ಬೆಂಗಳೂರು: ಭಾರತ (India) ಮತ್ತು ಶ್ರೀಲಂಕಾದ (Sri Lanka) ಅತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ (T20 Cricket) ಕ್ರಿಕೆಟ್ ಪಂದ್ಯಗಳಿಗೆ 8 ಮೈದಾನಗಳನ್ನು ಆಯ್ಕೆ ಮಾಡಲಾಗಿದ್ದು ಬೆಂಗಳೂರನ್ನು (Bengaluru) ಕೈಬಿಡಲಾಗಿದೆ.
ಹೌದು. ಐಸಿಸಿ ಇಂದು ಅಧಿಕೃತವಾಗಿ ಪಂದ್ಯದ ವೇಳಾಪಟ್ಟಿ ಪ್ರಕಟಿಸಿದೆ. ಫೆಬ್ರವರಿ 7 ರಂದು ಮೊದಲ ಪಂದ್ಯ ನಡೆದರೆ ಮಾರ್ಚ್ 8 ರಂದು ಫೈನಲ್ ಪಂದ್ಯ ನಡೆಯಲಿದೆ.
2026 ಟಿ20 ವಿಶ್ವಕಪ್‌ಗೆ ಐಸಿಸಿ ಬ್ರಾಂಡ್ ರಾಯಭಾರಿಯಾಗಿ ರೋಹಿತ್ ಶರ್ಮಾ (Rohit Sharma) ಅವರನ್ನು ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿಂದಲೇ ಐಪಿಎಲ್ ಎತ್ತಂಗಡಿ- ಪುಣೆಯಲ್ಲಿ ಆರ್‌ಸಿಬಿ ಮ್ಯಾಚ್!
ಯಾವೆಲ್ಲ ಕ್ರೀಡಾಂಗಣ ಆಯ್ಕೆ?
ಅರುಣ್ ಜೇಟ್ಲಿ ಕ್ರೀಡಾಂಗಣ, ನವದೆಹಲಿ
ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ವಾಂಖೆಡೆ ಸ್ಟೇಡಿಯಂ, ಮುಂಬೈ
ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಕ್ಯಾಂಡಿ
ಆರ್ ಪ್ರೇಮದಾಸ ಸ್ಟೇಡಿಯಂ, ಕೊಲಂಬೋ
ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್, ಕೊಲಂಬೋ ಇದನ್ನೂ ಓದಿ: ಸ್ಮೃತಿ ಮಂಧಾನಗೆ ವಂಚಿಸಿದ್ರಾ ಪಾಲಶ್ ಮುಚ್ಚಲ್?

ಬೆಂಗಳೂರಿನಲ್ಲಿ ಯಾಕಿಲ್ಲ?
ಈ ವರ್ಷದ ಜೂನ್ 4ರಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭ್ರಮಿಸಿತ್ತು. ದುರಂತದಲ್ಲಿ 1 ಜನ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯಿಂದ ಸುರಕ್ಷತೆ ಬಗ್ಗೆ ಕಳವಳ ಹೆಚ್ಚಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣವನ್ನು ದೊಡ್ಡ ಪ್ರಮಾಣದ ಕಾರ್ಯಕ್ರಮಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ಕರ್ನಾಟಕ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಸಮಿತಿ ಹೇಳಿತ್ತು. ಈ ಹಿಂದೆ ಮಹಿಳಾ ವಿಶ್ವಕಪ್ ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧಾರ ತೆಗೆದುಕೊಂಡಿತ್ತು. ನಂತರ ಪಂದ್ಯಗಳನ್ನು ಮುಂಬೈಗೆ ಶಿಫ್ಟ್ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಬೆಂಗಳೂರು ಪೊಲೀಸರು ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ಆಡಿಸಲು 17 ಷರತ್ತುಗಳನ್ನು ಸಹ ವಿಧಿಸಿದ್ದರು.


