ವಿಶಾಖಪಟ್ಟಣ: ಡಾ. ವೈ.ಎಸ್ ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ಭಾರತ (Team India) ಮತ್ತು ಪ್ರವಾಸಿ ತಂಡ ಆಸ್ಟ್ರೇಲಿಯಾ (Australia) ನಡುವಿನ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಅಸೀಸ್ 209 ರನ್‍ಗಳ ಭಾರೀ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಈ ಮೂಲಕ ಭಾರತದ ಗೆಲುವಿಗೆ 209ರನ್‍ಗಳ ಬೃಹತ್ ಗುರಿಯನ್ನು ನೀಡಿದೆ. ಇದನ್ನೂ ಓದಿ: ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!
Advertisement
Advertisement
ಆಸ್ಟ್ರೇಲಿಯಾ ಪಡೆ ಕೇವಲ 31 ರನ್‍ಗೆ ಮ್ಯಾಥೀವ್ ಶಾರ್ಟ್ (13) ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತಕ್ಕೆ ಒಳಗಾಯಿತು. ಸ್ಟೀವ್ ಸ್ಮಿತ್ (53) ಮತ್ತು ಜೋಶ್ ಇಂಗ್ಲಿಸ್ (110) ಅವರ 130 ರನ್‍ಗಳ ಜೊತೆಯಾಟದೊಂದಿಗೆ ಬೃಹತ್ ಮೊತ್ತದ ಗುರಿಯ ಕಡೆಗೆ ಅದ್ಭುತ ಇನಿಂಗ್ಸ್ ಆಡಿದರು. ಕೇವಲ 50 ಎಸೆತಗಳಲ್ಲಿ ಇಂಗ್ಲಿಸ್ 110 ರನ್‍ಗಳನ್ನು ಕಲೆಹಾಕಿದರು. ಮಾರ್ಕಸ್ ಸ್ಟೋನಿಸ್? (7*) ಮತ್ತು ಟಿಮ್ ಡೇವಿಡ್ (19*) ರನ್ ಗಳಿಸಿದರು. ಇದನ್ನೂ ಓದಿ: ಪಾಪಿಗಳು ಹಾಜರಾದ ಫೈನಲ್ ಹೊರತುಪಡಿಸಿ ಎಲ್ಲಾ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ: ಮಮತಾ ಕಿಡಿ