ಟೋಕಿಯೋ: ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಪಂದ್ಯದಲ್ಲಿ ಭಾರತದ ಭವಿನಾಬೆನ್ ಪಟೇಲ್ ಫೈನಲ್ ಗೆ ಪ್ರವೇಶಿಸಿದ್ದಾರೆ.
Advertisement
ಶನಿವಾರ ಟೋಕಿಯೋದಲ್ಲಿ ನಡೆದ ಮಹಿಳಾ ಟೇಬಲ್ ಟೆನಿಸ್ ಸಿಂಗಲ್ಸ್‌ನಲ್ಲಿ ಚೀನಾದ ಮಿಯಾವೊ ಝಾಂಗ್‍ರನ್ನು 3-2 ಸೆಟ್‍ಗಳಿಂದ ಸೋಲಿಸಿ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿಯಾಗಿದ್ದಾರೆ. ಈ ಮೂಲಕ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಭಾನುವಾರ ಭವಿನಾ ಚೀನಾದ ಯಿಂಗ್ ಝಾಂಗ್‍ರನ್ನು ಚಿನ್ನದ ಪದಕಕ್ಕಾಗಿ ಸೆಣಸಾಡಲಿದ್ದಾರೆ. ಇದನ್ನೂ ಓದಿ:ಗ್ಯಾಂಗ್‍ರೇಪ್ ಪ್ರಕರಣ ಸಂಬಂಧ ಕಾರ್ಯಾಚರಣೆ ಯಶಸ್ವಿ: ಗೃಹ ಸಚಿವ
Advertisement
Now we #GoForGold!!! @BhavinaPatel6 is through to the FINALS #TableTennis ???????????????????????????????????? After beating World no. 3 #CHN today, #BhavinaPatel will be seen in #Tokyo2020 #Paralympics FINALS tomorrow morning!!! pic.twitter.com/V8hMgst5wi
— Paralympic India ???????? #Cheer4India ???? #Praise4Para (@ParalympicIndia) August 28, 2021
Advertisement
ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ಬಳಿಕ ಮಾತನಾಡಿದ ಅವರು, ಭಾರತದ ಜನತೆಯ ಬೆಂಬಲದಿಂದ ಸೆಮಿಫೈನಲ್ ಪಂದ್ಯದಲ್ಲಿ ನಾನು ಗೆಲ್ಲಲು ಸಾಧ್ಯವಾಯಿತು. ಹೀಗೆ ಫೈನಲ್‍ನಲ್ಲಿಯೂ ಗೆಲ್ಲಲು ದಯವಿಟ್ಟು ನನಗೆ ನಿಮ್ಮ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:ನಟ ಚಿರಂಜೀವಿ ಭೇಟಿಗಾಗಿ 600 ಕಿ.ಮೀ ಸೈಕಲ್ ತುಳಿದ ಅಭಿಮಾನಿ
Advertisement