Tag: ಅಕ್ಕ

  • ಆಸ್ತಿಗಾಗಿ ತಂದೆ-ತಾಯಿ, ಒಡಹುಟ್ಟಿದ ಅಕ್ಕನನ್ನ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪಾಪಿ

    ಆಸ್ತಿಗಾಗಿ ತಂದೆ-ತಾಯಿ, ಒಡಹುಟ್ಟಿದ ಅಕ್ಕನನ್ನ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪಾಪಿ

    ವಿಜಯಪುರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ಅಕ್ಕನನ್ನು ಬರ್ಬರವಾಗಿ ಕೊಲೆ ಮಾಡಿದ ಅಮಾನವೀಯ ಘಟನೆ ಕರ್ನಾಟಕ- ಮಹಾರಾಷ್ಟ್ರದ ಗಡಿ ಭಾಗದಲ್ಲಿ ನಡೆದಿದೆ.

    ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿಯ ತೋಟದ ಮನೆಯಲ್ಲಿ ಘಟನೆ ನಡೆದಿದ್ದು, ಸಿದ್ದಪ್ಪ ಅರಕೇರಿ ಕೊಲೆ ಮಾಡಿದ ಪಾಪಿ. ತಂದೆ ಗುರುಲಿಂಗಪ್ಪ ಅರಕೇರಿ (82), ತಾಯಿ ನಾಗವ್ವ ಅರಕೇರಿ (75) ಹಾಗೂ ಅಕ್ಕ ಸಮುದ್ರಾಬಾಯಿ (60) ಕೊಲೆಯಾದ ದುರ್ದೈವಿಗಳು.

    BIJ MURDER A

    ಆಸ್ತಿಯ ವಿಚಾರವಾಗಿ ಸಿದಪ್ಪ ಆಗಾಗ ತಂದೆ-ತಾಯಿ ಹಾಗೂ ಅಕ್ಕನ ಜೊತೆಗೆ ಜಗಳ ಮಾಡುತ್ತಿದ್ದ. ಬುಧವಾರ ಜಗಳ ತಾರಕಕ್ಕೇರಿದ ಪರಿಣಾಮ ಸಿದ್ದಪ್ಪ ಕೊಡಲಿಯಿಂದ ಮೂವರನ್ನೂ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಸಮೀಪದ ಉಮದಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉಮದಿ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತ ದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

  • ಬಿಜೆಪಿ ಮುಖಂಡನ ಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಆರೋಪಿ

    ಬಿಜೆಪಿ ಮುಖಂಡನ ಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಆರೋಪಿ

    – ಆರೋಪಿ ಅಕ್ಕನ ಬಗ್ಗೆ ಬಳಸಿದ ಪದವೇ ಕೊಲೆಗೆ ಕಾರಣ

    ಮೈಸೂರು: ಮೈಸೂರಿನಲ್ಲಿ ಮಾರ್ಚ್ 6 ರಂದು ಹುಟ್ಟುಹಬ್ಬದ ಪಾರ್ಟಿಯಲ್ಲೇ ನಡೆದಿದ್ದ ಬಿಜೆಪಿ ಮುಖಂಡ ಆನಂದ್ ಬರ್ಬರ ಹತ್ಯೆಗೆ ಅಸಲಿ ಕಾರಣ ಈಗ ಸ್ಪಷ್ಟವಾಗಿದೆ.

    ಆನಂದ್ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ ಬಸವರಾಜ್ ಕೊಲೆಗೆ ಕಾರಣ ಬಿಚ್ಚಿಟ್ಟಿದ್ದಾನೆ. ಆರೋಪಿ ಬಸವರಾಜ್ ನ ಅಕ್ಕನ ಬಗ್ಗೆ ಕೊಲೆಯಾದ ಆನಂದ್ ಕೆಟ್ಟದಾಗಿ ಮಾತನಾಡಿದ್ದೇ ಆತನ ಕೊಲೆಗೆ ಕಾರಣವಾಗಿದೆ. ಆರೋಪಿ ಬಸವರಾಜ್, ರಾ ಎಣ್ಣೆ ಕುಡಿದು ಅದೇ ಬಾಟಲ್‍ನಲ್ಲಿ ಆನಂದ್ ಬುರುಡೆ ಬಿಚ್ಚಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    mys BJP Leader

    ಮಾರ್ಚ್ 5ರ ಸಂಜೆ ಬಸವರಾಜ್‍ಗೆ ಕರೆ ಮಾಡಿ ಆನಂದ್ ಪಾರ್ಟಿಗೆ ಕರೆಸಿಕೊಂಡಿದ್ದ. ಮಧ್ಯರಾತ್ರಿಯವರೆಗೆ ಪಾರ್ಟಿ ಮಾಡಿದ್ದರು. ಕುಡಿದಾಗ ಬಾಸ್‍ನಂತೆ ವರ್ತಿಸುತ್ತಿದ್ದ ಬಿಜೆಪಿ ಮುಖಂಡ ಆನಂದ್, ತನ್ನ ಸುತ್ತಮುತ್ತ ಇದ್ದವರನ್ನು ನಿಂದಿಸುತ್ತ ತಾನು ಹೇಳಿದ ಕೆಲಸ ಮಾಡುವಂತೆ ಸೂಚಿಸುತ್ತಿದ್ದ. ಅಲ್ಲದೆ ಈ ಹಿಂದೆಯೂ ಪಾರ್ಟಿ ಕೊಡಿಸಿ ಬಸವರಾಜ್ ಮೇಲೆ ಆನಂದ್ ಹಲ್ಲೆ ಮಾಡಿದ್ದ.

    ಈ ಬಾರಿಯೂ ಹುಟ್ಟುಹಬ್ಬದ ದಿನ ಪಾರ್ಟಿಯಲ್ಲಿ ಮಧ್ಯರಾತ್ರಿ ಬಸವರಾಜ್ ಜೊತೆ ಆನಂದ್ ಕುಚೇಷ್ಠೆ ಮಾಡಿ, ಬಸವರಾಜ್ ತಲೆ ಮೇಲೆ ಹೊಡೆದು ಅವರ ಅಕ್ಕನ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಆನಂದ್ ಮಾತಿನಿಂದ ಸಿಟ್ಟಿಗೆದ್ದ ಬಸವರಾಜ್ ಅರ್ಧ ಬಾಟೆಲ್ ರಾ ಎಣ್ಣೆಯನ್ನು ಕುಡಿದು, ಅದೇ ಬಾಟಲ್‍ನಿಂದಲೇ ಆನಂದ್ ತಲೆಗೆ ಹೊಡೆದಿದ್ದಾನೆ. ಒಂದೇ ಏಟಿಗೆ ಆನಂದ್ ತಲೆ ಹಾಗೂ ಬಾಟಲ್ ಎರಡು ಓಪನ್ ಆಗಿದೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದಾನೆ. ಆಗ ಜೇಬಿನಲ್ಲಿದ್ದ ಚಾಕುವಿನಿಂದ ಆನಂದ್‍ಗೆ ಹಿಗ್ಗಾಮುಗ್ಗ ಇರಿದು ಕೊಲೆ ಮಾಡಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    MYS MURDER AV 4 1

    ಕೊಲೆ ನಂತರ ಅಪಾರ್ಟ್‌ಮೆಂಟ್‌ ನಿಂದ ಮನೆಗೆ ತೆರಳಿ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಮಾರ್ಚ್ 6ರಂದೆ ಬೆಂಗಳೂರಿಗೆ ತೆರಳಿದ್ದಾನೆ. ನಂತರ ಸ್ನೇಹಿತರ ಸಲಹೆಯಂತೆ ತಾನೇ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ.

  • ಅಕ್ಕನ ಆರೈಕೆಗಾಗಿ ಶಾಲೆ ಬಿಟ್ಟು ಕೂಲಿಗೆ ಸೇರಿದ ತಮ್ಮ

    ಅಕ್ಕನ ಆರೈಕೆಗಾಗಿ ಶಾಲೆ ಬಿಟ್ಟು ಕೂಲಿಗೆ ಸೇರಿದ ತಮ್ಮ

    -ಹೆತ್ತವರಿಲ್ಲದೇ ಸಹಾಯ ಹಸ್ತ ಬಯಸುತ್ತಿರುವ ಬಡ ಜೀವಗಳು

    ಮೈಸೂರು: ಅಕ್ಕ-ತಮ್ಮ ಬಾಂಧವ್ಯ, ಅಣ್ಣ-ತಂಗಿಯ ಬಾಂಧವ್ಯ ಯಾವತ್ತೂ ಅಮರ. ಅಕ್ಕನಿಗಾಗಿ, ತಂಗಿಗಾಗಿ ಸಹೋದರ ಏನೂ ಬೇಕಾದರೂ ಮಾಡುತ್ತಾನೆ. ಯಾವ ತ್ಯಾಗಕ್ಕೂ ಬೇಕಾದರೂ ಸಿದ್ಧನಾಗುತ್ತಾನೆ. ಈ ಮಾತಿಗೆ ಸಾಕ್ಷಿ ಎನ್ನುವಂತಹ, ಮನ ಕಲುಕುವ ಸುದ್ದಿ ಇದಾಗಿದ್ದು, ತಂದೆ ತಾಯಿಯನ್ನು ಕಳೆದುಕೊಂಡ ಬಾಲಕ, ಪಾರ್ಶ್ವವಾಯು ರೋಗಕ್ಕೆ ಒಳಗಾದ ಅಕ್ಕನ ಆರೈಕೆಗಾಗಿ ಶಾಲೆ ಬಿಟ್ಟು ಕೂಲಿ ಮಾಡುತ್ತಿದ್ದಾನೆ.

    MYS HD KOTE 1

    ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಅಲನಹಳ್ಳಿ ಗ್ರಾಮದ ಮಂಜುಳಾ ಮತ್ತು ಕುಮಾರ್ ದಂಪತಿ ಪುತ್ರ ಆಕಾಶ್(15) ತನ್ನ ಅಕ್ಕ ಅನುಷಾ(17) ಆರೈಕೆಗಾಗಿ ಓದು ಬಿಟ್ಟು ಕೂಲಿಗೆ ಇಳಿದಿದ್ದಾನೆ. ಅನಾರೋಗ್ಯದಿಂದ ಇವರ ತಂದೆ ತಾಯಿ ಮೃತಪಟ್ಟಿದ್ದಾರೆ. ಗ್ರಾಮದ ಟಿ.ಎಸ್ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಆಕಾಶ್ 8ನೇ ತರಗತಿ ಓದುತ್ತಿದ್ದ. ಹೆತ್ತವರು ಮೃತಪಟ್ಟ ಕಾರಣ ರೋಗ ಪೀಡಿತ ಅಕ್ಕನ ನೋಡಿಕೊಳ್ಳಲು ಯಾರು ಇಲ್ಲದೆ, ಮನೆ ನಿರ್ವಹಣೆಗೆ ದಾರಿಯೂ ಇಲ್ಲದ ಕಾರಣ ಶಾಲೆ ಬಿಟ್ಟು ಕೂಲಿ ಮಾಡುತ್ತಿದ್ದಾನೆ.

    MYS HD KOTE 3

    ಅಕ್ಕನಿಗೆ ಕೈ ಕಾಲುಗಳು ಸ್ವಾಧೀನ ಇಲ್ಲ. ಆಕೆಯ ನಿತ್ಯ ಕರ್ಮ ಪೂರೈಸಲು, ಊಟ ಮಾಡಿಸಲು, ಬಟ್ಟೆ ಬದಲಿಸಲು ತಮ್ಮ ನೆರವಾಗುತ್ತಿದ್ದಾನೆ. ಅಕ್ಕನ ಕೆಲಸ ಮುಗಿಸಿ ಕೂಲಿಗೆ ಹೋಗುತ್ತಿದ್ದಾನೆ. ಸಂಜೆ ಮನೆಗೆ ಬಂದು ಅಡುಗೆ ಮಾಡಿ ಅಕ್ಕನಿಗೆ ಊಟ ಮಾಡಿಸುತ್ತಾನೆ. ಈ ಅನಾಥ ಅಕ್ಕ-ತಮ್ಮನಿಗೆ ಉಳ್ಳವರ ಸಹಾಯ ಬೇಕಿದೆ.

    ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲ್ಲೂಕಿನ ಹಾಲಹಳ್ಳಿ ಆಕಾಶ್ ಮನೆಗೆ ತಹಸೀಲ್ದಾರ್ ಆರ್ ಮಂಜುನಾಥ್ ಭೇಟಿ ನೀಡಿದ್ದರು. ಅನುಷಾಳಿಗೆ ಮೆದುಳು ನಿಷ್ಕ್ರಿಯ ಕಾಯಿಲೆ(ಸೆಬರ್ ಪಾಲ್ಸಿ) ಎಂಬ ಕಾಯಿಲೆ ಇದ್ದು, ಆಕೆಗೆ ಯಾವುದೇ ಸ್ವಾಧೀನ ಇರುವುದಿಲ್ಲ ಹೀಗಾಗಿ ಆಕೆಯನ್ನು ಮೈಸೂರಿನ ಕರುಣಾಲಯ ಟ್ರಸ್ಟ್ ಗೆ ಸ್ಥಳಾಂತರಿಸಿ ಆಕೆಯ ಶುಶ್ರೂಷೆಯನ್ನು ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

    MYS HD KOTE 2

    ಇತ್ತ ಆಕಾಶ್‍ನನ್ನು ಮೈಸೂರಿನ ಬಾಲಮಂದಿರಕ್ಕೆ ಸೇರಿಸಿ ಶಿಕ್ಷಣ ಕೊಡಿಸಲಾಗುವುದು ಎಂದು ತಿಳಿಸಿದಾಗ, ಬಾಲಕ ಆಲನಹಳ್ಳಿಯ ಶಾಲೆಯಲ್ಲಿ ಓದುತ್ತೇನೆ ನನಗೆ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಡಿ ಎಂದು ಹೇಳಿದ್ದಾನೆ. ಆತನ ಇಚ್ಛೆಯಂತೆ ಕ್ಯಾತನಹಳ್ಳಿಯಲ್ಲಿ ಹಾಸ್ಟೆಲ್ ಇದ್ದು ಆತನನ್ನು ಅಲ್ಲಿಗೇ ಸೇರಿಸಿ ಶಿಕ್ಷಣ ಮುಂದುವರಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

  • ಟಿವಿ ರಿಮೋಟ್ ಗಾಗಿ 7 ವರ್ಷದ ತಮ್ಮನ ಜೊತೆ ಜಗಳ- ಅಕ್ಕ ನೇಣಿಗೆ ಶರಣು

    ಟಿವಿ ರಿಮೋಟ್ ಗಾಗಿ 7 ವರ್ಷದ ತಮ್ಮನ ಜೊತೆ ಜಗಳ- ಅಕ್ಕ ನೇಣಿಗೆ ಶರಣು

    ನವದೆಹಲಿ: ಟಿವಿ ರಿಮೋಟ್ ನಿಂದ ಆರಂಭವಾದ ಅಕ್ಕ-ತಮ್ಮನ ಜಗಳ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಅಂತ್ಯವಾದ ಹೀನಾಯ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಈ ಘಟೆನೆ ಬುಧವಾರ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಗೆ 12 ವರ್ಷ ವಯಸ್ಸು ಎಂಬುದಾಗಿ ವರದಿಯಾಗಿದೆ.

    ಏನಿದು ಘಟನೆ?:
    ಬಾಲಕಿ ತನ್ನ 7 ವರ್ಷದ ತಮ್ಮ ಹಾಗೂ 17 ವರ್ಷದ ಅಣ್ಣನ ಜೊತೆ ಕುಳಿತು ಟಿವಿ ನೋಡುತ್ತಿದ್ದಳು. ಸ್ವಲ್ಪ ಹೊತ್ತು ಟಿವಿ ನೋಡಿದ ಅಣ್ಣ ಬಳಿಕ ಓದಲೆಂದು ತನ್ನ ಕೋಣೆಗೆ ತೆರಳಿದ್ದಾನೆ. ತಮ್ಮ ಟಿವಿ ನೋಡುತ್ತಾ ಅಪ್ಪ- ಅಮ್ಮನ ಬರುವಿಕೆಯನ್ನು ಕಾಯುತ್ತಿದ್ದನು.

    TV

    ಸಂಜೆ ಸುಮಾರು 5.5ರ ಸುಮಾರಿಗೆ ಬಾಲಕಿಯ ನೆಚ್ಚಿನ ಶೋ ಒಂದನ್ನು ನೋಡಲು ತಮ್ಮನ ಬಳಿ ರಿಮೋಟ್ ಕೇಳಿದ್ದಾಳೆ. ಆದ್ರೆ ಬಾಲಕ ರಿಮೋಟ್ ಕೊಡಲು ನಿರಾಕರಿಸಿದ್ದಾನೆ. ಶೋ 6 ಗಂಟೆಗೆ ಆರಂಭವಾಗುತ್ತದೆ ಎಂದಾಗ ಆಕೆ ಮತ್ತೆ ರಿಮೋಟ್ ಕೊಡುವಂತೆ ಕೇಳಿದ್ದಾಳೆ. ಆದ್ರೆ ಈ ವೇಳೆಯೂ ಆತ ತಾನು ಕೊಡಲ್ಲ ಅಂತ ಹೇಳಿ ತನ್ನ ಪಾಡಿಗೆ ತಾನು ಟಿವಿ ನೋಡುತ್ತಾ ಕುಳಿತಿದ್ದನು.

    ಇದರಿಂದ ಸಿಟ್ಟುಗೊಂಡ ಬಾಲಕಿ ತಮ್ಮನಿಗೆ ಸರಿಯಾಗಿ ಥಳಿಸಿ ನಂತರ ಬೆಡ್ ರೂಮಿಗೆ ತೆರಳಿ ಗಟ್ಟಿಯಾಗಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ವೇಳೆ ಅಕ್ಕ ತನಗೆ ಹೊಡೆದಿದ್ದನ್ನು ಲೆಕ್ಕಿಸದೆ ಕೂಡಲೇ ತಮ್ಮ ಅಲ್ಲಿಗೆ ತೆರಳಿ ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದಾನೆ. ಹೀಗೆ ಸುಮಾರು ಹೊತ್ತು ಡೋರ್ ಓಪನ್ ಮಾಡುವಂತೆ ಕೇಳಿಕೊಂಡರೂ ಆಕೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ಇದರಿಂದ ಗಾಬರಿಗೊಂಡ ತಮ್ಮ ನೇರವಾಗಿ ಅಣ್ಣನ ಬಳಿ ಹೋಗಿ ವಿಷಯ ತಿಳಿಸಿದ್ದಾನೆ.

    GIRL

    ತಕ್ಷಣವೇ ರೂಮಿನ ಬಳಿ ಬಂದ ಅಣ್ಣ ಬಾಗಿಲು ಒಡೆದಿದ್ದಾನೆ. ಈ ವೇಳೆ ತಂಗಿ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಳು. ಇದರಿಂದ ಗಾಬರಿಗೊಂಡ ಅಣ್ಣ ಹಾಗೂ ತಮ್ಮ ಸೇರಿ ಬಾಲಕಿಯನ್ನು ಕುಣಿಕೆಯಿಂದ ಬಿಡಿಸಿ ಕೆಳಗಿಳಿಸಿ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಇತ್ತ ನಡೆದ ಘಟನೆಯನ್ನು ಹೆತ್ತವರಿಗೂ ತಿಳಿಸಿದ್ದಾರೆ.

    ಆದ್ರೆ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ. ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಮ್ಮ ತ್ರಿಲೋಕಿಯನ್ನ ಪರಲೋಕಕ್ಕೆ ಕಳಿಸಿದ ಖರ್ತನಾಕ್ ಅಕ್ಕ

    ತಮ್ಮ ತ್ರಿಲೋಕಿಯನ್ನ ಪರಲೋಕಕ್ಕೆ ಕಳಿಸಿದ ಖರ್ತನಾಕ್ ಅಕ್ಕ

    ಚಂಡೀಗಢ: ಸ್ವಂತ ಅಕ್ಕನೇ ಹಣಕ್ಕಾಗಿ ಮಲಗಿದ್ದ ತಮ್ಮನ ಕುತ್ತಿಗೆ ಹಗ್ಗ ಬಿಗಿದು ಕೊಲೆಗೈದಿರುವ ಅಮಾನವೀಯ ಘಟನೆ ಹರಿಯಾಣದ ಫರೀದಾಬಾದ್ ನಗರದಲ್ಲಿ ನಡೆದಿದೆ.

    30 ವರ್ಷದ ತ್ರಿಲೋಕಿ ಎಂಬಾತನೇ ಅಕ್ಕನಿಂದ ಕೊಲೆಯಾದ ದುರ್ದೈವಿ. ತ್ರಿಲೋಕಿ 2016 ನವೆಂಬರ್ ನಲ್ಲಿ ನೋಟ್ ಬ್ಯಾನ್ ಮೊದಲೇ ಅಕ್ಕನಿಗೆ 7.25 ಲಕ್ಷ ರೂ. ಇಟ್ಟುಕೊಳ್ಳುವಂತೆ ನೀಡಿದ್ದನು. ಹಣ ಹಿಂದಿರುಗಿ ಕೇಳಿದ ತಮ್ಮನನ್ನು ಅಕ್ಕ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಳು.

    money

    ತ್ರಿಲೋಕಿ ಸಂಬಂಧಿಯೊಬ್ಬರು ಇದು ಕೊಲೆ ಎಂದು ಅನುಮಾನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗೆ ಕಳಿಸಿದಾಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬುವುದು ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದಾಗ ಅಕ್ಕ ತಪ್ಪೊಪ್ಪಿಕೊಂಡಿದ್ದಾಳೆ.

    ಏನಿದು ಪ್ರಕರಣ?
    ಮೂರು ವರ್ಷದ ಹಿಂದೆ ಪತಿ ತ್ರಿಲೋಕಿಯನ್ನು ತೊರೆದು ಪತ್ನಿ ತವರು ಮನೆ ಸೇರಿದ್ದಳು. ಪತ್ನಿ ದೂರವಾದ ಬಳಿಕ ಮಾನಸಿಕವಾಗಿ ಕುಗ್ಗಿದ ತ್ರಿಲೋಕಿ ಅಕ್ಕನ ಮನೆಯಲ್ಲಿಯೇ ವಾಸವಾಗಿದ್ದನು. 2016 ನವೆಂಬರ್ ನಲ್ಲಿ ನಗರದಲ್ಲಿರುವ ತನ್ನ ನಿವೇಶನವನ್ನು 7.25 ಲಕ್ಷ ರೂ.ಗೆ ಮಾರಾಟ ಮಾಡಿದ ತ್ರಿಲೋಕಿ ಹಣವನ್ನು ಅಕ್ಕನಿಗೆ ನೀಡಿದ್ದನು. ಅಂದೇ ನಾನು ಬೇಡಿದಾಗ ಹಣ ಹಿಂದಿರುಗಿ ಕೊಡುವಂತೆ ತ್ರಿಲೋಕಿ ಹೇಳಿದ್ದನು. ತಮ್ಮನ ಮಾತಿನಂತೆ ಎಲ್ಲ ಹಣವನ್ನು ಅಕ್ಕ ತನ್ನ ಬಳಿಯೇ ಇರಿಸಿಕೊಂಡಿದ್ದಳು.

    Triple Your Money with This Simple Rule of Thumb

    ಕಳೆದ ಕೆಲವು ದಿನಗಳ ಹಿಂದೆ ತ್ರಿಲೋಕಿ ಹಣವನ್ನು ಹಿಂದಿರುಗಿ ಕೊಡುವಂತೆ ಅಕ್ಕನಿಗೆ ಕೇಳಿದ್ದಾನೆ. ಹಣ ನೀಡಲು ಒಪ್ಪದ ಅಕ್ಕ ಪ್ರತಿದಿನ ಸಬೂಬು ಹೇಳುತ್ತಾ ದಿನ ಮುಂದೂಡುತ್ತಿದ್ದಳು. ಹಣದ ವಿಷಯಕ್ಕಾಗಿ ಅಕ್ಕ, ತಮ್ಮನ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು.

    ಶುಕ್ರವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದ ತ್ರಿಲೋಕಿ ಹಣದ ವಿಚಾರಕ್ಕಾಗಿ ಅಕ್ಕನೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ. ಕೋಣೆಯೊಳಗೆ ಹೋದ ತ್ರಿಲೋಕಿ ನಿದ್ದೆಗೆ ಜಾರಿದ್ದಾನೆ. ಈ ವೇಳೆ ನಶೆಯಲ್ಲಿ ನಿದ್ದೆಗೆ ಜಾರಿದ್ದ ತಮ್ಮನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆಗೈದು ನಿದ್ದೆಗೆ ಜಾರಿದ್ದಾಳೆ. ಬೆಳಗ್ಗೆ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿ ಅಂತ್ಯಕ್ರಿಯೆಗೂ ವ್ಯವಸ್ಥೆ ಮಾಡಿಕೊಂಡಿದ್ದಳು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತನಗೆ ಎರಡು ಹೆಣ್ಣು ಅಂತ, ತಂಗಿಯ ಗಂಡು ಮಗುವನ್ನೇ ಕೊಂದ ಅಕ್ಕ

    ತನಗೆ ಎರಡು ಹೆಣ್ಣು ಅಂತ, ತಂಗಿಯ ಗಂಡು ಮಗುವನ್ನೇ ಕೊಂದ ಅಕ್ಕ

    ಚಿಕ್ಕೋಡಿ: ತನಗೆ ಎರಡು ಹೆಣ್ಣು ಮಕ್ಕಳಿವೆ ಎಂಬ ಭಾವನೆಯಿಂದ ತನ್ನ ತಂಗಿಯ 2 ವರ್ಷದ ಗಂಡು ಮಗುವನ್ನು ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಶೇಡಬಾಳ ಗ್ರಾಮದಲ್ಲಿ ನಡೆದಿದೆ.

    2 ವರ್ಷದ ಕಾರ್ತಿಕ್ ಅಲಾಸೆ ಕೊಲೆಯಾದ ಮಗು. ಶನಿವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಯಶ್ರೀ ಅಲಾಸೆಯು ತನ್ನ ತಂಗಿಯ ಮಗುವನ್ನು ನೀರು ತುಂಬಿದ್ದ ಬ್ಯಾರಲ್‍ನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಆದರೆ ನನ್ನ ತಂಗಿಗೆ ಗಂಡು ಮಗು ಹುಟ್ಟಿದೆ ಎನ್ನುವ ಸ್ವಾರ್ಥದಿಂದ ಏನೂ ಅರಿಯದ ಮಗುವನ್ನು ನಿರ್ದಾಕ್ಷೀಣ್ಯವಾಗಿ ಹತ್ಯೆ ಮಾಡಿದ್ದಾಳೆ.

    CKD MURDER AV 5

    ಕೊಲೆಯ ಬಳಿಕ ಜಯಶ್ರೀಯು ಮನೆಯಲ್ಲಿದ್ದ ಹಣ ಹಾಗೂ ಒಡವೆ ಸಮೇತ ಪರಾರಿಯಾಗಿದ್ದಾಳೆ. ವಿಷಯ ತಿಳಿದ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 14 ವರ್ಷದ ತಮ್ಮನಿಂದಲೇ ಅಕ್ಕನ ಮೇಲೆ ಅತ್ಯಾಚಾರ, ಈಗ ಗರ್ಭಿಣಿ!

    14 ವರ್ಷದ ತಮ್ಮನಿಂದಲೇ ಅಕ್ಕನ ಮೇಲೆ ಅತ್ಯಾಚಾರ, ಈಗ ಗರ್ಭಿಣಿ!

    ಮುಂಬೈ: ಅಶ್ಲೀಲ ವಿಡಿಯೋ ವಿಕ್ಷೀಸುವ ಚಟ ಹೊಂದಿದ್ದ 14 ವರ್ಷದ ಬಾಲಕ ತನ್ನ ಅಪ್ತಾಪ್ತ ವಯಸ್ಸಿನ ಅಕ್ಕನ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮುಂಬೈ ನ ಕಮೊಥೆ ಗ್ರಾಮದಲ್ಲಿ ನಡೆದಿದೆ.

    ಆರೋಪಿ ಬಾಲಕ ನಿತ್ಯ ತನ್ನ ಮೊಬೈಲ್ ಫೋನ್ ನಲ್ಲಿ ಅಶ್ಲೀಲ ವಿಡಿಯೋ ನೋಡುವ ಚಟ ಬೆಳೆಸಿಕೊಂಡಿದ್ದ. ಹೀಗಾಗಿ ತನ್ನ ಕಾಮತೃಷೆ ತೀರಿಸಿಕೊಳ್ಳಲು 16 ವರ್ಷದ ಅಕ್ಕನ ಮೇಲೆಯೇ ಅತ್ಯಾಚಾರ ಎಸಗಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    mobile phone 760

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ: ಹೊಟ್ಟೆ ನೋವಿನ ಕಾರಣಕ್ಕಾಗಿ ಜೂನ್ 6 ರಂದು ಸಂತ್ರಸ್ತೆಯನ್ನು ಪೋಷಕರು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು 2 ತಿಂಗಳ ಗರ್ಭಿಣಿಯಾಗಿರುವುದನ್ನು ತಿಳಿಸಿದ್ದಾರೆ. ಬಳಿಕ ವೈದ್ಯರ ಸಲಹೆ ಮೇರೆಗೆ ಪೋಷಕರು ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದ್ದಾರೆ.

    ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹಿಳಾ ಪೊಲೀಸ್ ಅಧಿಕಾರಿಗಳು ಬಾಲಕಿಯನ್ನು ಪ್ರಶ್ನಿಸಿದ ವೇಳೆ ಕಳೆದ ಎರಡು ತಿಂಗಳುಗಳಿಂದ ಸಹೋದರ ತನ್ನ ಮೇಲೆ ಎಸಗುತ್ತಿದ್ದ ಕೃತ್ಯದ ಬಗ್ಗೆ ಮಾಹಿತಿ ತಿಳಿಸಿದ್ದಾಳೆ.

    ಸದ್ಯ ಸಂತ್ರಸ್ತೆಯ ಹೇಳಿಕೆ ಮೇರೆಗೆ ಪೊಲೀಸರು ಬಾಲಕನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿ ರಿಮ್ಯಾಂಡ್ ಹೋಮ್ ಗೆ ಕಳುಹಿಸಲಾಗಿದೆ.

  • ಆಟವಾಡುತ್ತಿದ್ದಾಗ ಏಕಾಏಕಿ ಬಂದು ಮೇಲೆರಗಿದ ಹಸುವಿನಿಂದ ತಮ್ಮನನ್ನು ರಕ್ಷಿಸಿದ ಅಕ್ಕ!

    ಆಟವಾಡುತ್ತಿದ್ದಾಗ ಏಕಾಏಕಿ ಬಂದು ಮೇಲೆರಗಿದ ಹಸುವಿನಿಂದ ತಮ್ಮನನ್ನು ರಕ್ಷಿಸಿದ ಅಕ್ಕ!

    ಕಾರವಾರ: ಮನೆಯ ಮುಂದೆ ಆಟವಾಡುತ್ತಿದ್ದಾಗ ಹಸುವೊಂದು ಬಂದು ತಮ್ಮನ ಮೇಲೆ ಎಗರಿದ್ದು, ಕೂಡಲೇ ತನ್ನ ತಮ್ಮನ್ನು ಅಕ್ಕ ರಕ್ಷಣೆ ಮಾಡಿ ಜೀವ ಉಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲ್ ಗೋಣ್ ನಲ್ಲಿ ನಡೆದಿದೆ.

    ಸೋಮವಾರ ಬೆಳಗ್ಗೆ ಮನೆಯ ಮುಂದೆ ಕಿರಣ್ ಎಂಬವರ ಮಕ್ಕಳಾದ ಕಾರ್ತಿಕ್ ಹಾಗೂ ಆರತಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಹಸುವೊಂದು ಬಂದು ಎರಗಿದೆ. ತಕ್ಷಣದಲ್ಲೇ ಆ ಪುಟ್ಟ ಹುಡುಗಿ ಚಿಕ್ಕ ಸೈಕಲ್‍ನಲ್ಲಿ ಕುಳಿತಿದ್ದ ತಮ್ಮನನ್ನು ತನ್ನ ಕೈಗಳಿಂದ ಬಾಚಿ ಹೆದರದೇ ರಕ್ಷಿಸಿದ್ದಾಳೆ. ಸದ್ಯ ಈ ಘಟನೆಯಿಂದ ಯಾವುದೇ ಪ್ರಾಣಾಪಾಯವಿಲ್ಲದೇ ಇಬ್ಬರೂ ಸುರಕ್ಷಿತವಾಗಿದ್ದಾರೆ.

    KRW RECUSE 2

    ಸ್ವಲ್ಪ ಸಮಯದ ನಂತರ ಮನೆಯವರು ಬಂದು ಹಸುವನ್ನು ಓಡಿಸಿದ್ದಾರೆ. ಈಕೆಯ ಧೈರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಕ್ಕ ತನ್ನ ತಮ್ಮನನ್ನು ಹಸುವಿನಿಂದ ರಕ್ಷಿಸಿದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    https://www.youtube.com/watch?v=tY7SmCyRt3s

    KRW RECUSE 3

    KRW RECUSE 4

    KRW RECUSE 5

    KRW RECUSE 6

    KRW RECUSE 8

    KRW RECUSE 10

    KRW RECUSE 1

  • ದೊಡ್ಡಮ್ಮನ ಮಗಳನ್ನೇ ಕತ್ತು ಹಿಸುಕಿ ಕೊಂದ 13 ವರ್ಷದ ಬಾಲಕಿ!

    ದೊಡ್ಡಮ್ಮನ ಮಗಳನ್ನೇ ಕತ್ತು ಹಿಸುಕಿ ಕೊಂದ 13 ವರ್ಷದ ಬಾಲಕಿ!

    ಬೆಂಗಳೂರು: ತಂಗಿಯಿಂದಲೇ ದೊಡ್ಡಮ್ಮನ ಮಗಳ ಬರ್ಬರ ಹತ್ಯೆ ನಡೆದಿರೋ ಘಟನೆಯೊಂದು ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    27 ವರ್ಷದ ರಾಜೇಶ್ವರಿ ಎಂಬಾಕೆಯನ್ನು 13 ವರ್ಷದ ಬಾಲಕಿ ಕೊಲೆ ಮಾಡಿದ್ದಾಳೆ. ಈ ಘಟನೆ ಬಿಟಿಎಮ್ 2 ನೇ ಹಂತದ ಮನೆಯೊಂದರಲ್ಲಿ ಕಳೆದ ತಿಂಗಳು 10ರಂದು ನಡೆದಿದೆ.

    ಏನಿದು ಪ್ರಕರಣ?: ಕಳೆದ ತಿಂಗಳು 10 ರಂದು ಬಿಟಿಎಂ 2ನೇ ಹಂತದ ಮನೆಯೊಂದರಲ್ಲಿ ಯುವತಿ ಸಾವನ್ನಪ್ಪಿದ್ದಳು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಅಂತೆಯೇ ಯುವತಿ ಮರಣೋತ್ತರ ಪರೀಕ್ಷೆ ನಡೆಸಿ, ಅಂತಿಮ ಸಂಸ್ಕಾರವೂ ನಡೆದಿತ್ತು.

    ಆದ್ರೆ ಮರಣೋತ್ತರ ಪರೀಕ್ಷೆ ವರದಿ ನೋಡಿದ ಪೊಲೀಸರಿಗೆ ಅನುಮಾನ ಕಾಡಿತ್ತು. ಯಾಕಂದ್ರೆ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ವರದಿಯಲ್ಲಿ ಉಲ್ಲೇಖವಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಬಾಲಕಿಯ ಪೋಷಕರನ್ನು ಕರೆದು ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ಪೋಷಕರು, ಘಟನೆ ವೇಳೆ ಅಕ್ಕ-ತಂಗಿ ಮಾತ್ರ ಮನೆಯಲ್ಲಿದ್ದರು. ಅಕ್ಕ ನೇಣು ಬಿಗಿದುಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದನ್ನು ಗಮನಿಸಿ ನಾನು ಆಕೆಯನ್ನು ಕೆಳಗಿಳಿಸಿ ಬಚಾವ್ ಮಾಡಲು ನೋಡಿದ್ದೆ. ಆದ್ರೆ ಅದಾಗಲೇ ಆಕೆ ಮೃತಪಟ್ಟಿದ್ದಳು ಅಂತ ಬಾಲಕಿ ತಿಳಿಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದ ಮತ್ತೆ ಅನುಮಾನಗೊಂಡ ಪೊಲೀಸರು ಬಾಲಕಿಯನ್ನು ಕೂಡ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಾಲಕಿ ತನ್ನ ದೊಡ್ಡಮ್ಮನ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಬಾಯ್ಬಿಟಿದ್ದಾಳೆ.

    ಕಳೆದ ಒಂದು ವಾರಗಳಿಂದ ಅಕ್ಕ-ತಂಗಿ ಮಧ್ಯೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಅಕ್ಕ ಹಣ ಕೊಡಲು ನಿರಾಕರಿಸಿದ್ದಕ್ಕೆ ಬಾಲಕಿ ಈ ಕೃತ್ಯ ಎಸಗಿರುವುದಾಗಿ ಬಾಲಕಿ ಹೇಳಿದ್ದಾಳೆ. ಸದ್ಯ ಮೈಕೋ ಲೇಔಟ್ ಪೊಲೀಸರು ಬಾಲಕಿಯನ್ನು ಬಂಧಿಸಿದ್ದಾರೆ.

    https://www.youtube.com/watch?v=WDQaaoHdqoA

    MICOLAYOUT POLICE

  • ಅಕ್ಕನ ಸಾವಿಗೆ ಪತಿಯೇ ಕಾರಣವೆಂದು ಭಾವನನ್ನು ಕೊಚ್ಚಿ ಕೊಂದ ಬಾಮೈದ

    ಅಕ್ಕನ ಸಾವಿಗೆ ಪತಿಯೇ ಕಾರಣವೆಂದು ಭಾವನನ್ನು ಕೊಚ್ಚಿ ಕೊಂದ ಬಾಮೈದ

    ಬೆಂಗಳೂರು: ಅಕ್ಕನನ್ನು ಕೊಂದ ಅನ್ನೋ ದ್ವೇಷಕ್ಕೆ ಬಾಮೈದನೇ ಭಾವನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರಂನ ಚಿಕ್ಕದೇವಸಂದ್ರದಲ್ಲಿ ನಡೆದಿದೆ.

    ಚಲುವರಾಯ(35) ಕೊಲೆಯಾದ ವ್ಯಕ್ತಿ. ಈತನ ಮೊದಲ ಹೆಂಡತಿ ತಮ್ಮ ರಾಜಕುಮಾರನಿಂದ ಈ ಕೃತ್ಯ ನಡೆದಿದೆ. 10 ವರ್ಷಗಳ ಹಿಂದೆ ಚಲುವರಾಯನ ಪತ್ನಿ ಮಂಜುಳ ಆತ್ಮಹತ್ಯೆ ಮಾಡಿಕೊಂಡಿದ್ದು ಈಕೆ ಸಾವಿಗೆ ಪತಿಯೇ ಕಾರಣ ಅಂತಾ ಕುಟುಂಬಸ್ಥರು ದೂರು ನೀಡಿದ್ರು. ಪ್ರಕರಣ ಸಂಬಂಧ ಚಲುವರಾಯ 2 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಗೆ ಬಂದು ಮತ್ತೊಂದು ಮದುವೆಯಾಗಿದ್ದ.

    murder

    ಅಕ್ಕನನ್ನು ಕೊಂದ ಅನ್ನೋ ಸೇಡು ಹೊಂದಿದ್ದ ರಾಜಕುಮಾರ ತನ್ನ ಸ್ನೇಹಿತರೊಂದಿಗೆ ಸೇರಿ ಭಾವನ ವಿರುದ್ಧ ಸ್ಕೆಚ್ ಹಾಕಿ ಮನೆಗೆ ಕರೆಸಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

    murder 1

    ಪ್ರಕರಣ ಸಂಬಂಧ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.