ದುಬೈ: ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡ ನಮೀಬಿಯಾ ತಂಡವನ್ನು 9 ವಿಕೆಟ್ ಅಂತರದಲ್ಲಿ ಮಣಿಸಿ ಜಯದೊಂದಿಗೆ ಟಿ20 ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿತು.
Advertisement
ನಮೀಬಿಯಾ ನೀಡಿದ್ದ 133 ರನ್‍ಗಳ ಟಾರ್ಗೆಟ್ ಬೆನ್ನು ಹತ್ತಿದ್ದ ಭಾರತ 15.2 ಓವರ್ ಗಳ ಅಂತ್ಯಕ್ಕೆ 136 ರನ್ ಸಿಡಿಸಿ ಗೆದ್ದು, ನಾಯಕನಾಗಿ ಕೊನೆಯ ಪಂದ್ಯವನ್ನಾಡುತ್ತಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿಗೆ ಗೆಲುವಿನ ಬೀಳ್ಕೊಡುಗೆ ನೀಡಿತು. ಇದನ್ನೂ ಓದಿ: IPL ನೂತನ ತಂಡ ಅಹಮದಾಬಾದ್ ಕೋಚ್ ಆಗ್ತಾರಂತೆ ರವಿಶಾಸ್ತ್ರಿ?
Advertisement
Advertisement
ಭಾರತ ಪರ ಅಬ್ಬರದ ಬ್ಯಾಟಿಂಗ್ ನಡೆಸಿದ ಆರಂಭಿಕ ಜೋಡಿ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್‍ಗೆ 86 ರನ್ (59 ಎಸೆತ) ಜೊತೆಯಾಟವಾಡಿತು. ರೋಹಿತ್ ಶರ್ಮಾ 56 ರನ್ (37 ಎಸೆತ, 7 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್ 25 ರನ್ (19 ಎಸೆತ, 4 ಬೌಂಡರಿ) ಮತ್ತು ರಾಹುಲ್ 54 ರನ್ (36 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
Advertisement
ಈ ಮೊದಲು ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಮೀಬಿಯಾ ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ವಿರಾಟ್ ಕೊಹ್ಲಿ ನಿರ್ಧಾರವನ್ನು ಸಮರ್ಥವಾಗಿ ನಿರ್ವಹಿಸಿದ ಭಾರತ ಬೌಲರ್ ಗಳು ಆರಂಭದಿಂದಲೇ ವಿಕೆಟ್ ಬೇಟೆ ಆರಂಭಿಸಿದರು.ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ
ಜಡೇಜಾ, ಅಶ್ವಿನ್ ಕಾಂಬಿನೇಷನ್
ತಮ್ಮ ಹಳೆಯ ದಿನಗಳನ್ನು ನೆನಪಿಸಿದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ನಮೀಬಿಯಾ ಬ್ಯಾಟ್ಸ್‍ಮ್ಯಾನ್‍ಗಳನ್ನು ಪೆವಿಲಿಯನ್ ಪರೇಡ್ ನಡೆಸುವಂತೆ ನೋಡಿಕೊಂಡರು. ನಮೀಬಿಯಾ ಪರ ಡೇವಿಡ್ ವೈಸ್ 26 ರನ್ (25 ಎಸೆತ, 2 ಬೌಂಡರಿ), ಸ್ಟೀಫನ್ ಬಾರ್ಡ್ 21 ರನ್ (21 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಜಾನ್ ಫ್ರೈಲಿಂಗ್ 15 ರನ್ (15 ಎಸೆತ) ಈ ಮೂವರನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‍ಮ್ಯಾನ್ ಕೂಡ ರನ್ ಗಳಿಸಲು ಮುಂದಾಗಲಿಲ್ಲ. ಅಶ್ವಿನ್ ಮತ್ತು ಜಡೇಜಾ ನಾಮುಂದು- ತಾಮುಂದು ಎಂಬಂತೆ ತಲಾ 3 ವಿಕೆಟ್ ಕಿತ್ತು ಕುಸಿತಕ್ಕೆ ಕಾರಣರಾದರು. ಅಂತಿಮವಾಗಿ ನಮೀಬಿಯಾ 20 ಓವರ್ ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು.
ಭಾರತ ಪರ ಅಶ್ವಿನ್ ಮತ್ತು ಜಡೇಜಾ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ಬುಮ್ರಾ 2 ವಿಕೆಟ್ ಪಡೆದರು. ಇದನ್ನೂ ಓದಿ: ಪಂದ್ಯಕ್ಕೂ ಮೊದಲು ಅಬುಧಾಬಿ ಪಿಚ್ ಕ್ಯೂರೇಟರ್ ನಿಗೂಢ ಸಾವು