ಮೆಲ್ಬರ್ನ್: ಟೀಂ ಇಂಡಿಯಾದ(Team India) ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್(Suryakumar Yadav) ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ದಾಖಲೆ ಬರೆದಿದ್ದಾರೆ.
ಒಂದೇ ಕ್ರಿಕೆಟ್ ವರ್ಷದಲ್ಲಿ ಸಾವಿರ ರನ್‌ಗಳ ಗಡಿ ದಾಟಿದ ಮೊದಲ ಭಾರತೀಯ ಆಟಗಾರ ವಿಶ್ವದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸೂರ್ಯ ಪಾತ್ರವಾಗಿದ್ದಾರೆ. ಜಿಂಬಾಬ್ವೆ ವಿರುದ್ಧ ಪಂದ್ಯಕ್ಕೂ ಮೊದಲು ಒಟ್ಟು 959 ರನ್‌ಗಳಿಸಿದ್ದ ಸೂರ್ಯಕುಮಾರ್ ಇಂದು ಔಟಾಗದೇ 61 ರನ್(25 ಎಸೆತ, 6 ಬೌಂಡರಿ, 4 ಸಿಕ್ಸರ್) ಹೊಡೆದಿದ್ದು, ಈ ವರ್ಷ 28 ಇನ್ನಿಂಗ್ಸ್‌ಗಳಿಂದ ಒಟ್ಟು 1020 ರನ್ ಹೊಡೆದಿದ್ದಾರೆ.
Advertisement
Superb Surya!
Iconic moments like this from every game will be available as officially licensed ICC digital collectibles with @0xfancraze.
Visit https://t.co/8TpUHbQikC today to see if this could be a Crictos of the Game. pic.twitter.com/EMo1LVMxKv
— ICC (@ICC) November 6, 2022
Advertisement
ಟಿ20 ಕ್ರಿಕೆಟ್‌ನಲ್ಲಿ(T20 Cricket) ಒಂದೇ ವರ್ಷದಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಹೆಸರಿನಲ್ಲಿದೆ. 2021 ರಲ್ಲಿ 26 ಇನ್ನಿಂಗ್ಸ್‌ಗಳಿಂದ ರಿಜ್ವಾನ್ 1326 ರನ್ ಹೊಡೆದಿದ್ದರು. ಇದನ್ನೂ ಓದಿ: ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ
Advertisement
ಈ ವರ್ಷ ಅತಿ ಹೆಚ್ಚು ರನ್ ಹೊಡೆದ ಆಟಗಾರರ ಪೈಕಿ ರಿಜ್ವಾನ್(924 ರನ್), ವಿರಾಟ್ ಕೊಹ್ಲಿ(731 ರನ್) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
Advertisement
ಈ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಮೂರು ಅರ್ಧಶತಕ ಹೊಡೆದಿದ್ದಾರೆ. ಪಾಕಿಸ್ತಾನದ ವಿರುದ್ಧ 15 ರನ್, ನೆದರ್‌ಲ್ಯಾಂಡ್ ವಿರುದ್ಧ 51 ರನ್, ದಕ್ಷಿಣ ಆಫ್ರಿಕಾ ವಿರುದ್ಧ 68 ರನ್, ಬಾಂಗ್ಲಾ ದೇಶದ ವಿರುದ್ಧ 30 ರನ್ ಚಚ್ಚಿದ್ದಾರೆ.
ಜಿಂಬಾಬ್ವೆ ವಿರುದ್ಧದ ಅತ್ಯುತ್ತಮ ಆಟಕ್ಕೆ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.