ಕೋಲ್ಕತ್ತಾ: ಕೋವಿಡ್-19 ವಿರುದ್ಧ ಎರಡು ತಿಂಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಖ್ಯಾತ ತಬಲಾ ವಾದಕ ಪಂಡಿತ್ ಸುಭಂಕರ್ ಬ್ಯಾನರ್ಜಿ ಬುಧವಾರ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
Advertisement
ಸುಭಂಕರ್ ಬ್ಯಾನರ್ಜಿ(54) ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಈ ವಿಚಾರವನ್ನು ಸುಭಂಕರ್ ಬ್ಯಾನರ್ಜಿರವರ ಪುತ್ರ ಅರ್ಚಿಕ್ ಬ್ಯಾನರ್ಜಿ ಫೇಸ್‍ಬುಕ್‍ನಲ್ಲಿ ‘ಲಾಸ್ಟ್’ ಎಂದು ಪೋಸ್ಟ್ ಮಾಡಿದ್ದಾರೆ. ಗುರುವಾರ ಪಂಡಿತ್ ತೇಜೆಂದ್ರ ನಾರಾಯಣ ಮಜುಂದರ್, ಪಂಡಿತ್ ಪುರಬಯಾನ್ ಚಟರ್ಜಿ, ಉಸ್ತಾದ್ ರಶೀದ್ ಖಾನ್ ಸೇರಿದಂತೆ ಹಲವಾರು ಶಾಸ್ತ್ರೀಯ ಸಂಗೀತಗಾರರು ಕೋವಿಡ್ ನಿಯಮಗಳಿಗನುಸಾರವಾಗಿ ಬ್ಯಾನರ್ಜಿಯವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಶಸ್ತ್ರ ಚಿಕಿತ್ಸೆ ನಂತರ ಅಭಿಷೇಕ್ ಫೋಟೋ ಶೇರ್
Advertisement
Advertisement
ಜೂನ್ 20ರಂದು ಸುಭಂಕರ್ ಬ್ಯಾನರ್ಜಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ತಿಂಗಳುಗಳ ಕಾಲ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು. ಇಲ್ಲಿಯವರೆಗೂ ಪಂಡಿತ್ ರವಿಶಂಕರ್, ಉಸ್ತಾದ್ ಅಮ್ಜದ್ ಅಲಿಖಾನ್, ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಪಂಡಿತ್ ಶಿವಕುಮಾರ್ ಶರ್ಮಾರರಂತಹ ದಿಗ್ಗಜರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಪೈಪೋಟಿ ನೀಡುವ ಮೂಲಕ ಸುಭಂಕರ್ ಬ್ಯಾನರ್ಜಿ ಮಿಂಚಿದ್ದಾರೆ.
Advertisement
???????????????????????????? pic.twitter.com/2U8MqpODE4
— Zakir Hussain (@ZakirHtabla) August 25, 2021
ಬುಧವಾರ ರಾತ್ರಿ ಖ್ಯಾತ ತಬಲಾ ಕಲಾವಿದ ಜಾಕಿರ್ ಹುಸೇನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಾನು ಅವನನ್ನು ಕಳೆದುಕೊಳ್ಳುತ್ತಿದ್ದೇನೆ. ತಬಲಾ ಪ್ರಪಂಚ ಅವನನ್ನು ಕಳೆದುಕೊಳ್ಳುತ್ತಿದೆ. ಭಾರತೀಯ ಸಂಗೀತವು ಅವನನ್ನು ಕಳೆದುಕೊಳ್ಳುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಆಸ್ತಿ ತೆರಿಗೆ, ಅಡುಗೆ ಅನಿಲ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‍ನಿಂದ ಬಿಬಿಎಂಪಿಗೆ ಮುತ್ತಿಗೆ