ಕೊಲಂಬೋ: ಟಿ20 ವಿಶ್ವಕಪ್‌ನಲ್ಲಿ (T20 World Cup) ಬದ್ಧ ವೈರಿ ಪಾಕಿಸ್ತಾನವನ್ನು ಸೋಲಿಸಿದ ನಂತರ ಟೀಂ ಇಂಡಿಯಾ (Team India) ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ʼಇದು ಭಾರತʼ ಎಂದು ಹೇಳಿದ್ದಾರೆ.
ಪಾಕ್ ವಿರುದ್ಧ ಜಯಗಳಿಸಿದ ನಂತರ ಮಾತನಾಡಿದ ಅವರು,ನಾವು ಆಡಲು ಬಯಸಿದ ಅದೇ ಬ್ರಾಂಡ್ ಕ್ರಿಕೆಟ್ ಅನ್ನು ಆಡಿದ್ದೇವೆ. ಈ ವಿಕೆಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಅತ್ಯುತ್ತಮ ಆಯ್ಕೆಯಾಗಿತ್ತು. ಇಶಾನ್ ಬಾಕ್ಸ್ ಔಟ್ ಆಫ್ ಬಾಕ್ಸ್ ಆಟವಾಡಿದರು. ಶೂನ್ಯಕ್ಕೆ 1 ವಿಕೆಟ್ ಪತನದ ಬಳಿಕ ಯಾರಾದರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿತ್ತು ಮತ್ತು ಅವರು ಅದನ್ನು ತೆಗೆದುಕೊಂಡ ರೀತಿ ಅದ್ಭುತವಾಗಿತ್ತು ಎಂದು ಬಣ್ಣಿಸಿದರು.
ಈ ಪಂದ್ಯಕ್ಕೆ ಎಲ್ಲರ ಕೊಡುಗೆ ಇರುವುದನ್ನು ನೋಡಲು ಸಂತೋಷವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ 16-1 ಮುನ್ನಡೆ
இந்த வெற்றி இந்தியாவுக்கு! – SKY 🥹🫡#StarSportsTamil #TeamIndia #INDvPAK pic.twitter.com/qZiyijFjOC
— Star Sports Tamil (@StarSportsTamil) February 15, 2026
ಮುಂದಿನ ಪ್ಲ್ಯಾನ್ ಏನು ಎಂದು ಎಂಬ ಪ್ರಶ್ನೆಗೆ, ನಾವು ಒಂದು ತಂಡವಾಗಿ ಒಟ್ಟಿಗೆ ಉತ್ತಮ ಸಮಯವನ್ನು ಕಳೆಯುತ್ತೇವೆ. ನಂತರ ನಾವು ಅಹಮದಾಬಾದ್‌ಗೆ ವಿಮಾನದಲ್ಲಿ ಪ್ರಯಾಣಿಸುವಾಗ ಇತರ ಪಂದ್ಯಗಳ ಬಗ್ಗೆ ಯೋಚಿಸುತ್ತೇವೆ ಎಂದು ತಿಳಿಸಿದರು.
77 ರನ್ ಸಿಡಿಸಿ ಪಾಕ್ (Pakistan) ಬೌಲಿಂಗ್ ಪಡೆಯನ್ನು ಧ್ವಂಸ ಮಾಡಿದ್ದ ಇಶಾನ್ ಕಿಶನ್ (Ishan Kishan) ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಬೌಲಿಂಗ್‌ಗೆ ಸ್ನೇಹಿಯಾಗಿದ್ದ ಪಿಚ್‌ನಲ್ಲಿ ಆರಂಭದಲ್ಲಿ ಇಶಾನ್ ಕಿಶನ್ ಅಬ್ಬರಿಸಿದರೆ ನಂತರ ಬೌಲಿಂಗ್‌ನಲ್ಲಿ ಭಾರತದ ಬೌಲರ್‌ಗಳು ಪಾಕ್ ಬ್ಯಾಟಿಂಗ್ ಪಡೆಯನ್ನೇ ಧೂಳೀಪಟ ಮಾಡಿದರು. 10 ವಿಕೆಟ್‌ಗಳನ್ನು ಭಾರತದ 6 ಜನ ಬೌಲರ್‌ಗಳು ಹಂಚಿಕೊಂಡಿದ್ದಾರೆ ಎನ್ನುವುದೇ ವಿಶೇಷ. ಇದನ್ನೂ ಓದಿ:ಒಂದೇ ದಿನ ಪಾಕ್ ವಿರುದ್ಧ ಎರಡು ಪಂದ್ಯ ಗೆದ್ದ ಭಾರತ
ಯಾರಿಗೆ ಎಷ್ಟು ವಿಕೆಟ್?
ಹಾರ್ದಿಕ್ ಪಾಂಡ್ಯ – 16 ರನ್, 2 ವಿಕೆಟ್
ಬುಮ್ರಾ – 17 ರನ್, 2 ವಿಕೆಟ್
ಅಕ್ಷರ್ ಪಟೇಲ್ – 29 ರನ್, 2 ವಿಕೆಟ್
ವರುಣ್ ಚಕ್ರವರ್ತಿ – 17 ರನ್, 2 ವಿಕೆಟ್
ಕುಲದೀಪ್ ಯಾದವ್ – 14 ರನ್, 1 ವಿಕೆಟ್
ತಿಲಕ್ ವರ್ಮಾ – 11 ರನ್, 1 ವಿಕೆಟ್

