ರಾಂಚಿ: ಸಾಕಷ್ಟು ಸುದ್ದಿಯಾಗಿದ್ದ ತಬ್ರೇಜ್ ಅನ್ಸಾರಿ ಹತ್ಯೆ ಕೇಸ್ (Tabrez Ansari case) ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳು ದೋಷಿಗಳೆಂದು ಜಾರ್ಖಂಡ್‍ನ (Jharkhand) ಖಾರ್ಸಾವಾನ್ ಜಿಲ್ಲಾ ನ್ಯಾಯಾಲಯ (Kharswan Court) ಬುಧವಾರ ತೀರ್ಪು ನೀಡಿದೆ.
ಅಪರಾಧಿಗಳಿಗೆ ಐಪಿಸಿ ಸೆಕ್ಷನ್ 304ರ (ಅಪರಾಧಿಕ ಮಾನವ ಹತ್ಯೆ) ಅಡಿಯಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ ಎಲ್ಲಾ ಅಪರಾಧಿಗಳಿಗೂ ತಲಾ 15,000 ರೂ. ದಂಡವನ್ನೂ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ. ಇಬ್ಬರೂ ಆರೋಪಿಗಳನ್ನು ಸಾಕ್ಷಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿದೆ. ಇದನ್ನೂ ಓದಿ: ಪತ್ನಿಯನ್ನು ನಿಂದನೆ ಮಾಡಿದಕ್ಕೆ ರಾಡ್‍ನಿಂದ ಹಲ್ಲೆ ನಡೆಸಿ ತಮ್ಮನ ಕೊಲೆ
2019ರ ಜೂ.17 ರಂದು ತಬ್ರೇಜ್ ಅನ್ಸಾರಿ ಎಂಬುವವರನ್ನು ಬೈಕ್ ಕಳ್ಳತನಕ್ಕೆ ಬಂದಿದ್ದಾನೆ ಎಂದು ಆರೋಪಿಸಿ ಅಪರಾಧಿಗಳು ರಾಡ್‍ಗಳಿಂದ ಥಳಿಸಿದ್ದರು. ಅಲ್ಲದೇ ಜೈ ಶ್ರೀರಾಮ್ ಹಾಗೂ ಜೈ ಹನುಮಾನ್ ಘೋಷಣೆ ಕೂಗುವಂತೆ ಒತ್ತಾಯಿಸಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ದಯವಿಟ್ಟು ನೇಮಕಾತಿ ಆದೇಶ ನೀಡಿ – ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ
Web Stories