ಅಬುಧಾಬಿ: ಟಿ20 ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಅಬುಧಾಬಿಯ ಶೇಖ್ ಜಾಯೇದ್ ಕ್ರಿಕೆಟ್ ಸ್ಟೇಡಿಯಂ ಮುಖ್ಯ ಪಿಚ್ ಕ್ಯೂರೇಟರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಭಾರತದ ಉತ್ತರಾಖಂಡ್ ಮೂಲದ ಮೋಹನ್ ಸಿಂಗ್ ಅವರು ಭಾನುವಾರ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಪಂದ್ಯ ನಡೆಯವ ಕೆಲ ಗಂಟೆಗಳು ಮೊದಲು ತಮ್ಮ ಕೊಠಡಿಯ ಫ್ತಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
Advertisement
It is with great sadness that Abu Dhabi Cricket announces that Head Curator, Mohan Singh, has passed away today.
Mohan has been with Abu Dhabi Cricket for 15 years and has played a pivotal role in all of the venue’s success during that time.
(1/3) pic.twitter.com/9iklb9hkB5
— Abu Dhabi Cricket & Sports Hub (@adsportshub) November 7, 2021
Advertisement
ಬೆಳಗ್ಗೆ ಪಿಚ್ ನಿರ್ವಹಣೆ ಮಾಡಿದ್ದ ಅವರು ಕೊಠಡಿಗೆ ತೆರಳಿದ್ದರು. ಪಂದ್ಯ ನಡೆಯುತ್ತಿರುವಾಗ ಅವರು ಮೈದಾನಕ್ಕೆ ಬಂದಿರಲಿಲ್ಲ. ಹೀಗಾಗಿ ಅವರ ಕೊಠಡಿಗೆ ತೆರಳಿ ಪರಿಶೀಲಿಸಿದಾಗ ಸಾವನ್ನಪ್ಪಿದ ವಿಚಾರ ಬೆಳಕಿಗೆ ಬಂದಿದೆ.
Advertisement
ಮೋಹನ್ ಸಿಂಗ್ ಅವರ ನಿಧನಕ್ಕೆ ಕಾರಣ ಏನೆಂಬುದು ಗೊತ್ತಾಗಿಲ್ಲ. ಹೆಚ್ಚಿನ ಮಾಹಿತಿ ಇನ್ನೂ ಮಾಧ್ಯಮಗಳಿಗೆ ಸಿಕ್ಕಿಲ್ಲ. ಟಿ20 ವಿಶ್ವಕಪ್ ವೇಳೆ ಅಬುಧಾಬಿ ಪಿಚ್ ಗುಣಮಟ್ಟದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕ್ಯೂರೇಟರ್ ನಿಗೂಢವಾಗಿ ಸಾವನ್ನಪ್ಪಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ವಿಕ್ಕಿ, ಕತ್ರಿನಾ ಮದುವೆ ಸಿದ್ಧತೆ ಶುರು
Advertisement
Our thoughts are with Mohan’s family and we ask for media to respect their privacy at this tragic time.
(3/3)
— Abu Dhabi Cricket & Sports Hub (@adsportshub) November 7, 2021
ಮೋಹನ್ ಸಿಂಗ್ ಇವತ್ತು ನಿಧನರಾಗಿರುವುದು ನಿಜ. ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾದ ಬಳಿಕ ಪೂರ್ಣ ವಿವರ ನೀಡಲಾಗುತ್ತದೆ. ಅವರು ಸಾವನ್ನಪ್ಪಿರುವುದು ಬಹಳ ದುರದೃಷ್ಟಕರ ಎಂದು ಯುಎಇ ಕ್ರಿಕೆಟ್ ಸಂಸ್ಥೆಯ ಮೂಲವೊಂದು ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.
ಮೋಹನ್ ಸಿಂಗ್ ಅವರಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು. ಅವರ ಸಾವಿಗೆ ಸಂತಾಪ ಸೂಚಿಸಿ ಅಬುಧಾಬಿ ಕ್ರಿಕೆಟ್ ಸಂಸ್ಥೆ ಸರಣಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬುಮ್ರಾ
ಬಿಸಿಸಿಐನ ಮಾಜಿ ಚೀಫ್ ಕ್ಯೂರೇಟರ್ ದಲಜಿತ್ ಸಿಂಗ್ ಅವರು ಮೋಹನ್ ಸಿಂಗ್ ಸಾವಿಗೆ ಆಘಾತ ವ್ಯಕ್ತಪಡಿಸಿದ್ಧಾರೆ. ಭಾರತೀಯ ಕ್ರಿಕೆಟ್‍ನಲ್ಲಿ 22 ವರ್ಷಗಳ ಕಾಲ ಕ್ಯೂರೇಟರ್ ಆಗಿ ಕೆಲಸ ಮಾಡಿರುವ ದಲಜಿತ್ ಸಿಂಗ್ ಅವರ ಜೊತೆ ಮೋಹನ್ ಸಿಂಗ್ ಹಲವು ವರ್ಷಗಳ ಹಿಂದೆ ಕೆಲಸ ಮಾಡಿದ್ದರು. ಮೊಹಾಲಿಯಲ್ಲಿ ದಲಜೀತ್ ಸಿಂಗ್ ಜೊತೆ ಬಹಳ ನಿಕಟವಾಗಿ ಪಿಚ್ ಕ್ಯೂರೇಟರ್ ಆಗಿ ಕೆಲಸ ಮಾಡಿದ್ದ ಇವರು 2000ದ ದಶಕದ ಆರಂಭದಲ್ಲಿ ಮೋಹನ್ ಸಿಂಗ್ ಯುಎಇಗೆ ವಲಸೆ ಹೋಗಿದ್ದರು.