– ಕ್ರಿಸ್‌ಗೇಲ್ ಅಪರೂಪದ ದಾಖಲೆ ಸರಿಗಟ್ಟಿದ ಯುಎಸ್ ಆಟಗಾರ
ಡಲ್ಲಾಸ್: ಟಿ20 ವಿಶ್ವಕಪ್ (T20 World Cup) ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಅಮೆರಿಕ ಕ್ರಿಕೆಟ್ ತಂಡ ಗೆಲುವಿನ ಶುಭಾರಂಭ ಕಂಡಿದೆ. ಆರನ್ ಜೋನ್ಸ್ (Aaron Jones) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಅಮೆರಿಕ ತಂಡವು ಕೆನಡಾ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಅಮೆರಿಕ ತಂಡದ (Cricket USA) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದು ಐತಿಹಾಸಿಕ ಗೆಲುವು ಸಹ ಆಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ (Canada) 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಸಿಡಿಸಿತ್ತು. ಬೃಹತ್ ಮೊತ್ತದ ಗುರಿ ಪಡೆದ ಯುಎಸ್‌ಎ ಕೇವಲ 17.4 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿ ಗೆಲುವಿನ ಖಾತೆ ತೆರೆಯಿತು.
Advertisement
Advertisement
ಚೇಸಿಂಗ್ ಆರಂಭಿಸಿದ ಯುಎಸ್ ತಂಡ 6.3 ಓವರ್‌ಗಳಲ್ಲಿ 42 ರನ್ ಗಳಿಗೆ ಪ್ರಮುಖ 2 ವಿಕೆಟ್ ಕಳೆದುಕೊಂಡಿತ್ತು. ಆದ್ರೆ 3ನೇ ವಿಕೆಟ್‌ಗೆ ಜೊತೆಗೂಡಿದ ಆಂಡ್ರೀಸ್ ಗೌಸ್ ಹಾಗೂ ಆರನ್ ಜೋನ್ಸ್ ಜೋಡಿ 58 ಎಸೆತಗಳಲ್ಲಿ ಬರೋಬ್ಬರಿ 131 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್ ಬಳಿಕ ಐರ್ಲೆಂಡ್ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್!
Advertisement
ಕೈತಪ್ಪಿದ ಶತಕ:
ಆರಂಭಿಕ ಪಂದ್ಯದಲ್ಲೇ ಸ್ಫೋಟಕ ಇನ್ನಿಂಗ್ಸ್ ಕಟ್ಟಿ ತಂಡದ ಗೆಲುವಿಗೆ ಕಾರಣವಾದ ಆರನ್ ಜೋನ್ಸ್ 40 ಎಸೆತಗಳಲ್ಲಿ ಸ್ಫೋಟಕ 96 ರನ್ (10 ಸಿಕ್ಸರ್, 4 ಬೌಂಡರಿ) ಸಿಡಿಸಿ ಶತಕ ವಂಚಿತರಾದರು. ಇದರೊಂದಿಗೆ ಆಂಡ್ರೀಸ್ ಗೌಸ್ 46 ಎಸೆತಗಳಲ್ಲಿ 65 ರನ್ (3 ಸಿಕ್ಸರ್, 7 ಬೌಂಡರಿ), ಮೊನಾಂಕ್ ಪಟೇಲ್ 16 ರನ್ ಗಳಿಸಿದರು.
Advertisement
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕೆನಡಾ ತಂಡ ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೇ ನೀಡಿತ್ತು. ನವನೀತ್ ಧಲಿವಾಲ್44 ಎಸೆತಗಳಲ್ಲಿ 61 ರನ್ (3 ಸಿಕ್ಸರ್, 6 ಬೌಂಡರಿ), ನಿಕೋಲಸ್ ಕಿರ್ಟನ್ 51 ರನ್ (31 ಎಸೆತ, 3 ಬೌಂಡರಿ, 2 ಸಿಕ್ಸರ್) ಚಚ್ಚಿದರೆ, ಶ್ರೇಯಸ್ ಮೊವ್ವ 16 ಎಸೆತಗಳಲ್ಲಿ ಸ್ಫೋಟಕ 32 ರನ್ ಸಿಡಿ ಮಿಂಚಿದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್ ಅಯ್ಯರ್
ಕ್ರಿಸ್‌ಗೇಲ್ ಅಪರೂಪದ ದಾಖಲೆ ಉಡೀಸ್:
ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಆರನ್ ಜೋನ್ಸ್, ಕ್ರಿಸ್‌ಗೇಲ್ ಅವರ ಅಪರೂಪದ ಸಿಕ್ಸರ್ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲೇ 10 ಸಿಕ್ಸರ್ ಸಿಡಿಸುವ ಮೂಲಕ 2007ರಲ್ಲಿ ಈ ಸಾಧನೆ ಮಾಡಿದ ಗೇಲ್ ದಾಖಲೆಯನ್ನ ಸರಿಗಟ್ಟಿದ್ದಾರೆ. ಇದನ್ನೂ ಓದಿ:T20 World Cup: ಸ್ಕಾಟ್‌ಲೆಂಡ್ ಬಳಿಕ ಐರ್ಲೆಂಡ್ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್!
ಟಿ20 ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದವರ ಲಿಸ್ಟ್:
* ಕ್ರಿಸ್ ಗೇಲ್ – 11 ಸಿಕ್ಸರ್ – 2016ರಲ್ಲಿ
* ಕ್ರಿಸ್ ಗೇಲ್ – 10 ಸಿಕ್ಸರ್ – 2007ರಲ್ಲಿ
* ಆರನ್ ಜೋಸ್ – 10 ಸಿಕ್ಸರ್ – 2024ರಲ್ಲಿ