ದುಬೈ: ಟಿ20 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾಗೆ ಆರನೇ ಬೌಲರ್ ಚಿಂತೆಯಾಗಿತ್ತು. ತಂಡದಲ್ಲಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೆ ಇದ್ದಿದ್ದು, ಬಾರಿ ಹಿನ್ನಡೆ ತಂದಿತ್ತು. ಇದೀಗ ಪಾಂಡ್ಯ ಬೌಲಿಂಗ್ ಮಾಡಲು ಸಿದ್ಧರಾಗಿದ್ದಾರೆ.
Advertisement
ಭಾರತ ಟಿ20 ವಿಶ್ವಕಪ್‍ನಲ್ಲಿ ಮುಂದಿನ ಎದುರಾಳಿಯಾಗಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಅಭ್ಯಾಸದಲ್ಲಿ ಇಷ್ಟು ದಿನ ಬೌಲಿಂಗ್ ಮಾಡದೇ ಇದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿ 6ನೇ ಬೌಲರ್ ಸಮಸ್ಯೆ ಪರಿಹಾರವಾಗುವ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಈ ಬಾರಿಯ T20 ವಿಶ್ವಕಪ್‍ನಲ್ಲಿ ಕಂಡು ಬಂದ ವಿಶೇಷತೆಗಳಿವು
Advertisement
Advertisement
ಹಾರ್ದಿಕ್ ಪಾಂಡ್ಯ ಬೌಲಿಂಗ್ ಅಭ್ಯಾಸ ಮಾಡುತ್ತಿರುವ ಫೋಟೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಮೂಲಕ ಮತ್ತೆ ಬೌಲಿಂಗ್‍ನತ್ತ ಹಾರ್ದಿಕ್ ಮುಖಮಾಡಿದಂತಾಗಿದೆ. ಪಾಂಡ್ಯ ಬೆನ್ನುನೋವಿನಿಂದಾಗಿ ಸುದೀರ್ಘ ಕಾಲದಿಂದ ಬೌಲಿಂಗ್ ಮಾಡುತ್ತಿರಲಿಲ್ಲ. ಹಾಗಾಗಿ ಟೀಂ ಇಂಡಿಯಾಗೆ ಆರನೇ ಬೌಲರ್ ಸಮಸ್ಯೆಯೊಂದು ಕಾಡುತ್ತಿತ್ತು. ಇದೀಗ ಈ ಸಮಸ್ಯೆ ಪರಿಹಾರ ಕಾಣುವ ಲಕ್ಷಣಗಳು ಕಂಡು ಬಂದಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಪಾಂಡ್ಯ ಬೌಲಿಂಗ್ ಮಾಡಲಿದ್ದಾರೆಯೇ ಎಂಬುದನ್ನು ಬೌಲಿಂಗ್ ಆರಂಭಿಸುವವರೆಗೆ ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಹಿಂದೂಗಳ ನಡುವೆ ನಮಾಜ್ – ಟೀಕೆಯ ಬಳಿಕ ಕ್ಷಮೆಯಾಚಿಸಿದ ವಕಾರ್ ಯೂನಿಸ್
Advertisement