ಬೀದರ್: ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಗಿಯಾಗಿದ್ದವರು ಉತ್ತರ ಪ್ರದೇಶದ ಐಸೋಲೇಷನ್ ವಾರ್ಡ್‍ಗಳಲ್ಲಿ ಉದ್ಧಟತನ ತೋರಿದ್ದಂತೆಯೇ ರಾಜ್ಯದಲ್ಲೂ ನಡೆದುಕೊಳ್ಳುತ್ತಿದ್ದಾರೆ. ಬೀದರಿನ ಬ್ರೀಮ್ಸ್ ಐಸೋಲೇಷನ್ ವಾರ್ಡ್‍ನಲ್ಲಿರುವ 10 ಜನ ತಬ್ಲಿಘಿ ಸೋಂಕಿತರು, ಮನೆ ಊಟ-ಹೈಫೈ ಕೊಠಡಿ ಬೇಕು ಅಂತ ಕಿರಿಕಿರಿ ಮಾಡುತ್ತಿದ್ದಾರೆ.
ನಾವು ಹೇಳುವ ಸೌಲಭ್ಯ ಕೊಡ್ಲಿಲ್ಲ ಅಂದ್ರೆ ವೈದ್ಯರು, ಸಿಬ್ಬಂದಿಗೆ ಕೊರೊನಾ ಹಬ್ಬಿಸುತ್ತೇವೆ ಎಂದು ಬೆದರಿಕೆ ಹಾಕ್ತಿದ್ದಾರೆ. ಈ ಜಮಾತ್ ದೂರ್ತರ ವರ್ತನೆಯಿಂದ ವೈದ್ಯ-ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ.
ಈ ಬಗ್ಗೆ, ಬೀದರ್ ಆರೋಗ್ಯಾಧಿಕಾರಿ ವಿ.ಜಿ. ರೆಡ್ಡಿ ಅವರು ಪಬ್ಲಿಕ್‍ಟಿವಿ ಜೊತೆ ಮಾತನಾಡಿ ಸೋಂಕು ಹರಡುವ ಸಾಧ್ಯತೆಯಿಂದಾಗಿ ಮನೆಯಿಂದ ಊಟ ನೀಡಲು ಸಾಧ್ಯವಿಲ್ಲ. ಎಲ್ಲರಿಗೂ ಆಸ್ಪತ್ರೆಯ ಊಟವನ್ನೇ ನೀಡಲಾಗುತ್ತಿದೆ ಎಂದು ಹೇಳಿದ್ದೇವೆ. ಅಷ್ಟೇ ಅಲ್ಲದೇ ನಮ್ಮ ವೈದ್ಯಕೀಯ ಸಿಬ್ಬಂದಿಗೂ ತಾಳ್ಮೆಯಿಂದ ವರ್ತಿಸುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೆ ತಬ್ಲಿಘಿಗಳ ಹುಚ್ಚಾಟ – ಗಾಜಿಯಾಬಾದ್ ಬಳಿಕ ಕಾನ್ಪುರ, ಲಕ್ನೋದಿಂದ ದೂರು