ದುಬೈ: ಸೆಮಿಫೈನಲ್‍ಗೇರಲು ಕಡೆಯ ಅವಕಾಶವನ್ನೂ ಸಂಪೂರ್ಣವಾಗಿ ಬಳಸಿಕೊಂಡ ನ್ಯೂಜಿಲೆಂಡ್ ತಂಡ ಅಘ್ಘಾನಿಸ್ತಾನ ವಿರುದ್ಧ 8 ವಿಕೆಟ್‍ಗಳ ಜಯದೊಂದಿಗೆ ಗ್ರೂಪ್-2ರಲ್ಲಿ ದ್ವಿತೀಯ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತು. ಈ ಮೂಲಕ ಭಾರತದ ಸೆಮಿಫೈನಲ್ ಕನಸು ಭಗ್ನಗೊಂಡಿದೆ.
ನ್ಯೂಜಿಲೆಂಡ್ ವಿರುದ್ಧ ಅಘ್ಘಾನಿಸ್ತಾನ ಗೆಲ್ಲುತ್ತಿದ್ದರೆ ಭಾರತ ತಂಡ ನಾಳೆಯ ಪಂದ್ಯದ ಫಲಿತಾಂಶವನ್ನು ಗಮನಿಸಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿತ್ತು. ಆದರೆ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿನೊಂದಿಗೆ ಈ ಅವಕಾಶ ಭಾರತಕ್ಕೆ ಕೈತಪ್ಪಿತು.
Advertisement
Advertisement
ಅಘ್ಘಾನಿಸ್ತಾನ ನೀಡಿದ 125 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ 18.1 ಓವರ್ ಗಳಲ್ಲಿ 125 ರನ್ ಸಿಡಿಸಿ ಗೆದ್ದು ಬೀಗಿತು. ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ 40 ರನ್ (42 ಎಸೆತ, 3 ಬೌಂಡರಿ) ಮತ್ತು ಡೆವೊನ್ ಕಾನ್ವೇ 36 ರನ್ ( 32 ಎಸೆತ, 4 ಬೌಂಡರಿ) ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್ ಬೈ ಹೇಳಲು ಮುಂದಾದ್ರಾ ಕ್ರಿಸ್ ಗೇಲ್?
Advertisement
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಅಘ್ಘಾನಿಸ್ತಾನ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಕೇವಲ 19 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಜೀಬುಲ್ಲಾ ಜದ್ರಾನ್ ಆಸರೆಯಾದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಇನ್ನೊಂದು ಕಡೆ ಭರ್ಜರಿ ಬ್ಯಾಟ್ ಬೀಸಿದ ಜದ್ರಾನ್ 73 ರನ್ (48 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಿ 18ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು.
ಜದ್ರಾನ್‍ಗೆ ಗುಲ್ಬದಿನ್ ನಾಯಬ್ 15 ರನ್ (18 ಎಸೆತ, 1 ಬೌಂಡರಿ) ಮತ್ತು ಮೊಹಮ್ಮದ್ ನಬಿ 14 ರನ್ (20 ಎಸೆತ) ಸಿಡಿಸಿ ಸಾಥ್ ನೀಡಿದ್ದನ್ನು ಹೊರತು ಪಡಿಸಿ ಉಳಿದ 6 ಮಂದಿ ಆಟಗಾರರು ಒಂದಂಕಿ ಮೊತ್ತಕ್ಕೆ ಔಟ್ ಆದರು. ಪರಿಣಾಮ 20 ಓವರ್ ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 124 ರನ್ ಕುಸಿತಕಂಡು ಸಾಧಾರಣ ಮೊತ್ತ ಕಲೆಹಾಕಿತು. ಇದನ್ನೂ ಓದಿ: ಟೀಂ ಇಂಡಿಯಾ ಸೆಮಿಫೈನಲ್ ಕನಸು ನನಸಾಗಲು ಇದೊಂದೇ ಮಾರ್ಗ
ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 3 ವಿಕೆಟ್ ಕಿತ್ತು ಮಿಂಚಿದರೆ, ಟಿಮ್ ಸೌಥಿ 2 ವಿಕೆಟ್ ಬೇಟೆಯಾಡಿದರು. ಆಡಮ್ ಮಿಲ್ನೆ, ಜೇಮ್ಸ್ ನೀಶಮ್, ಇಶ್ ಸೋಧಿ ತಲಾ 1 ವಿಕೆಟ್ ಕಿತ್ತರು.