ಬೆಂಗಳೂರು: ರಸ್ತೆಯನ್ನು ದುರಸ್ತಿ ಮಾಡದ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ರಸ್ತೆಯಲ್ಲಿ ಭತ್ತದ ಪೂರು ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕು ವರ್ಷದ ಹಿಂದೆ ಕಾವೇರಿ ನೀರಾವರಿ ಪೈಪ್ ಲೈನ್ ಹಾಗೂ ಒಳಚರಂಡಿಗೆ ರಸ್ತೆಯನ್ನ ದುರಸ್ತಿ ಮಾಡಲಾಗಿತ್ತು, ದುರಸ್ತಿ ಕೆಲಸ ಮುಗಿದು ವರ್ಷಗಳೇ ಕಳೆದರು ರಸ್ತೆ ಮಾಡದ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!
Advertisement
Advertisement
ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾಡ್9ನ ಮೆದರಹಳ್ಳಿಯಲ್ಲಿ ಜನರು ಕೆಸರಿನಂತೆ ಇರುವ ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನ ಈ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಸ್ಲಾಂಪುರದಲ್ಲಿ ನೂತನ ಈದ್ಗಾ ಲೋಕಾರ್ಪಣೆ
Advertisement
Advertisement
ಮಳೆ ಬಂದರೆ ಸಾಕು ಹಳ್ಳಕೊಳ್ಳದಂತಿರುವ ಈ ಕೆಸರಿನಂತ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ. ಮಕ್ಕಳು ವೃದ್ಧರು, ಮಹಿಳೆಯರು ಜಾರು ಬಿದ್ದು, ಎದ್ದ ಪ್ರಸಂಗಗಳು ನಿತ್ಯದ ಗೋಳಾಗಿದೆ. ಈಗಾಗಲೇ ಸಾಕಷ್ಟು ಮಂದಿ ಸ್ಥಳೀಯರು ಶಾಸಕ ಹಾಗೂ ಅಧಿಕಾರಿಗಳಿಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈ ಮುಖ್ಯ ರಸ್ತೆ ಮೆದರಹಳ್ಳಿ ಯಿಂದ ಚಿಕ್ಕಬಾಣವಾರ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿನಿತ್ಯ ಸಾವಿರಾರು ಜನರು ಓಡಾಡುವ ಮುಖ್ಯ ರಸ್ತೆಯಲ್ಲಿ ನರಕಯಾತನೆಯಾಗಿ ಪರಿಗಣಿಸಿದೆ.
ಟಿ.ದಾಸರಹಳ್ಳಿಯ ಶಾಸಕ ಆರ್. ಮಂಜುನಾಥ್ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ರಸ್ತೆ ದುರಸ್ತಿ ಮಾಡಿ ಟಾರ್ ಹಾಕುವಂತೆ, ರಸ್ತೆಯಲ್ಲಿ ಭತ್ತದ ಪೈರನ್ನ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.