Wednesday, 18th September 2019

Recent News

1 week ago

ಆರೋಗ್ಯ ಸಚಿವರ ಜಿಲ್ಲೆಯಲ್ಲೇ ತುಕ್ಕು ಹಿಡಿದು ನಿಂತ ಅಂಬುಲೆನ್ಸ್- ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ

ಚಿತ್ರದುರ್ಗ: ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕರೆ ಸಾಕು ಜಿಲ್ಲೆಯ ಸಮಸ್ಯೆಗಳಿಗೆಲ್ಲಾ ಪರಿಹಾರವಾಗುತ್ತವೆ ಎಂಬ ನಂಬಿಕೆಯಲ್ಲಿ ಎಲ್ಲಾ ಜಿಲ್ಲೆಗಳ ಜನರಿದ್ದಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿನಿಧಿಸುವ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಹೊರಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡು ರಂಗು ರಂಗಿನ ಬಣ್ಣದಿಂದ ಮಿಂಚುವ ಸರ್ಕಾರಿ ಆಸ್ಪತ್ರೆಯಲ್ಲಿ ಕುಡಿಯಲು ಶುದ್ಧ ನೀರಿಲ್ಲ, ಮಲಗಲು ಸುಸಜ್ಜಿತ ಬೆಡ್‍ಗಳಿಲ್ಲ. ಹೀಗಾಗಿ ರೋಗಿಗಳು ಪರದಾಡುವಂತಾಗಿದ್ದೂ, ಆರೋಗ್ಯ ಸಚಿವರ ಮಹತ್ವಾಕಾಂಕ್ಷೆ ಯೋಜನೆ ಎನಿಸಿದ್ದ 108 ಅಂಬುಲೆನ್ಸ್‌ಗಳು ಸಹ ಕೆಟ್ಟು ಮೂಲೆ ಸೇರಿದೆ. ರೋಗಿಗಳ […]

4 weeks ago

ಬಾರದ ಅಂಬುಲೆನ್ಸ್ – ಹೆದ್ದಾರಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಭೋಪಾಲ್: ಅಂಬುಲೆನ್ಸ್ ಬಾರದೇ ಗರ್ಭಿಣಿಯೊಬ್ಬರು ಹೆದ್ದಾರಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆ ಮಧ್ಯಪ್ರದೇಶದ ಬುರ್ಹಾನ್‍ಪುರ್‍ದಲ್ಲಿ ನಡೆದಿದೆ. ಕೂಲಿ ಕೆಲಸ ಮಾಡುತ್ತಿದ್ದ ಕಮಲ ಬಾಯಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅಂಬುಲೆನ್ಸ್ ಕಳುಹಿಸಿ ಎಂದು ಕುಟುಂಬದವರು ಆಸ್ಪತ್ರೆಗೆ ಕರೆ ಮಾಡಿದ್ದಾರೆ. ಸುಮಾರು ಸಮಯ ಕಳೆದರೂ ಅಂಬುಲೆನ್ಸ್ ಬಾರದ ಕಾರಣ ಕಮಲ ಬಾಯಿ ಪತಿ...

ಅಂಬುಲೆನ್ಸ್ ಸಿಗದಕ್ಕೆ ಬೈಕ್‍ನಲ್ಲಿ ಗರ್ಭಿಣಿಯನ್ನ ಕರೆತಂದ ಕುಟುಂಬಸ್ಥರು

3 months ago

ರಾಂಚಿ: ಸೂಕ್ತ ಸಮಯಕ್ಕೆ ಅಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗರ್ಭಿಣಿಯನ್ನು ಸುಮಾರು 10 ಕಿ.ಮೀ ವರೆಗೆ ಬೈಕ್ ನಲ್ಲಿಯೇ ಕರೆತಂದಿದ್ದಾರೆ. ಜಾರ್ಖಂಡ್ ರಾಜ್ಯದ ಚಂದ್ವಾ ಹೋಬಳಿಯಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿ ಶಾಂತಿ ದೇವಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ತೀವ್ರ...

22 ನಿಮಿಷದಲ್ಲಿ 29 ಕಿ.ಮೀ ದೂರಕ್ಕೆ ಹೃದಯ ರವಾನೆ

3 months ago

ಹೈದರಾಬಾದ್: ಆಸ್ಪತ್ರೆಯಿಂದ ಸುಮಾರು 29 ಕಿ.ಮೀ ದೂರದಲ್ಲಿದ್ದ ವಿಮಾನ ನಿಲ್ದಾಣಕ್ಕೆ ಕೇವಲ 22 ನಿಮಿಷದಲ್ಲಿ ಅಂಬುಲೆನ್ಸ್ ಹೃದಯವನ್ನು ಸುರಕ್ಷಿತವಾಗಿ ಕೊಂಡೊಯ್ಯಲು ಸಂಚಾರಿ ಪೊಲೀಸರು ಸಹಕರಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಬುಧವಾರ ಸೈಫಾಬಾದ್‍ನಲ್ಲಿರುವ ಗ್ಲೆನೆಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ನಿಂದ ಜೀವಂತ ಹೃದಯವನ್ನು ಹೈದರಾಬಾದ್‍ನ ರಾಜೀವ್...

ಚಿಕಿತ್ಸೆಗೆ ಅಂಬುಲೆನ್ಸ್ ನೀಡದ ಆಸ್ಪತ್ರೆ – ಮಗನ ಶವವನ್ನು ಹೊತ್ತೊಯ್ದ ತಾಯಿ!

4 months ago

ಲಕ್ನೋ: ಅಂಬುಲೆನ್ಸ್ ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಕ್ಕೆ ತನ್ನ ಮಗನ ಶವವನ್ನು ತಾಯಿಯೇ ಹೊತ್ತುಕೊಂಡು ಹೋದ ಮನಕಲಕುವ ಘಟನೆ ಉತ್ತರ ಪ್ರದೇಶದ ಶಹಜಹಾನ್‍ಪುರದಲ್ಲಿ ನಡೆದಿದೆ. ಸೋಮವಾರದಂದು ಬಾಲಕನಿಗೆ ಹೆಚ್ಚು ಜ್ವರ ಬಂದಿದ್ದ ಕಾರಣಕ್ಕೆ ತಂದೆ ತಾಯಿ ಆತನನ್ನು ಶಹಜಹಾನ್‍ಪುರದಲ್ಲಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು...

ಭೀಕರ ರಸ್ತೆ ಅಪಘಾತ- ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು

4 months ago

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಳೆದ ರಾತ್ರಿ ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದಿದೆ. ರಾತ್ರಿ ಸುಮಾರು 12:30ರ ವೇಳೆಗೆ ಅಪಘಾತವಾಗಿದ್ದು, ಸರ್ಕಾರಿ ಅಂಬುಲೆನ್ಸ್ ಹಾಗೂ ವ್ಯಾಗನಾರ್ ಕಾರ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ...

ಮದ್ಯಪಾನ ಮಾಡಿ ಅಂಬುಲೆನ್ಸ್ ಚಲಾಯಿಸಿ ಪೊಲೀಸ್ರಿಗೆ ಸಿಕ್ಕಿಬಿದ್ದ!

4 months ago

ಬೆಂಗಳೂರು: ಮದ್ಯಪಾನ ಮಾಡಿ ಅಂಬುಲೆನ್ಸ್ ಚಲಾಯಿಸಿ ದುಂಡಾವರ್ತನೆ ತೋರಿದ ಚಾಲಕನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಮಡಿವಾಳದಲ್ಲಿ ನಡೆದಿದೆ. ಸಂದೀಪ್ ಪಾಟೀಲ್ ಮದ್ಯ ಸೇವಿಸಿ ಅಂಬುಲೆನ್ಸ್ ಚಲಾಯಿಸುತ್ತಿದ್ದ ಚಾಲಕ. ಮಹಾರಾಷ್ಟ್ರ ಮೂಲದ ಅಂಬುಲೆನ್ಸ್ ಚಾಲಕನಾಗಿರುವ ಸಂದೀಪ್, ಎಲೆಕ್ಟ್ರಾನಿಕ್ ಸಿಟಿ...

ರೋಗಿಯನ್ನು ಹೊತ್ತೊಯ್ಯುತ್ತಿದ್ದ ಅಂಬುಲೆನ್ಸ್ ಬೆಂಕಿಗಾಹುತಿ!

4 months ago

ಬೆಂಗಳೂರು: ರೋಗಿಯನ್ನು ಹೊತ್ತೊಯ್ಯುತ್ತಿದ್ದ 108 ಅಂಬುಲೆನ್ಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅಂಬುಲೆನ್ಸ್ ಸುಟ್ಟು ಹೋದ ಘಟನೆ ಇಂದು ನಡೆದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿಗೆ ಹೊಂದಿಕೊಂಡಿರೋ ತಮಿಳುನಾಡಿನಲ್ಲಿ ಈ ನಡೆದಿದೆ. ಘಟನೆಯಿಂದ ಅಂಬುಲೆನ್ಸ್ ನಲ್ಲಿದ್ದ ರೋಗಿ ಸಂಬಂಧಿ ಹಾಗೂ ಸಿಬ್ಬಂದಿ...