ಸಿಡ್ನಿ: ನೆದರ್‌ಲ್ಯಾಂಡ್ (Netherland) ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ (India) 56 ರನ್‍ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಸತತ 2ನೇ ಜಯ ಸಾಧಿಸಿ ಪಾಯಿಂಟ್ ಟೇಬಲ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದೆ.
Advertisement
ಭಾರತ ನೀಡಿದ 180 ರನ್‍ಗಳ ಬಿಗ್ ಸ್ಕೋರ್ ಬೆನ್ನಟ್ಟಿದ ನೆದರ್‌ಲ್ಯಾಂಡ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಭಾರತದ ಬೌಲರ್‌ಗಳು ನೆಲೆಯೂರಲು ಅವಕಾಶ ನೀಡದೆ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಶಕ್ತರಾಗಿ ಸೋಲುಂಡರು. ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಪುರುಷರಷ್ಟೇ ಸಮಾನ ಶುಲ್ಕ : ಬಿಸಿಸಿಐ ಘೋಷಣೆ
Advertisement
Advertisement
ಬೌಲರ್‌ಗಳ ಭರ್ಜರಿ ಭೇಟೆ:
ಡಚ್ಚರು ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಾಗಿದರು. ಮ್ಯಾಕ್ಸ್ ಒ’ಡೌಡ್ 16 ರನ್ (10 ಎಸೆತ 3 ಬೌಂಡರಿ), ಬಾಸ್ ಡಿ ಲೀಡೆ 16 ರನ್ (23 ಎಸೆತ), ಕಾಲಿನ್ ಅಕರ್ಮನ್ 17 ರನ್ (21 ಎಸೆತ, 1 ಬೌಂಡರಿ) ಮತ್ತು ಟಿಮ್ ಪ್ರಿಂಗಲ್ 20 ರನ್ (15 ಎಸೆತ, 1 ಸಿಕ್ಸ್, 1 ಬೌಂಡರಿ) ಸಿಡಿಸಿದ್ದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳು ಭಾರತದ ಬೆಂಕಿ ಬೌಲರ್‌ಗಳ ದಾಳಿಗೆ ಸಿಲುಕಿ ಒದ್ದಾಡಿದರು. ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 123 ರನ್ ಹೊಡಿಯಲಷ್ಟೇ ಶಕ್ತರಾದರು. ಭಾರತದ ಪರ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಅಶ್ವಿನ್ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಶಮಿ 1 ವಿಕೆಟ್ ಪಡೆಯಲು ಯಶಸ್ವಿಯಾದರು.
Advertisement
ಈ ಮೊದಲು ಟೂರ್ನಿಯ ಎರಡನೇ ಪಂದ್ಯವಾಡುತ್ತಿರುವ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ತಮ್ಮ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದರು. ರಾಹುಲ್ ಕೇವಲ 9 ರನ್ (12 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ಇದನ್ನೂ ಓದಿ: ವಿಶ್ವಕಪ್‌ನಲ್ಲಿರೋ ಆಟಗಾರರಿಗೆ ಸರಿಯಾಗಿ ಊಟ ಸಿಗ್ತಿಲ್ಲ- ಟೀಂ ಇಂಡಿಯಾ ಬೇಸರ
ನಾಯಕನಿಗೆ ಜೊತೆಯಾದ ಮಾಜಿ ಕ್ಯಾಪ್ಟನ್:
ರಾಹುಲ್ ಔಟ್ ಆದ ಬಳಿಕ ರೋಹಿತ್ ಜೊತೆಯಾದ ವಿರಾಟ್ ಕೊಹ್ಲಿ (Virat Kohli) ನಿಧಾನವಾಗಿ ರನ್ ಏರಿಸುವತ್ತ ಗಮನ ಹರಿಸಿದರು. ನೆದರ್‌ಲ್ಯಾಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಬ್ಯಾಟಿಂಗ್‍ನಲ್ಲಿ ಎಕ್ಸಲೇಟರ್ ಹೆಚ್ಚಿಸಿ ರನ್ ಗುಡ್ಡೆಹಾಕಿತ್ತು. ರೋಹಿತ್ ಶರ್ಮಾ 53 ರನ್ (39 ಎಸೆತ, 4 ಬೌಂಡರಿ, 3 ಸಿಕ್ಸ್) ಚಚ್ಚಿ ಔಟ್ ಆದರು. ಈ ಮೊದಲು ಕೊಹ್ಲಿ ಜೊತೆ 2ನೇ ವಿಕೆಟ್‍ಗೆ 73 ರನ್ (56 ಎಸೆತ) ಜೊತೆಯಾಟವಾಡಿದರು. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಅಂಪೈರಿಂಗ್ ಮಾಡಿದ ಫುಟ್‍ಬಾಲ್ ದಿಗ್ಗಜ ಮೆಸ್ಸಿ! – ಫೋಟೋ ವೈರಲ್
ಒಂದಾದ ಕೊಹ್ಲಿ, ಸೂರ್ಯ:
ರೋಹಿತ್ ಬಳಿಕ ಸೂರ್ಯಕುಮಾರ್ ಯಾದವ್ (SuryaKumar Yadav), ಕೊಹ್ಲಿ ಜೊತೆ ಸೇರಿಕೊಂಡು ಅಬ್ಬರಿಸಲು ಆರಂಭಿಸಿದರು. ಇಬ್ಬರು ನೆದರ್‌ಲ್ಯಾಂಡ್ ಬೌಲರ್‌ಗಳ ಬೆಂಡೆತ್ತಿದರು. ಸಾಧಾರಣ ಮೊತ್ತದತ್ತ ಮುನ್ನುಗ್ಗುತ್ತಿದ್ದ ಭಾರತ ಸ್ಕೋರ್ 170ರ ಗಡಿದಾಟುವಂತೆ ನೋಡಿಕೊಂಡರು. ಈ ಜೋಡಿ ಅಜೇಯ 3ನೇ ವಿಕೆಟ್‍ಗೆ 95 ರನ್ (48 ಎಸೆತ) ಜೊತೆಯಾಟವಾಡಿ ಮಿಂಚಿತು. ಇಲ್ಲಿ ಕೊಹ್ಲಿ ಅಜೇಯ 62 ರನ್ (44 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 51 ರನ್ (25 ಎಸೆತ, 7 ಬೌಂಡರಿ, 1 ಸಿಕ್ಸ್) ಚಚ್ಚಿ ಇನ್ನಿಂಗ್ಸ್ ಮುಗಿಸಿದರು. ಭಾರತ 20 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 179 ರನ್‍ಗಳ ಉತ್ತಮ ಮೊತ್ತ ಪೇರಿಸಿತು.
ನೆದರ್‌ಲ್ಯಾಂಡ್ ಪರ ಫ್ರೆಡ್ ಕ್ಲಾಸೆನ್ ಮತ್ತು ಪಾಲ್ ವ್ಯಾನ್ ಮೀಕೆರೆನ್ ತಲಾ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು.
Live Tv
[brid partner=56869869 player=32851 video=960834 autoplay=true]