ಮುಂಬೈ: 2024ರ ಟಿ20 ವಿಶ್ವಕಪ್ (T20 World Cup 2024) ವಿಜೇತ ಭಾರತ ತಂಡ ಅದ್ಧೂರಿ ವಿಜಯಯಾತ್ರೆ ಮುಗಿಸಿದ ಬೆನ್ನಲ್ಲೇ ಬಿಸಿಸಿಐ ಭರ್ಜರಿ ಉಡುಗೊರೆ ನೀಡಿ ಸನ್ಮಾನಿಸಿದೆ.
TEAM INDIA – THE CHAMPIONS…!!! pic.twitter.com/JgLNh8cVs2
— Mufaddal Vohra (@mufaddal_vohra) July 4, 2024
ತಾಯ್ನಾಡಿಗೆ ಮರಳಿದ್ದ ಟೀಂ ಇಂಡಿಯಾ ಆಟಗಾರರಿಗೆ ಮುಂಬೈನಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಮುಂಬೈ ಕಡಲತೀರ ನಾರೀಮನ್ ಪಾಯಿಂಟ್‌ನಿಂದ ಆರಂಭಗೊಂಡ ಅದ್ಧೂರಿ ಯಾತ್ರೆ ವಾಂಖೆಡೆ ಕ್ರೀಡಾಂಗಣ ತಲುಪಿತು. ಬಳಿಕ ಟೀಂ ಇಂಡಿಯಾ ಆಟಗಾರರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿದ ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತದ (BCCI Prizemoney) ಚೆಕ್ ವಿತರಣೆ ಮಾಡಿತು. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್ ಶಾ, ಆಟಗಾರರಿಗೆ ಚೆಕ್ ವಿತರಣೆ ಮಾಡಿದರು. ಇದಕ್ಕೂ ಮುನ್ನ ಟೀಂ ಇಂಡಿಯಾ (Team India) ಆಟಗಾರರು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದರು. ಇದನ್ನೂ ಓದಿ: ಅಂದು ಅವಮಾನವಾಗಿದ್ದ ಜಾಗದಲ್ಲೇ ಸನ್ಮಾನ – ನೆನಪಿದೆಯಾ 2007ರ ರೋಮಾಂಚನಕಾರಿ ಕ್ಷಣ!
ರೋ-ಕೊ ಜೋಡಿ ಕಮಾಲ್:
ಮುಂಬೈನಲ್ಲಿ ನಡೆದ ಅದ್ಧೂರಿ ವಿಜಯಯಾತ್ರೆಯಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma), ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಭರ್ಜರಿ ಕಮಾಲ್ ಮಾಡಿದರು. ವಿಜಯೋತ್ಸವ ಪರೇಡ್ ವೇಳೆ ಆಟಗಾರರ ಮಧ್ಯೆ ನಿಂತು ಸಂಭ್ರಮದ ಕಡಲಲ್ಲಿ ತೇಲುತ್ತಿದ್ದ ರೋಹಿತ್ ಶರ್ಮಾರ ಹೆಗಲ ಮೇಲೆ ಕೈಹಾಕಿಕೊಂಡು ಕೊಹ್ಲಿ ಬಸ್ ಮುಂಭಾಗಕ್ಕೆ ಕರೆತಂದರು. ಬಳಿಕ ಇಬ್ಬರೂ ಟ್ರೋಫಿ ಎತ್ತಿ ಹಿಡಿದು ಜೋರಾಗಿ ಘರ್ಜಿಸಿದರು. ಈ ದೃಶ್ಯದ ವೀಡಿಯೋ ತುಣುಕು ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತು. ಇದನ್ನೂ ಓದಿ: ವಿಜಯಯಾತ್ರೆ ಶುರು – ʻವಿಶ್ವʼಗೆದ್ದ ವೀರರನ್ನು ಕಣ್ತುಂಬಿಕೊಂಡ ಅಭಿಮಾನಿಗಳು!
ನಂಬಿಕೆ ಉಳಿಸಿಕೊಂಡ ಕೊಹ್ಲಿ:
ವಿಶ್ವಕಪ್ ಟೂರ್ನಿಯ ಆರಂಭದಿಂದಲೂ ʻರೋ-ಕೊʼ ಆರಂಭಿಕ ಜೋಡಿ ಭರ್ಜರಿ ಕಮಾಲ್ ಮಾಡಿತ್ತು. ಆದ್ರೆ ಆರಂಭಿಕ ಪಂದ್ಯದಿಂದಲೂ ಫಾರ್ಮ್ ಕಳೆದುಕೊಂಡಿದ್ದ ಕಿಂಗ್ ಕೊಹ್ಲಿ ಬಗ್ಗೆ ಅನೇಕರಿಂದ ಟೀಕೆಗಳು ವ್ಯಕ್ತವಾಗುತ್ತಿತ್ತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಾಯಕ ರೋಹಿತ್, ವಿರಾಟ್ ಪರವಾಗಿಯೇ ಮಾತನಾಡುತ್ತಾ ಬಂದಿದ್ದರು. ಬಹುಶಃ ವಿರಾಟ್ ತಮ್ಮ ಆಟವನ್ನು ಫೈನಲ್‌ಗೆ ಉಳಿಸಿಕೊಂಡಿದ್ದಾರೆ ಎಂದು ವಿಶ್ವಾಸದ ನುಡಿಗಳನ್ನಾಡಿದ್ದರು. ಅದರಂತೆ ರೋಹಿತ್ ಶರ್ಮಾ ಅವರ ನಂಬಿಕೆಯನ್ನು ಕೊಹ್ಲಿ ಸುಳ್ಳಾಗಿಸಲಿಲ್ಲ. ಸ್ಫೋಟಕ ಪ್ರದರ್ಶನದೊಂದಿಗೆ ತಾಳ್ಮೆಯ ಆಟವಾಡಿದ ಕೊಹ್ಲಿ 59 ಎಸೆತಗಳಲ್ಲಿ 76 ರನ್ ಗಳಿಸಿದ್ದರು. ಇದು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ 170 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಲ್ಲದೇ ವಿಶ್ವಕಪ್ ಇತಿಹಾಸದಲ್ಲೇ ತಂಡದವೊಂದರ ಗರಿಷ್ಠ ರನ್ ಮೊತ್ತವೂ (176) ಆಯಿತು.
ʻವಿಶ್ವʼ ವಿಜೇತರಿಗೆ ನಮೋ ಅಭಿನಂದನೆ:
ಮುಂಬೈಗೆ ತೆರಳುವ ಮುನ್ನ ಟೀಮ್ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ (Team India Arrival) ಭೇಟಿ ನೀಡಿ ವಿಶ್ವಕಪ್ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜೊತೆಗೆ ಗ್ರೂಫ್ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ (PM Modi) ನಮೋ ನಂ.1 ಎಂದು ಬರೆದ ಟೀಂ ಇಂಡಿಯಾ ಜೆರ್ಸಿಯನ್ನು (Indian Cricket Jersey) ಉಡುಗೊರೆಯಾಗಿ ನೀಡಲಾಯಿತು. ಇದನ್ನೂ ಓದಿ: T20 ವಿಶ್ವಕಪ್ ಗೆಲುವಿನ ಸಂಭ್ರಮ – ಬಿಸಿಸಿಐನಿಂದ ಮೋದಿಗೆ ʻನಮೋ ನಂ.1ʼ ಟೀ ಶರ್ಟ್ ಗಿಫ್ಟ್!