ಮುಂಬೈ: ಟಿ20 ವಿಶ್ವಕಪ್‌ನಲ್ಲಿ (T20 World Cup) ರುದರ್‌ಫೋರ್ಡ್ (Sherfane Rutherford) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡಿಸ್ (West Indies) ಇಂಗ್ಲೆಂಡ್ (England) ವಿರುದ್ಧ 30 ರನ್ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 196 ರನ್ ಹೊಡೆಯಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಇಂಗ್ಲೆಡ್ 19 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್ ಆಯ್ತು.
6.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 74 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟಿದ್ದರಿಂದ ಸೋಲನ್ನು ಅನುಭವಿಸಿದೆ. ಇದನ್ನೂ ಓದಿ: T20 World Cup | ಥ್ರಿಲ್ಲಿಂಗ್ ಮ್ಯಾಚ್, ಆಫ್ರಿಕಾಗೆ ಸೂಪರ್ ಸೂಪರ್ ಜಯ; ಹೋರಾಡಿ ಸೋತ ಅಫ್ಘಾನ್
Sherfane Ruth-less! 🔥
Sherfane Rutherford brings up his fifty & will look to finish the West Indian innings on a high! 💥
ICC Men’s #T20WorldCup | #ENGvWI | LIVE NOW 👉 https://t.co/GuO9vjphmZ pic.twitter.com/epOXIpWkaj
— Star Sports (@StarSportsIndia) February 11, 2026
ಸ್ಯಾಮ್ ಕರ್ರನ್ ಔಟಾಗದೇ 43 ರನ್(30 ಎಸೆತ, 3 ಬೌಂಡರಿ, 2 ಸಿಕ್ಸ್) ಹೊಡೆದರೆ ಜಾಕೋಬ್ ಬೆಥೆಲ್ 33 ರನ್ ಗಳಿಸಿ ಔಟಾದರು.
ಹಾಗೆ ನೋಡಿದರೆ ವಿಂಡಿಸ್ ಆರಂಭ ಉತ್ತಮವಾಗಿರಲಿಲ್ಲ 8 ರನ್ ಗಳಿಸುವಷ್ಟರಲ್ಲಿ ಆರಂಭಿಕ ಇಬ್ಬರು ಬ್ಯಾಟರ್‌ಗಳು ಔಟಾಗಿದ್ದರು. ನಂತರ ಬಂದ ಶಿಮ್ರಾನ್ ಹೆಟ್ಮೆಯರ್ 23 ರನ್, ರೋಸ್ಟನ್ ಚೇಸ್ 34 ರನ್ ಗಳಿಸಿ ಔಟಾದರು.
JAS-ON THE CHARGE! 💥
Power on display from Jason Holder as West Indies finish strong against England! 👊
ICC Men’s #T20WorldCup | #ENGvWI | LIVE NOW 👉 https://t.co/GuO9vjphmZ pic.twitter.com/FqdfWEanMG
— Star Sports (@StarSportsIndia) February 11, 2026
ಈ ವೇಳೆ ಕ್ರೀಸ್‌ಗೆ ಬಂದ ರುದರ್‌ಫೋರ್ಡ್ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಇವರಿಗೆ ಜೇಸನ್ ಹೋಲ್ಡರ್ ಸಾಥ್ ನೀಡಿದ್ದರು. ಇವರಿಬ್ಬರು 32 ಎಸೆತಗಳಲ್ಲಿ 61 ರನ್ ಜೊತೆಯಾಟವಾಡಿದರು. ಹೋಲ್ಡರ್ 33 ರನ್ (17 ಎಸೆತ, 1 ಬೌಂಡರಿ, 4 ಸಿಕ್ಸ್) ರುದರ್‌ಫೋರ್ಡ್ ಔಟಾಗದೇ 76 ರನ್(42 ಎಸೆತ, 2 ಬೌಂಡರಿ, 7 ಸಿಕ್ಸ್) ಹೊಡೆದರು.

