ದುಬೈ: ವಿಶ್ವ ಶ್ರೇಷ್ಠ ಕ್ರಿಕೆಟ್ ತಂಡಗಳ ನಡುವಿನ ಚುಟುಕು ಸಮರ ಆರಂಭಕ್ಕೆ ಕೆಲದಿನಗಳು ಬಾಕಿ ಉಳಿದುಕೊಂಡಿದೆ. ಈ ನಡುವೆ ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡಕ್ಕೆ ಐಪಿಎಲ್‍ನಲ್ಲಿ ಮಿಂಚಿದ ಕೆಲ ಆಟಗಾರರು ಲಗ್ಗೆ ಇಟ್ಟಿದ್ದಾರೆ.
ಐಪಿಎಲ್ ಆರಂಭಕ್ಕೂ ಮೊದಲು ಟಿ20 ವಿಶ್ವಕಪ್‍ಗಾಗಿ ಭಾರತ ತಂಡವನ್ನು ಆಯ್ಕೆ ಮಾಡಲಾಗಿತ್ತು. ಅದರೆ ಕೆಲ ಆಟಗಾರರು ಅವಕಾಶ ವಂಚಿತರಾಗಿದ್ದರು. ಇದೀಗ ಐಪಿಎಲ್‍ನಲ್ಲಿ ಮಿಂಚಿ ಟೀಂ ಇಂಡಿಯಾ ಟಿ20 ತಂಡದೊಂದಿಗೆ ಇರುವಂತಹ ಅವಕಾಶ ಕೆಲ ಆಟಗಾರರಿಗೆ ಒದಗಿ ಬಂದಿದೆ. ಇದರಲ್ಲಿ ಪ್ರಮುಖವಾಗಿ ಚೆನ್ನೈ ತಂಡದ ಬೌಲರ್ ಶಾರ್ದೂಲ್ ಠಾಕೂರ್ ಮೊದಲು ಸ್ಟ್ಯಾಂಡ್ ಬೈ ಆಟಗಾರರಾಗಿದ್ದರು. ಆದರೆ ಐಪಿಎಲ್‍ನಲ್ಲಿ ಅವರ ಪ್ರದರ್ಶನ ಗಮನಿಸಿದ ಬಿಸಿಸಿಐ ಅಕ್ಷರ್ ಪಟೇಲ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರನ್ನಾಗಿಸಿ ಠಾಕೂರ್ ಗೆ 15 ಜನರ ತಂಡದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದೆ. ಇದನ್ನೂ ಓದಿ: T20 ವಿಶ್ವಕಪ್‍ಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ
ಟಿ20 ತಂಡದಲ್ಲಿ 3 ಮಂದಿ ಸ್ಟ್ಯಾಂಡ್ ಬೈ ಆಟಗಾರರು ಈಗಾಗಲೇ ತಂಡದಲ್ಲಿದ್ದರೂ ಕೂಡ ಐಪಿಎಲ್ ಪ್ರದರ್ಶನ ಗಮನಿಸಿ 8 ಆಟಗಾರರನ್ನೂ ಐಪಿಎಲ್ ಮುಗಿದ ಬಳಿಕ ದುಬೈನಲ್ಲಿ ಟೀಂ ಇಂಡಿಯಾ ಜೊತೆ ಇರುವಂತೆ ಬಿಸಿಸಿಐ ಸೂಚನೆ ನೀಡಿದೆ. ಆವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ವೆಂಕಟೇಶ್ ಅಯ್ಯರ್, ಈ ಎಲ್ಲಾ ಅಟಗಾರರು ಕೂಡ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಧೂಳೆಬ್ಬಿಸಿದ್ದಾರೆ. ಇವರೊಂದಿಗೆ ಕರಣ್ ಶರ್ಮಾ, ಕೆ ಗೌತಮ್, ಲುಕ್ಮಾನ್ ಮೇರಿವಾಲಾ, ಮತ್ತು ಶಹಬಾಜ್ ಅಹಮದ್ ಕೂಡ ಟಿ20 ತಂಡದೊಂದಿಗಿರುವ ಅವಕಾಶ ಸಿಕ್ಕಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಧೋನಿ ಕ್ರಿಕೆಟ್ ಅಕಾಡೆಮಿ ಪ್ರಾರಂಭ – ಗೇಮ್‍ಪ್ಲೇ ಘೋಷಣೆ