ನವದೆಹಲಿ: ಭಾರತದ ಟೇಬಲ್ ಟೆನಿಸ್ (Table Tennis) ಆಟಗಾರ ಅಚಂತಾ ಶರತ್ ಕಮಲ್ (Achanta Sharath Kamal) ಅವರ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (Khel Ratna Award) ಪ್ರಶಸ್ತಿಗೆ ಆಯ್ಕೆ ಸಮಿತಿ ಶಿಫಾರಸು ಮಾಡಿದೆ.
ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಈ ವರ್ಷ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ 4 ಪದಕಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಅದರಲ್ಲಿ 3 ಚಿನ್ನ ಹಾಗೂ 1 ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮಣಿಕಾ ಬಹಾತ್ರ ನಂತರ ಖೇಲ್ ರತ್ನವನ್ನು ಪಡೆಯುತ್ತಿರುವ 2ನೇ ಟೇಬಲ್ ಟೆನಿಸ್ ಆಟಗಾರರಾಗಿ ಶರತ್ ಕಮಲ್ ಹೊರಹೊಮ್ಮಲಿದ್ದಾರೆ.
Advertisement
Advertisement
ಇನ್ನೂ ಅರ್ಜುನ ಪ್ರಶಸ್ತಿಗೆ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಹಾಗೂ ಕುಸ್ತಿ ಪಟು ಅಂಶು ಮಲ್ಲಿಕ್ ನಿಖತ್ ಜರೀನ್, ಚೆಸ್ ಪ್ರಾಡಿಜಿ ಆರ್ ಪ್ರಗ್ನಾನಂದ ಮತ್ತು ಸರಿತಾ ಮೋರ್ ಸೇರಿದಂತೆ ಒಟ್ಟು 25 ಕ್ರೀಡಾಪಟುಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಅಷ್ಟೇ ಅಲ್ಲದೇ ಈ ವರ್ಷದ ಅರ್ಜುನ ಪ್ರಶಸ್ತಿಗೆ ಯಾವುದೇ ಕ್ರಿಕೆಟಿಗರ ಹೆಸರನ್ನು ಶಿಫಾರಸು ಮಾಡದೇ ಇರುವುದು ಗಮನಾರ್ಹ ವಿಷಯವಾಗಿದೆ. ಇದನ್ನೂ ಓದಿ: ಆಸೀಸ್‌ಗೆ 4 ರನ್‌ಗಳ ರೋಚಕ ಜಯ – ಸೆಮಿಸ್ ಕನಸು ಜೀವಂತ
Advertisement
Advertisement
ಲಕ್ಷ್ಯ ಸೇನ್ ಕಳೆದ ವರ್ಷ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಜೊತೆ ಆಲ್ ಇಂಗ್ಲೆಂಡ್ ಓಪನ್‍ನಲ್ಲಿ ರನ್ನರ್ ಅಪ್ ಆಗಿದ್ದು, ಥಾಮಸ್ ಕಪ್‍ನಲ್ಲಿ ಚಿನ್ನ ಗೆದ್ದ ಪುರುಷರ ಬ್ಯಾಡ್ಮಿಂಟನ್ ತಂಡದಲ್ಲಿ ಭಾಗಿಯಾಗಿದ್ದರು. ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕವನ್ನು ಪಡೆದರು. ಇದನ್ನೂ ಓದಿ: ಎಬಿಡಿ RCB ತಂಡದ ಬ್ಯಾಟಿಂಗ್ ಕೋಚ್?