BollywoodCinemaDistrictsKarnatakaLatestMain Post

ಥಾಮಸ್ ಕಪ್ ಗೆಲುವಿಗೆ ಕಾರಣವಾದ ಕೋಚ್ ತಾಪ್ಸಿ ಪನ್ನು ಬಾಯ್ ಫ್ರೆಂಡ್

ದೇ ಮೊದಲ ಬಾರಿಗೆ ಪ್ರತಿಷ್ಠಿತ ಥಾಮಸ್ ಕಪ್ ಗೆಲುವಿಗೆ ಕಾರಣವಾದ ಭಾರತದ ಮೆನ್ ಬ್ಯಾಡ್ಮಿಂಟನ್ ತಂಡದ ಕೋಚ್, ಮಾಜಿ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಕುರಿತು ಕಲರ್ ಕಲರ್ ಸುದ್ದಿಗಳು ಬಿಟೌನ್ ನಲ್ಲಿ ಹರಿದಾಡುತ್ತಿವೆ. ಇಂಥದ್ದೊಂದು ದೊಡ್ಡ ಸಾಧನೆ ಮಾಡಿರುವ ತಂಡದ ಸುದ್ದಿಗಿಂತ ಕೋಚ್ ಮಥಿಯಾಸ್ ಸುದ್ದಿಯಾಗಿದ್ದು, ಅವರು ಬಾಲಿವುಡ್ ಜೊತೆ ನಂಟು ಇಟ್ಟುಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಎನ್ನುವುದು ವಿಶೇಷ. ಇದನ್ನೂ ಓದಿ: ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!

ಭಾರತದ ತಂಡವು ಪ್ರತಿಷ್ಠಿತ ಟ್ರೋಪಿ ಗೆಲ್ಲುತ್ತಿದ್ದಂತೆಯೇ ಬಾಲಿವುಡ್ ಹೆಸರಾಂತ ನಟಿ ತಾಪ್ಸಿ ಪೊನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಶುಭ ಹಾರೈಸಿ ಪೋಸ್ಟ್ ಮಾಡಿದ್ದರು. ‘ದಿ ಬಾಯ್ಸ್ ಡಿಡ್ ಇಟ್’ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು. ಅದರಲ್ಲೂ ಕೋಚ್ ಮಥಿಯಾಸ್ ಕುರಿತು ವಿಶೇಷವಾಗಿ ಪ್ರೀತಿ ತೋರಿದ್ದರು. ಈ ಪ್ರೀತಿಯ ಹಿಂದೆ ಲವ್ ಕಹಾನಿ ಇದೆ ಎನ್ನುತ್ತಿದೆ ಬಾಲಿವುಡ್. ಇನದನ್ನೂ ಓದಿ:`ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ

ಮಥಿಯಾಸ್ ಮತ್ತು ತಾಪ್ಸಿ ಕುರಿತು ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡಿದ್ದವು. ಅದಕ್ಕೆ ಕಾರಣ ಇವರಿಬ್ಬರ ನಡುವಿನ ಆತ್ಮೀಯ ಬಾಂಧವ್ಯ ಮತ್ತು ಹಲವು ಫೋಟೋಗಳು. ಮಥಿಯಾಸ್ ಮತ್ತು ತಾಪ್ಸಿ ಹಲವು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹುಟ್ಟು ಹಬ್ಬಗಳನ್ನು ಒಟ್ಟೊಟ್ಟಿಗೆ ಆಚರಿಸಿಕೊಂಡಿದ್ದರು. ಅಲ್ಲದೇ, ಮಥಿಯಾಸ್ ಹುಟ್ಟು ಹಬ್ಬದ ದಿನದಂದು, ‘ನನಗೆ ಆಪ್ತರಲ್ಲಿ ನೀವು ತೀರಾ ಆಪ್ತರು’ ಎಂದು ತಾಪ್ಸಿ ಬರೆದುಕೊಂಡಿದ್ದರು. ಹಾಗಾಗಿ ತಾಪ್ಸಿ ಮತ್ತು ಮಥಿಯಾಸ್ ಇಬ್ಬರೂ ಡೇಟಿಂಗ್‌ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಟಗರು-2ನಲ್ಲಿ ಶಿವಣ್ಣನ ಜತೆ ನಟಿಸಬೇಕಿತ್ತು ಅಪ್ಪು!

ತಾಪ್ಸಿ ಈ ಹಿಂದೆ ಸಂದರ್ಶನವೊಂದರಲ್ಲಿ ‘ನಾನು ಸಿನಿಮಾ ರಂಗದವರ ಜೊತೆ ಡೇಟ್ ಮಾಡುವುದಿಲ್ಲ. ಅದಕ್ಕೆ ನನ್ನದೇ ಆದ ಕಾರಣಗಳು ಇವೆ. ನಾನು ಡೇಟ್ ಮಾಡುವುದಾದರೆ, ನನ್ನ ವೃತ್ತಿಯಲ್ಲದವರ ಜೊತೆ’ ಎಂದು ಹೇಳಿ ಕುತೂಹಲಕ್ಕೆ ಕಾರಣವಾಗಿದ್ದರು. ಈ ಮಾತಿಗೆ ಕಾರಣ ಮಥಿಯಾಸ್ ಮೇಲಿನ ಪ್ರೀತಿ ಎಂದು ವಿಶ್ಲೇಷಿಸಲಾಗುತ್ತಿದೆ.

Leave a Reply

Your email address will not be published.

Back to top button