ಅಹಮದಾಬಾದ್: ಚುಟುಕು ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಅಹ್ಮದಬಾದ್ ಪಂದ್ಯವೇ ಸಾಕ್ಷಿಯಾಗಿದೆ. ಭಾರತ ಸುಲಭದಲ್ಲಿ ಗೆಲ್ಲಬಹುದು ಅಂದುಕೊಂಡಿದ್ದ ಪಂದ್ಯವನ್ನು ದಕ್ಷಿಣ ಆಫ್ರಿಕಾ ದೊಡ್ಡ ಅಂತರದಿಂದ ಗೆದ್ದು ಬೀಗಿದೆ. ಈ ಪಂದ್ಯದ ಬಳಿಕ ಭಾರತ ಸೆಮಿ ಫೈನಲ್ ಪ್ರವೇಶಿಸುವ ಹಾದಿ ತುಂಬಾ ಕಠಿಣವಾಗಿದೆ.
ಭಾರತ ಸೆಮಿಸ್ ತಲುಪಬೇಕಿದ್ರೆ ಏನು ಮಾಡಬೇಕು?
ತಂತ್ರ – 1 – ಭಾರತ 2 ಪಂದ್ಯಗಳನ್ನು ಗೆಲ್ಲಬೇಕು
ಸೂಪರ್-8 ನ ಮೊದಲ ಪಂದ್ಯದಲ್ಲಿ 71 ರನ್‌ಗಳ ಅಂತರದಿಂದ ಸೋತಿರುವ ಭಾರತ ಇನ್ನುಳಿದ 2 ಪಂದ್ಯಗಳನ್ನು ಗೆಲ್ಲಬೇಕು. ಇತರ 2 ಪಂದ್ಯಗಳನ್ನ ಗೆಲ್ಲುವುದರಿಂದ 4 ಅಂಕ ಗಳಿಸುತ್ತದೆ. ಸೆಮಿಸ್ ತಲುಪಲು ಇಷ್ಟು ಸಾಕು, ಆದ್ರೆ ಉತ್ತಮ ನೆಟ್ ರನ್‌ರೇಟ್ ತುಂಬಾನೇ ಅಗತ್ಯ. ಆದ್ರೆ ದಕ್ಷಿಣ ಆಫ್ರಿಕಾಗೆ ಬಾಕಿ ಇರುವ ಎರಡು ಪಂದ್ಯಗಳಲ್ಲಿ 1 ಪಂದ್ಯ ಗೆದ್ದರೂ ಸೆಮಿಸ್ ಹಾದಿ ಬಹುತೇಕ ಖಚಿತವಾಗುತ್ತದೆ. ಇದನ್ನೂ ಓದಿ: ಕಳಪೆ ಬೌಲಿಂಗ್, ಬ್ಯಾಟಿಂಗ್‌ಗೆ ಬೆಲೆತೆತ್ತ ಭಾರತ – ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು

ತಂತ್ರ – 2 – ಭಾರತ 1 ಪಂದ್ಯ ಗೆದ್ದರೂ ಸಾಕು
ಭಾರತ ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದು, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ವಿರುದ್ಧ ಪಂದ್ಯಗಳು ಬಾಕಿಯಿವೆ. ಇದರಲ್ಲಿ ಉತ್ತಮ ನೆಟ್ ರನ್ ರೇಟ್‌ನಿಂದ 1 ಪಂದ್ಯ ಗೆದ್ದರೂ ಸೆಮಿಸ್ ಪ್ರವೇಶಿಸಬಹುದು. ಆದ್ರೆ ದಕ್ಷಿಣ ಆಫ್ರಿಕಾ ಬಾಕಿಯಿರುವ ಎರಡೂ ಪಂದ್ಯ ಗೆಲ್ಲಬೇಕು, ಇದೇ ಸಮಯ ಜಿಂಬಾಬ್ವೆ ಮತ್ತು ವೆಸ್ಟ್‌ಇಂಡೀಸ್ ತಲಾ ಒಂದೊಂದು ಪಂದ್ಯ ಮಾತ್ರ ಗೆಲ್ಲಬೇಕು. ಇದನ್ನೂ ಓದಿ: ಸತತ 13 ಪಂದ್ಯ ಗೆಲ್ಲುವ ಕನಸು ಭಗ್ನ – ಸೋತರೂ ಮೊದಲ ಸ್ಥಾನದಲ್ಲಿದೆ ಭಾರತ

ಬಾಕಿಯಿರುವ ಪಂದ್ಯಗಳು
ಫೆಬ್ರವರಿ 23: ವೆಸ್ಟ್ ಇಂಡೀಸ್ vs ಜಿಂಬಾಬ್ವೆ (ಮುಂಬೈ)
ಫೆಬ್ರವರಿ 26: ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (ಅಹಮದಾಬಾದ್)
ಫೆಬ್ರವರಿ 26: ಭಾರತ vs ಜಿಂಬಾಬ್ವೆ (ಚೆನ್ನೈ)
ಮಾರ್ಚ್ 1: ದಕ್ಷಿಣ ಆಫ್ರಿಕಾ vs ಜಿಂಬಾಬ್ವೆ (ದೆಹಲಿ)
ಮಾರ್ಚ್ 1: ಭಾರತ vs ವೆಸ್ಟ್ ಇಂಡೀಸ್ (ಕೋಲ್ಕತ್ತಾ)
ಒಟ್ಟಿನಲ್ಲಿ 2024 ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಸೋಲ ಭಾರತ ಟ್ರೋಫಿ ಎತ್ತಿ ಹಿಡಿದಿತ್ತು. 2026 ರಲ್ಲೂ ಲೀಗ್‌ನ ಎಲ್ಲಾ ಪಂದ್ಯಗಳನ್ನ ಗೆದ್ದು ಸೂಪರ್-8 ಪ್ರವೇಶಿಸಿತ್ತು. ಸೂಪರ್-8 ನ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತು ಸಂಕಷ್ಟಕ್ಕೀಡಾಗಿದೆ. ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗ ರಾಹುಲ್ ಚಹರ್-ಇಶಾನಿ ವಿಚ್ಛೇದನ – 4 ವರ್ಷಗಳ ದಾಂಪತ್ಯ ಅಂತ್ಯ

