ಸಿಡ್ನಿ: ಟಿ20 ವಿಶ್ವಕಪ್‍ನ (T20 World Cup) ಅಭ್ಯಾಸ ಪಂದ್ಯದ ಮೂಲಕ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಸೂರ್ಯಕುಮಾರ್ ಯಾದವ್ (Suryakumar Yadav) ತನ್ನ ಅಬ್ಬರ ಆರಂಭಿಸಿದ್ದಾರೆ.
Advertisement
ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಇಂದು ಮೊದಲ ಅಭ್ಯಾಸ ಪಂದ್ಯ ನಡೆಯಿತು. ಪಶ್ಚಿಮ ಆಸ್ಟ್ರೇಲಿಯಾ (Western Australia) ವಿರುದ್ಧ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಘರ್ಜನೆ ಮುಂದುವರಿಸಿದ್ದಾರೆ. ಟಿ20 ಕ್ರಿಕೆಟ್‍ನಲ್ಲಿ ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಈಗಾಗಲೇ ಸದ್ದು ಮಾಡಿರುವ ಸೂರ್ಯ, ಆಸ್ಟ್ರೇಲಿಯಾ ನೆಲದಲ್ಲೂ ತನ್ನ ಅಬ್ಬರ ಶುರುಮಾಡಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಇದನ್ನೂ ಓದಿ: ಕ್ಯಾಚ್ ಹಿಡಿಯಲು ಬಂದ ಮಾರ್ಕ್‍ವುಡ್‍ರನ್ನು ತಳ್ಳಿದ ವೇಡ್ – ಆದರೂ ಗೆಲ್ಲಲಿಲ್ಲ ಆಸ್ಟ್ರೇಲಿಯಾ
Advertisement
Advertisement
ಅಭ್ಯಾಸ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 52 ರನ್ ಚಚ್ಚಿ ಮಿಂಚಿದರು. ಇದರ ಪರಿಣಾಮವಾಗಿ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಬಾರಿಸಿತು. ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ರಿಷಭ್ ಪಂತ್ (Rishabh Pant) ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದರು. ಆದರೆ ಪಂತ್ ಹೊಡೆದದ್ದು ಒಂಬತ್ತೆ ರನ್. ಈ ಮೂಲಕ ಮತ್ತೆ ವಿಫಲತೆ ಕಂಡಿದ್ದಾರೆ. ಇದನ್ನೂ ಓದಿ: ನನ್ನ ಪ್ರೀತಿಯನ್ನು ಹಿಂಬಾಲಿಸುತ್ತಿದ್ದೇನೆ ಎಂದು ಆಸ್ಟ್ರೇಲಿಯಾಗೆ ಹಾರಿದ ಊರ್ವಶಿ – ಟ್ರೋಲ್ ಆದ ಪಂತ್
Advertisement
ಅಭ್ಯಾಸ ಪಂದ್ಯದಲ್ಲಿ ರೋಹಿತ್ 3, ದೀಪಕ್ ಹೂಡಾ 22, ಪಾಂಡ್ಯ 29 ರನ್ ಬಾರಿಸಿ ಕೊಡುಗೆ ನೀಡಿದರು. ಆ ಬಳಿಕ ಬೌಲಿಂಗ್‍ನಲ್ಲಿ ಅರ್ಷದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ಮಿಂಚಿದ್ದಾರೆ.
Live Tv
[brid partner=56869869 player=32851 video=960834 autoplay=true]