ವಿಶಾಖಪಟ್ಟಣ: ವಿಶ್ವಚಾಂಪಿಯನ್ ಆಸ್ಟ್ರೇಲಿಯಾ (Australia) ವಿರುದ್ಧದ ಮೊದಲ ಟಿ20 (T20) ಪಂದ್ಯದಲ್ಲಿ ಟೀಂ ಇಂಡಿಯಾ (Team India) 2 ವಿಕೆಟ್ ಗಳ ಜಯ ಗಳಿಸಿದೆ.
ಇಲ್ಲಿನ ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 209ರನ್ ಗಳ ಬೃಹತ್ ಗುರಿಯನ್ನು ಭಾರತ ತಂಡ ನಿಗಧಿತ ಓವರ್‌ಗಳಲ್ಲಿ 2 ವಿಕೆಟ್ ಗಳ ಅಂತರದ ರೋಚಕ ಜಯ ದಾಖಲಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಆಗ್ತಾರಾ ವಿವಿಎಸ್ ಲಕ್ಷ್ಮಣ್?
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಜೋಶ್ ಇಂಗ್ಲಿಸ್ (110 ರನ್, 50 ಎಸೆತ, 11 ಬೌಂಡರಿ, 8 ಸಿಕ್ಸರ್), ಸ್ಟೀವನ್ ಸ್ಮಿತ್ (52 ರನ್, 41 ಎಸೆತ, 8 ಬೌಂಡರಿ) ಬಿರುಸಿನ ಬ್ಯಾಟಿಂಗ್‍ನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208ರನ್ ಗಳಿಸಿತ್ತು.
Advertisement
Advertisement
ಟೀಂ ಇಂಡಿಯಾ ಪರ ಅರ್ಷ್‍ದೀಪ್ ಸಿಂಗ್ (4-0-41-0), ಪ್ರಸಿದ್ದ ಕೃಷ್ಣ (4-0-50-1), ರವಿ ಬಿಷ್ಣೋಯಿ (4-0-54-1), ಅಕ್ಷರ್ ಪಟೇಲ್ (4-0-32-0), ಮುಕೇಶ್ ಕುಮಾರ್ (4-0-29-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
Advertisement
209 ರನ್‍ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, ನಾಯಕ ಸೂರ್ಯ ಕುಮಾರ್ ಯಾದವ್ (80 ರನ್, 42 ಎಸೆತ, 9 ಬೌಂಡರಿ, 4 ಸಿಕ್ಸರ್), ಇಶಾನ್ ಕಿಶನ್ (58 ರನ್, 39 ಎಸೆತ, 2 ಬೌಂಡರಿ, 5 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್‍ನಿಂದ ಗೆಲುವನ್ನು ಮುಡಿಗೇರಿಸಿಕೊಂಡಿತು. ಇದನ್ನೂ ಓದಿ: ಮೊದಲ ಟಿ20 ಪಂದ್ಯದಲ್ಲೇ ಭಾರತಕ್ಕೆ ಬೃಹತ್ ಗುರಿ ನೀಡಿದ ಆಸೀಸ್