ಕ್ಯಾನ್ಬೆರಾ: ಇಂದಿನಿಂದ ಆಸ್ಟ್ರೇಲಿಯಾದಲ್ಲಿ (Australia) ಟಿ20 ವಿಶ್ವಕಪ್ (T20 WorldCup) ಆರಂಭವಾಗುತ್ತಿದ್ದು, ಭಾರತ ಸೇರಿದಂತೆ 16 ತಂಡಗಳು ಭಾಗಿಯಾಗಿವೆ. ಅಕ್ಟೋಬರ್ 16 ರಿಂದ ನವಂಬರ್ 13ರ ವರೆಗೆ ಈ ತಂಡಗಳು ಎರಡು ಹಂತಗಳಲ್ಲಿ ಹಣಾಹಣೆ ನಡೆಸಲಿವೆ.
Advertisement
ಅರ್ಹತಾ ಸುತ್ತಿನ ಎ-ಗುಂಪಿನಲ್ಲಿ ನಮೀಬಿಯಾ, ನೆದರ್‌ಲೆಂಡ್, ಶ್ರೀಲಂಕಾ, ಯುಎಇ ತಂಡಗಳು, ಬಿ-ಗುಂಪಿನಲ್ಲಿ ಐರ್ಲೆಂಡ್, ಸ್ಕಾಟ್‌ಲೆಂಡ್, ವೆಸ್ಟ್ ಇಂಡೀಸ್, ಜಿಂಬಾಬ್ವೆ ತಂಡಗಳು ಸೆಣಸಲಿವೆ. ಇನ್ನೂ ಸೂಪರ್-12 ಸುತ್ತಿನ ಎ-ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಎ-1, ಬಿ2 ತಂಡಗಳು ಹಾಗೂ ಬಿ-ಗುಂಪಿನಲ್ಲಿ ಬಾಂಗ್ಲಾದೇಶ, ಭಾರತ (India), ಪಾಕಿಸ್ತಾನ (Pakistan), ದಕ್ಷಿಣ ಆಫ್ರಿಕಾ, ಬಿ-1, ಎ-2 ತಂಡಗಳು ಸೆಣಸಲಿವೆ.
Advertisement
ಸೂಪರ್-12 ಹಾಗೂ ಅರ್ಹತಾ ಸುತ್ತು ಸೇರಿ 28 ದಿನಗಳಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿವೆ. ವಿಶ್ವಕಪ್ ಗೆಲ್ಲುವ ತಂಡಕ್ಕೆ 13 ಕೋಟಿ ಬಹುಮಾನ ಇರಲಿದ್ದು, ರನ್ನರ್‌ಅಪ್‌ಗೆ 6.59 ಕೋಟಿ ಬಹುಮಾನ ಮೊತ್ತ ಸಿಗಲಿದೆ.
Advertisement
Advertisement
ಯಾರಿಗೆಲ್ಲಾ ಚಾಂಪಿಯನ್ ಪಟ್ಟ?
ಈವರೆಗೆ ನಡೆದ ಟಿ20 ವಿಶ್ವಕಪ್‌ನಲ್ಲಿ 2007ರಲ್ಲಿ ಭಾರತ ವಿಶ್ವಚಾಂಪಿಯನ್ ಆಗಿತ್ತು, 2008ರಲ್ಲಿ ಪಾಕಿಸ್ತಾನ, 2010ರಲ್ಲಿ ಇಂಗ್ಲೆಂಡ್, 2012ರಲ್ಲಿ ವೆಸ್ಟ್ ಇಂಡೀಸ್, 2014ರಲ್ಲಿ ಶ್ರೀಲಂಕಾ, 2016ರಲ್ಲಿ ವೆಸ್ಟ್ ಇಂಡೀಸ್, 2021ರಲ್ಲಿ ಆಸ್ಟ್ರೇಲಿಯಾ ತಂಡಗಳು ವಿಶ್ವಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿವೆ.
ಟಿ20 ವಿಶ್ವಕಪ್ ಕುರಿತು ಮಾತನಾಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma), ಎರಡು-ಮೂರು ವಾರಗಳ ಹಿಂದೆ ಶಮಿ ಅವರಿಗೆ ಕೋವಿಡ್ ಆಗಿತ್ತು. ಅದರ ನಂತರ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA)ಯಲ್ಲಿ ಆರೈಕೆ ಪಡೆದುಕೊಂಡರು. ಕಳೆದ ಹತ್ತು ದಿನಗಳಿಂದ ಅವರು ಬ್ರಿಸ್ಬೇನ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಅವರು ನಮ್ಮೊಂದಿಗೆ ಅಭ್ಯಾಸಕ್ಕೆ ಹಾಜರಾಗಲಿದ್ದಾರೆ. ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಅವರು ಪ್ರತಿದಿನ 3-4 ಅವಧಿಗಳಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಶಮಿ ತಂಡಕ್ಕೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.