗಿದ್ದಾನೆ ಎಂದು ಪತ್ನಿ ತನ್ನ ಪ್ರಿಯತಮ ಜೊತೆ ಸೇರಿ ಪತಿಯನ್ನು ಕೊಂದು ಅದು ಅಪಘಾತ ಎಂದು ಬಿಂಬಿಸಿದ ಪ್ರಕರಣ ಈಗ ಬಯಲಾಗಿದೆ. ಬಸವರಾಜ್ ಮೃತ ವ್ಯಕ್ತಿ. ಜನವರಿ 5 ರಂದು ಮೈಸೂರಿನ ಟಿ.ನರಸೀಪುರದಲ್ಲಿ ಕೊಳ್ಳೇಗಾಲ...

ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತಕ್ಕೆ ಬಲಿ

4 days ago

ಚಿಕ್ಕೋಡಿ/ಬೆಳಗಾವಿ: ಟ್ರಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿಯಾದ ಪರಿಣಾಮ ರಜೆಯ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಾಗರಮುನ್ನೋಳಿ ಗ್ರಾಮ ನಿವಾಸಿ ಸಿಕಂದರ್ ಮುಲ್ತಾನಿ (28) ಮೃತ ಯೋಧ. ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಮೇಲೆ ಈ ಘಟನೆ ನಡೆದಿದೆ. ಕಳೆದ 9...

ಅಡ್ಡಾದಿಡ್ಡಿ ಕಾರು ಚಾಲನೆ- ರೊಚ್ಚಿಗೆದ್ದ ಸ್ಥಳೀಯರಿಂದ ವಾಹನ ಪುಡಿ ಪುಡಿ

5 days ago

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಬೈಕ್ ಹಾಗೂ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯಲ್ಲಿ ನಡೆದಿದೆ. ವ್ಯಕ್ತಿ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಬೈಕ್ ಮತ್ತು ಎರಡು ಕಾರುಗಳಿಗೆ...

ವೇಗವಾಗಿ ಬಂದು ರಸ್ತೆ ತಿರುವಿನಲ್ಲಿ ಮಿನಿ ಕ್ಯಾಂಟರ್ ಪಲ್ಟಿ

5 days ago

ಹಾಸನ: ಚಾಲಕನ ನಿಯಂತ್ರಣ ತಪ್ಪಿದ ಮಿನಿ ಕ್ಯಾಂಟರ್ ಪಲ್ಟಿಯಾದ ಪರಿಣಾಮ ಮೂವರು ಮಹಿಳೆಯರೂ ಸೇರಿದಂತೆ 8 ಮಂದಿ ಗಾಯಗೊಂಡಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಮಾಗಲು ಬಳಿ ನಡೆದಿದೆ. ಕಾಂಕ್ರಿಟ್ ಮಿಕ್ಸರ್ ಮತ್ತು ಕಾರ್ಮಿಕರನ್ನು ಕರೆದುಕೊಂಡು ಕ್ಯಾಂಟರ್ ಹಾಸನ ಕಡೆ ಹೊರಟಿತ್ತು....