ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಹರಿಪ್ರಿಯಾ ನಟನೆಯ ತಾಯಿ ಕಸ್ತೂರ್ ಗಾಂಧಿ

Public TV
1 Min Read
FotoJet 4 4

ರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‍ಗಾಂಧಿ’ ಕನ್ನಡ ಚಿತ್ರವು 12ನೇ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಫರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಅಲ್ಲದೆ, ಈಗಾಗಲೇ ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿದೆ. ದೆಹಲಿಯ ಸಂಸ್ಥೆಯೊಂದು ದಾದಾ ಸಾಹೇಬ್ ಫಾಲ್ಕೆ ಅವರ ಜನ್ಮದಿನದಂದು ಹನ್ನೊಂದು ವರ್ಷಗಳಿಂದ ಈ ಚಿತ್ರೋತ್ಸವವನ್ನು ನಡೆಸಿಕೊಂಡು ಬಂದಿದೆ. ಇದನ್ನೂ ಓದಿ : ವಿಜಯ್ ದುನಿಯಾದಲ್ಲಿ ‘ಭೀಮ’ ಎಂಟ್ರಿ : ನಟಿ ಮಾಲಾಶ್ರೀ ಬಳಿ ಇತ್ತು ಭೀಮ ಟೈಟಲ್

FotoJet 1 14

ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ‘ತಾಯಿ ಕಸ್ತೂರ್ ಗಾಂಧಿ’ ಚಿತ್ರವು ಬರಗೂರರ ‘ಕಸ್ತೂರ್ ಬಾ ವರ್ಸಸ್ ಗಾಂಧಿ’ ಎಂಬ ಕಾದಂಬರಿಯನ್ನು ಆಧರಿಸಿದೆ. ಬರಗೂರರೇ ಚಿತ್ರಕತೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿದ್ದಾರೆ. ಈ ಚಿತ್ರವು ಕಸ್ತೂರ್ ಬಾ ಮತ್ತು ಗಾಂಧಿಯವರನ್ನು ಮುಖಾಮುಖಿಯಾಗಿಸುತ್ತ ಇಬ್ಬರ ಸಕಾರಾತ್ಮಕ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಮುಖ್ಯವಾಗಿ ಕಸ್ತೂರ್ ಬಾ ಅವರ ಅನುಭವದ ನೋಟದಲ್ಲಿ ಗಾಂಧಿಯವರನ್ನು ಕಂಡುಕೊಳ್ಳುವ ಅಭಿವ್ಯಕ್ತಿ ವಿಧಾನವನ್ನು ಅನುಸರಿಸಲಾಗಿದೆ. ಕಸ್ತೂರ್ ಬಾ ಅವರು ತಾಯಿ, ಪತ್ನಿ ಮತ್ತು ಹೋರಾಟಗಾರ್ತಿಯಾಗಿ ಎದುರಿಸಿದ ಮಾನಸಿಕ ತಲ್ಲಣಗಳನ್ನು ಚಿತ್ರಿಸಲಾಗಿದೆ.  ಇದನ್ನೂ ಓದಿ : ಕನ್ನಡದಲ್ಲೂ ಬಂತು ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

FotoJet 3 4

ಕಸ್ತೂರ್ ಬಾ ಪಾತ್ರದಲ್ಲಿ ಕನ್ನಡದ ಖ್ಯಾತ ನಟಿ ಹರಿಪ್ರಿಯ ಅಭಿನಯಿಸಿದ್ದಾರೆ. ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದಾರೆ. ಶ್ರೀನಾಥ್ ಅವರು ಡಾ. ಅಂಬೇಡ್ಕರ್ ಪಾತ್ರದಲ್ಲಿದ್ದಾರೆ. ಸುಂದರರಾಜ್, ರೇಖಾ, ಪ್ರಮೀಳಾ ಜೋಷಾಯ್, ಸುಂದರರಾಜ ಅರಸು, ರಾಘವ್, ವೆಂಕಟರಾಜು, ವತ್ಸಲಾ ಮೋಹನ್ ಮುಂತಾದವರು ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಸುರೇಶ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ ಮತ್ತು ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ.

Share This Article
Leave a Comment

Leave a Reply

Your email address will not be published. Required fields are marked *