ದುಬೈ: ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನ ಪ್ರಶಸ್ತಿ ಮತ್ತು ನಗದು ಬಹುಮಾನದ ಮೊತ್ತವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದೆ.
Advertisement
ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಮುಗಿದ ಬಳಿಕ ದುಬೈ ಮತ್ತು ಓಮನ್‍ನಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿದೆ. ಇದೀಗ ಐಸಿಸಿ, ಟಿ20 ವಿಶ್ವಕಪ್ ಗೆಲ್ಲುವ ತಂಡಕ್ಕೆ ಮೊದಲ ಬಹುಮಾನವಾಗಿ ಟ್ರೋಫಿ ಜೊತೆ 1.6 ಮಿಲಿಯನ್ ಡಾಲರ್ ಎಂದರೆ ಸುಮಾರು 12 ಕೋಟಿ ರೂಪಾಯಿಯನ್ನು ನಗದು ಬಹುಮಾನವಾಗಿ ಘೋಷಿಸಿದೆ. ಹಾಗೆ ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 800 ಮಿಲಿಯನ್ ಡಾಲರ್ 6 ಕೋಟಿ ರೂಪಾಯಿ ನಗದು ಬಹುಮಾನ ಕೊಡಲಾಗುವುದಾಗಿ ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಬಯಸಿದರೆ ಪಾಕ್ ಕ್ರಿಕೆಟ್ ಕತೆ ಮುಗಿದಂತೆ: ರಮೀಝ್ ರಾಜಾ
Advertisement
???? Prize money announced for the 2021 ICC Men's #T20WorldCup.
More ????https://t.co/ebEhDCWYQp
— ICC (@ICC) October 10, 2021
Advertisement
ಟೂರ್ನಿಯ ಒಟ್ಟು ನಗದು ಪ್ರಶಸ್ತಿಯ ಮೊತ್ತವಾಗಿ 5.6 ಮಿಲಿಯನ್ ಡಾಲರ್(42 ಕೋಟಿ ರೂಪಾಯಿ) ಘೋಷಿಸಿದ್ದು, ಸೆಮಿಫೈನಲ್ ಹಂತದಲ್ಲಿ ಸೋತ ತಂಡಕ್ಕೆ 4,00,000 ಮಿಲಿಯನ್ ಡಾಲರ್ ಮತ್ತು ಸೂಪರ್ 12 ಪ್ರವೇಶ ಪಡೆದ ತಂಡಗಳು 40,000 ಡಾಲರ್ ಸಿಗಲಿದೆ. ಅಕ್ಟೋಬರ್ 17ರಿಂದ ವಿಶ್ವಕಪ್ ಆರಂಭಗೊಂಡು, ನವೆಂಬರ್ 14ರಂದು ಮುಕ್ತಾಯಗೊಳ್ಳಲಿದೆ. ಇದನ್ನೂ ಓದಿ: ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ: ಧೋನಿ ಅಚ್ಚರಿಯ ಹೇಳಿಕೆ
Advertisement