ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup) ಅರ್ಹತಾ ಸುತ್ತಿನಲ್ಲಿ ಐರ್ಲೆಂಡ್ (Ireland) ವಿರುದ್ಧ ಸೋತ ವೆಸ್ಟ್ ಇಂಡೀಸ್ (West Indies) ತಂಡ ಟೂರ್ನಿಯಿಂದ ಹೊರಬಿದ್ದಿದೆ.
Advertisement
ಟಿ20 ಕ್ರಿಕೆಟ್‍ನಲ್ಲಿ ಅಪಾಯಕಾರಿ ಆಟಗಾರರನ್ನು ಹೊಂದಿದ್ದಂತ ತಂಡವಾಗಿ ಗುರುತಿಸಿಕೊಂಡಿದ್ದ ವೆಸ್ಟ್ ಇಂಡೀಸ್‍ಗೆ ಸೂಪರ್ 12 ಹಂತಕ್ಕೇರಲು ಐರ್ಲೆಂಡ್ ವಿರುದ್ಧದ ಪಂದ್ಯ ಮಹತ್ವದಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. 147 ರನ್‍ಗಳ ಟಾರ್ಗೆಟ್ ಪಡೆದ ಐರ್ಲೆಂಡ್ 17.3 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 150 ರನ್ ಬಾರಿಸಿ 9 ವಿಕೆಟ್‍ಗಳ ಜಯ ಸಾಧಿಸಿ ಸೂಪರ್ 12 ಹಂತಕ್ಕೆ ಲಗ್ಗೆ ಇಟ್ಟಿದೆ. ಇದನ್ನೂ ಓದಿ: ಗ್ರೀನ್‍ಗೆ ಸಿಕ್ತು ಟಿ20 ವಿಶ್ವಕಪ್ ಗ್ರೀನ್ ಸಿಗ್ನಲ್
Advertisement
Advertisement
ಐರ್ಲೆಂಡ್ ಪರ ಬ್ಯಾಟಿಂಗ್‍ನಲ್ಲಿ ಮಿಂಚಿದ ಪಾಲ್ ಸ್ಟಿರ್ಲಿಂಗ್ (Paul Stirling) ಅಜೇಯ 66 ರನ್ (48 ಎಸೆತ, 6 ಬೌಂಡರಿ, 2 ಸಿಕ್ಸ್) ಮತ್ತು ಲೋರ್ಕನ್ ಟಕರ್ 45 ರನ್ (35 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಗೆಲುವಿನ ರೂವಾರಿಯಾದರು. ಇದನ್ನೂ ಓದಿ: ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ತೆರವಾದ KSCA ಅಧ್ಯಕ್ಷ ಹುದ್ದೆ – ಮುಂದಿನ ಬಾಸ್ ಯಾರು?
Advertisement
ಈ ಮೊದಲು ವಿಂಡೀಸ್ ಪರ ಬ್ರೆಂಡನ್ ಕಿಂಗ್ ಬ್ಯಾಟಿಂಗ್‍ನಲ್ಲಿ ಅಜೇಯ 62 ರನ್ (48 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್‍ಗಳ ಸಾಧಾರಣ ಮೊತ್ತ ಪೇರಿಸಿತು.
ಈ ಪಂದ್ಯವನ್ನು ಜಯಿಸುವ ಮೂಲಕ ಐರ್ಲೆಂಡ್ ಸಂಭ್ರಮಿಸಿದೆ. ಇತ್ತ ಹೀನಾಯವಾಗಿ ಸೋತ ವೆಸ್ಟ್ ಇಂಡೀಸ್ ಮನೆ ದಾರಿ ಹಿಡಿದಿದೆ. ಈ ಹಿಂದೆ 2012 ಮತ್ತು 2016 ರಲ್ಲಿ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಗೆದ್ದಿತ್ತು. ಇದೀಗ ಅರ್ಹತಾ ಸುತ್ತಿನಲ್ಲೇ ಸೋತು ಮುಖಭಂಗ ಅನುಭವಿಸಿದೆ.