ಸಿಡ್ನಿ: ಟಿ20 ವಿಶ್ವಕಪ್ (T20 World Cup) ಸೂಪರ್-12 ಪಂದ್ಯಗಳು ಆರಂಭವಾಗುವ ಮುನ್ನ ಅತಿಥೇಯ ತಂಡಕ್ಕೆ ಗಾಯದ ಬರೆ ಬಿದ್ದಿದೆ. ಮೀಸಲು ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಆಗಿ ಟಿ20 ವಿಶ್ವಕಪ್‍ಗೆ ಆಯ್ಕೆ ಆಗಿದ್ದ ಜೋಸ್ ಇಂಗ್ಲಿಸ್ (Josh Inglis) ಇದೀಗ ಗಾಯದಿಂದಾಗಿ ಹೊರ ನಡೆದಿದ್ದಾರೆ.
Advertisement
ಇತ್ತ ಜೋಸ್ ಇಂಗ್ಲಿಸ್‍ಗೆ ಬದಲಾಗಿ ಆಸ್ಟ್ರೇಲಿಯಾ (Australia) ತಂಡ ಇತ್ತಿಚೇಗೆ ಭರ್ಜರಿ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಕೆಮರೋನ್ ಗ್ರೀನ್‌ರನ್ನು (Cameron Green) ತಂಡಕ್ಕೆ ಸೇರಿಸಿಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ಮತ್ತಷ್ಟು ಬಲಗೊಂಡಿದೆ. ಜೋಸ್ ಇಂಗ್ಲಿಸ್ ಗಾಲ್ಫ್ ಆಡುವಾಗ ಕೈ ಮುರಿತಕ್ಕೊಳಗಾಗಿದ್ದಾರೆ. ಹಾಗಾಗಿ ಟೂರ್ನಿಯಿಂದ ಹೊರ ಬಿದ್ದಿದ್ದು, ಅವರ ಬದಲಿಗೆ ಗ್ರೀನ್ ಮತ್ತು ನತನ್ ಎಲ್ಲಿಸ್‍ರನ್ನು (Nathan Ellis) ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ತೆರವಾದ KSCA ಅಧ್ಯಕ್ಷ ಹುದ್ದೆ – ಮುಂದಿನ ಬಾಸ್ ಯಾರು?
Advertisement
Advertisement
ಗ್ರೀನ್ ಮತ್ತು ಎಲ್ಲಿಸ್ ಆಸ್ಟ್ರೇಲಿಯಾ ಪರ ಈ ಹಿಂದಿನ ಸರಣಿಗಳಲ್ಲಿ ಮಿಂಚಿದ ಪರಿಣಾಮ ಇದೀಗ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗ್ರೀನ್ ಇತ್ತಿಚೇಗೆ ಆಸ್ಟ್ರೇಲಿಯಾ ತಂಡ ಭಾರತ (India) ಪ್ರವಾಸ ಕೈಗೊಂಡಿದ್ದಾಗ ತಮ್ಮ ಆಲ್‍ರೌಂಡರ್ ಆಟದ ಮೂಲಕ ತಮ್ಮ ತಾಖತ್ ಪ್ರದರ್ಶಿಸಿದ್ದರು. ಹೀಗಾಗಿ ಗ್ರೀನ್‍ರನ್ನು ತಂಡಕ್ಕೆ ಕರೆ ತಂದಿರುವ ಆಸ್ಟ್ರೇಲಿಯಾ ತಂಡ ಭರ್ಜರಿ ತಯಾರಿ ನಡೆಸುತ್ತಿದೆ. ಇದನ್ನೂ ಓದಿ: ಸೂರ್ಯ ಜಸ್ಟ್ ಮಿಸ್ – ತಪ್ಪಿದ ಭಾರೀ ಅನಾಹುತ!
Advertisement
ಹಾಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಈ ಬಾರಿ ತವರಿನಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ತನ್ನ ಮೊದಲ ಪಂದ್ಯವನ್ನು ಶನಿವಾರ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.