ಲಂಕಾ ವಿರುದ್ಧ ಜಯ – ಆಸ್ಟ್ರೇಲಿಯಾವನ್ನು ಹೊರದಬ್ಬಿ ಸೆಮಿಸ್‍ಗೆ ಎಂಟ್ರಿಕೊಟ್ಟ ಇಂಗ್ಲೆಂಡ್

Advertisements

ಸಿಡ್ನಿ: ಶ್ರೀಲಂಕಾ (Sri Lanka) ವಿರುದ್ಧ ಇಂಗ್ಲೆಂಡ್ (England) 4 ವಿಕೆಟ್‍ಗಳ ಜಯದೊಂದಿಗೆ ಟಿ20 ವಿಶ್ವಕಪ್‌ನಲ್ಲಿ (T20 World Cup) ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

Advertisements

ಶ್ರೀಲಂಕಾ ನೀಡಿದ 142 ರನ್‍ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 19.4 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿ ಇನ್ನೆರಡು ಎಸೆತ ಬಾಕಿ ಇರುವಂತೆ ಜಯಭೇರಿ ಬಾರಿಸಿತು. ಈ ಜಯದೊಂದಿಗೆ ಇಂಗ್ಲೆಂಡ್ ಗ್ರೂಪ್-1ರಲ್ಲಿ 2ನೇ ತಂಡವಾಗಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ. ಇತ್ತ ಇಂಗ್ಲೆಂಡ್ ಗೆಲುವು ದಾಖಲಿಸುತ್ತಿದ್ದಂತೆ ಆಸ್ಟ್ರೇಲಿಯಾ (Australia) ತಂಡ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಹಾಲಿ ಚಾಂಪಿಯನ್ನರಿಗೆ ತವರಿನಲ್ಲಿ ನಿರಾಸೆಯಾಗಿದೆ. ಇದನ್ನೂ ಓದಿ: ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ

Advertisements

142 ರನ್‍ಗಳ ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಉತ್ತಮ ಆರಂಭದ ನಡುವೆಯೂ ಕೊನೆಯಲ್ಲಿ ಪರದಾಡಿತು. ಜೋಸ್ ಬಟ್ಲರ್ 28 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಅಲೆಕ್ಸ್ ಹೇಲ್ಸ್ 47 ರನ್ (30 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದ ಬಳಿಕ ಇಂಗ್ಲೆಂಡ್ ಕುಸಿತ ಕಂಡಿತು. ಆದರೆ ಇಂಗ್ಲೆಂಡ್ ಗೆಲುವಿಗಾಗಿ ಕೊನೆಯ ಓವರ್‌ ವರೆಗೆ ಹೋರಾಡಿದ ಬೆನ್‍ಸ್ಟೋಕ್ಸ್ ಅಜೇಯ 42 ರನ್ (36 ಎಸೆತ, 2 ಬೌಂಡರಿ) ಸಿಡಿಸಿ ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಖೇಲ್ ರತ್ನ ಪ್ರಶಸ್ತಿಗೆ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಹೆಸರು ಶಿಫಾರಸು

Advertisements

ಈ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆರಂಭಿಕ ಆಟಗಾರ ಪಾತುಂ ನಿಸ್ಸಾಂಕ 67 ರನ್ (45 ಎಸೆತ, 2 ಬೌಂಡರಿ, 5 ಸಿಕ್ಸ್) ಚಚ್ಚಿದ ಪರಿಣಾಮ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141 ರನ್ ಬಾರಿಸಿತು. ಇಂಗ್ಲೆಂಡ್ ಬೌಲರ್‌ ಮಾರ್ಕ್‍ವುಡ್ 3 ವಿಕೆಟ್ ಕಿತ್ತು ಶ್ರೀಲಂಕಾಗೆ ಬ್ಯಾಟ್ಸ್‌ಮ್ಯಾನ್‌ಗಳಿಗೆ ಲಗಾಮು ಹಾಕಿದರು.

Live Tv

Advertisements
Exit mobile version